ಭ್ರಷ್ಟಾಚಾರ ರಹಿತ ಸಮಾಜ ನಿರ್ಮಿಸಲು ಮುಂದಾಗಿ
ಲೋಕದರ್ಶನವರದಿ
ಕಂಪ್ಲಿ21: ದೇಶದಲ್ಲಿ ಭ್ರಷ್ಟಾಚಾರ ತೂಲಗಿಸಲು ವಿದ್ಯಾವಂತ ಯುವಕರು ಉನ್ನತ ಶಿಕ್ಷಣ ಪಡೆದು ಉನ್ನತ ಅಧಿಕಾರಿಯಾಗುವುದರ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಭ್ರಷ್ಟಾಚಾರರಹಿತ ಸಮಾಜ ನಿಮರ್ಿಸುವಲ್ಲಿ ಮುಂದಾಗಬಹುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು. ಕಂಪ್ಲಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ. ಗ್ರಾಮೀಣ ಮತ್ತು ನಗರ ಭಾಗದ ಸರಕಾರಿ ಮತ್ತು ಖಾಸಗಿ ಕಾಲೇಜಿನ ಬಡಮಕ್ಕಳ ವಿದ್ಯಾಥರ್ಿಗಳಿಗೆ ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ಶನಿವಾರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಸ್ವತಃ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುವ ವಿದ್ಯಾಥರ್ಿಗಳಿಗೆ ಶಿಕ್ಷಣಕ್ಕಾಗಿ ಮೂಲಭೂತ ಸೌಲಭ್ಯಗಳನ್ನು ನಿರಂತರ ಒದಗಿಸಲಾಗುವದು. ತಂದೆ, ತಾಯಿಗಳು ದೇವರ ಸಮಾನ ಅವರನ್ನು ಗೌರವದಿಂದ ಕಾಣಬೇಕು. ಮುಪ್ಪಿನ ಕಾಲದಲ್ಲಿ ಸೇವೆ ಮಾಡಿ. ಯುವಕರಿಂದ ಮಾತ್ರ ಸಮಾಜವನ್ನು ತಿದ್ದಲು ಸಾಧ್ಯ ಪ್ರಸ್ತುತ ರಾಜಕಾರಣ ಹಣವುಳ್ಳ ಪ್ರಭಾವಿಗಳ ಕೈಗೆ ಸಿಕ್ಕು ಅವರ ಇಷ್ಟದಂತೆ ಸಾಗಿದೆ. ವಿದ್ಯಾವಂತ ಯುವಕರು ರಾಜಕೀಯ ಕ್ಷೇತ್ರಕ್ಕೆ ಧುಮುಕಿ ಸಮಾನತೆಯುಳ್ಳ, ಭ್ರಷ್ಟರಹಿತ ಸಮಾಜ ನಿಮರ್ಿಸಲು ಮುಂದಾಗಬೇಕು. ತಂದೆ ತಾಯಿಗಳ ಆಶೋತ್ತರ ಅರಿತು ಉನ್ನತ ಗುರಿ ತಲುಪಲು ಸದಾ ಯತ್ನಿಸಬೇಕು.
ನಾನು ಶಾಸಕನಾದ ನಂತರ ಮೂರಾಜರ್ಿ ವಸತಿ ಶಾಲೆಗೆ 9ಎಕರೆ ಜಮೀನು ಮೀಸಲಿರಿಸಿದ್ದಲ್ಲದೆ ಶಿಕ್ಷಣಕ್ಕಾಗಿ ಸದಾ ಶ್ರಮಿಸಲಾಗುವುದು ಎಂದರು 2019ಮತ್ತು 2020ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಫೀಜಾ ಬೇಗಂ, ಫರ್ಹಾನ ತಾಜ್ ಪವಿತ್ರ ಸೇರಿ ಅನೇಕರು ಮಾತನಾಡಿ ತಂದೆ,ತಾಯಿ ಮತ್ತು ಉಪನ್ಯಾಸಕರ ಸಹಕಾರದಿಂದ ಅತಿ ಹೆಚ್ಚು ಅಂಕತರಲು ಸಾಧ್ಯವಾಯಿತು ಕಂಪ್ಲಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪ್ರತಿಭಾ ಪುರಸ್ಕಾರ ಶಾಸಕ ಗಣೇಶರವರು ಮಾಡುತ್ತಿರವುದು ತುಂಭಾ ಸಂತೋಷ ವಾಗಿದೆ. ಮುಂದಿನ ಶಿಕ್ಷಣಕ್ಕಾಗಿ ಸಹಾಯ ಕೇಳಿದರು ಈ ಸಂದರ್ಭದಲ್ಲಿ ಶಾಸಕರು ಸಹಾಯ ನೀಡುವುದಾಗಿ ಭರವಸೆ ನೀಡಿದರು.
