ಮುಂದಗೋಡ

ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕು:ಡಾ.ಎಚ್‌.ಎಫ್‌.ಇಂಗಳೆ

ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕು:ಡಾ.ಎಚ್‌.ಎಫ್‌.ಇಂಗಳೆ

ಮುಂಡಗೋಡ: ಕಣ್ಣಿನ ದೃಷ್ಟಿಯ ಅನುಕೂಲ ಮಾಡಿಕೊಡಲು ಸಂಘ-ಸಂಸ್ಥೆ ಹಾಗೂ ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತವೆ ಎಲ್ಲರೂ ಇವುಗಳ ಪ್ರಯೋಜನ ಪಡೆಯಬೇಕು ಎಂದು ಪಟ್ಟಣದ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಎಚ್‌.ಎಫ್‌.ಇಂಗಳೆ ಹೇಳಿದರು.  

ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ವಿ.ಆರ್‌.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‌ ಹಳಿಯಾಳ, ಸಿಬಿಡಿಆರ್‌ಸೆಟಿ, ವಿಶ್ವಸೇವಾ ಸಮಿತಿ, ಪಿಡಿಜಿ ಸುಬ್ಬರಾವ್ ಕಾಸರಗೋಡ ಮೆಮೋರಿಯಲ್ ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಕಾರವಾರ ಮತ್ತು ತಾಲೂಕಾ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಇಳಿ ವಯಸ್ಸಿನ ಅನೇಕರಿಗೆ ಕಣ್ಣಿನ ಪೊರೆ ಬರುವುದರಿಂದ ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡಿಕೊಳ್ಳಲು ಅವರು ಕಷ್ಟ ಪಡಬೇಕಾಗುತ್ತದೆ ಎಂದರು. ಸಿಬಿಡಿಆರ್‌ಸೆಟಿ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ಅಧ್ಯಕ್ಷತೆ ವಹಿಸಿ ಮಾತನಾಡಿ ವಿ.ಆರ್‌.ಡಿ.ಎಂ. ಟ್ರಸ್ಟ್‌ನ ಅಧ್ಯಕ್ಷ ಆರ್‌.ವಿ.ದೇಶಪಾಂಡೆ ಅವರ ಕನಸಿನಂತೆ ಗ್ರಾಮೀಣ ಭಾಗದ ನಿರುದ್ಯೋಗ ಯುವಕ-ಯುವತಿಯರಿಗೆ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡುವುದು ಸಮಾಜದಲ್ಲಿ ಶಿಕ್ಷಣ ಹಾಗು ಆರೋಗ್ಯ ಕ್ಷೇತ್ರದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದೆ ಎಂದರು.  

ಕಣ್ಣಿನ ತಜ್ಞ ಡಾ.ಎ.ಜಿ.ವಸ್ತ್ರದ, ರೋಟರಿ ಆಸ್ಪತ್ರೆಯ ಗೀರೀಶ ಧಾರೇಶ್ವರ, ತಾಲೂಕು ಆಸ್ಪತ್ರೆ ನೇತ್ರ ಸಹಾಯಕ ಮಾರುತಿ, ಸಿಬಿಡಿಆರ್‌ಸೆಟಿಯ ಯೋಜನಾಧಿಕಾರಿ ಮಹಾಬಲೇಶ್ವರ ನಾಯ್ಕ ಉಪಸ್ಥಿತರಿದ್ದರು. ಶಾಂತಕುಮಾರ ನಿರ್ವಹಿಸಿದರು. ಈರಯ್ಯಾ ಚಿಕ್ಕಮಠ ವಂದಿಸಿದರು. ಶಿಬಿರದಲ್ಲಿ ಭಾಗವಹಿಸಿದ 135 ಫಲಾನುಭವಿಗಳ ಪೈಕಿ 88 ಫಲಾನುಭವಿಗಳಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಲಾಯಿತು. 


ಸುದ್ದಿ ಓದಿ