ಬಳ್ಳಾರಿ

ಪ್ರೊ.ಶಶಿಕಾಂತ ಉದಿಕೇರಿ ಮೌಲ್ಯಮಾಪನ ಕುಲಸಚಿವರು

ಪ್ರೊ.ಶಶಿಕಾಂತ ಉದಿಕೇರಿ ಮೌಲ್ಯಮಾಪನ ಕುಲಸಚಿವರು

ಬಳ್ಳಾರಿ 12: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಸಚಿವರು (ಮೌಲ್ಯಮಾಪನ)ರಾಗಿ ಪ್ರೊ.ಶಶಿಕಾಂತ.ಎಸ್.ಉದಿಕೇರಿ ಬುಧವಾರದಂದು ಅಧಿಕಾರವನ್ನು ವಹಿಕೊಂಡಿದ್ದಾರೆ.

ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಕೀಟಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ. ಶಶಿಕಾಂತ ಎಸ್. ಉದಿಕೇರಿ ಅವರನ್ನು ಸರ್ಕಾರವು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಕುಲಸಚಿವರು(ಮೌಲ್ಯಮಾಪನ) ರಾಗಿ ನೇಮಿಸಿದೆ. ಈ ಹಿಂದೆ ಕಾರ್ಯಭಾರ ವಹಿಸಿಕೊಂಡಿದ್ದ (ಮೌಲ್ಯ ಮಾಪನ)ಕುಲಸಚಿವರಾದ ಪ್ರೊ.ರಮೇಶ್.ಕೆ ಅವರಿಂದ ಅಧಿಕಾರ ವಹಿಸಿಕೊಂಡಿದ್ದಾರೆ.

ಸುದ್ದಿ ಓದಿ