ಅಲ್ಲದೆ, ಗಂಗಾವತಿಯ ದೇವಸಿರಿ ಚಾರಿಟಬಲ್ ಟ್ರಸ್ಟ್ನಿಂದ ಸಹಾಯ ನೀಡುವುದಾಗಿ ಟ್ರಸ್ಟ್ ಸಿಬ್ಬಂದಿ ಎಂ.ಬಸವರಾಜ ಹೇಳಿದರು. ಕಾಲೇಜಿನ ಪ್ರಾಚಾರ್ಯರು ಮಾತನಾಡಿ. ಜನಪ್ರೀಯ ಶಾಸಕರಾದ ಜೆ.ಎನ್ ಗಣೇಶ ರವರು ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಂಪ್ಲಿ ಕ್ಷೇತ್ರದಲ್ಲಿ ದ್ವೀತಿಯ ಪಿಯೂಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಗೌರವ ಸಲ್ಲಿಸಿಸುತ್ತಿರುವುದು ಸಂತೋಷವಾಗಿದೆ ಎಂದರು ಫೀಜಾ ಬೇಗಂ, ಫರ್ಹಾನ ತಾಜ್, ಹೇಮಲತಾ, ಸಹನಾ,ಜಿ.ವಾಣಿ.ಜಿ.ಚೈತ್ರ. ನೇತ್ರಾವತಿ ಬಳ್ಳಾರಿ ಸುಮಲತ.ವಾಲ್ಮೀಕಿ ಉಮಾದೇವಿ. ನೀಲಾವತಿ.ಆರ್ ಪೂಜಾ.ವಿ.ಹೋನ್ನುರಬಿ.ತಾಯಮ್ಮ.ಟಿ.ಸರಸ್ವತಿ.ಡೆಂಗಿಪ್ರೀಯಾಂಕ ತೇಜಸ್ವಿನಿ,ಪಿ.ಯಶಸ್ವೀನಿ ಹೊನ್ನೂರಬೀ, ಬಿ.ಚೈತ್ರಾ, ಅಮೃತಾ, ಸುಮತಿ, ಪವಿತ್ರಾ ಸರಕಾರಿ ಎಮೀಗನೂರು ಸಲೀಮ ದೊಡ್ಡ ಬಸಮ್ಮ ಕೊನೆಮನೆ ರಹೀಮ ಬಿ.ಲಕ್ಷೀಸೇರಿ 25ವಿದ್ಯಾಥರ್ಿಗಳಿಗೆ ಬೆಳ್ಳಿ ಕ್ಯಾನ್ಸ ನೀಡಿ ಪ್ರತಿಭಾ ಪುರಸ್ಕಾರ ಗೌರವ ಸಲ್ಲಿಸಲಾಯಿತು.
ತಾಪಂ ಸದಸ್ಯ ಕೆ.ಷಣ್ಮುಖಪ್ಪ, ಉಪ ಪ್ರಾಚಾರ್ಯ ಎಸ್.ಜಿ.ಚಿತ್ರಗಾರ, ನಿವೃತ್ತ ಪ್ರಾಚಾರ್ಯ ಎಂ.ಚಂದ್ರಶೇಖರ್, ಪ್ರಾಚಾರ್ಯರಾದ ಜಿ.ಮಹಾಬಲೇಶ್ವರಪ್ಪ, ಕುಮಾರಸ್ವಾಮಿ, ಬಿ.ಮಲ್ಲಿನಾಥ, ವಾಮದೇವಮೂತರ್ಿ ಇತರರು ಇದ್ದರು.