ಮನರಂಜನೆ

ಸಮೀರ್ ವಾಂಖೆಡೆ ವಿರುದ್ಧ ತನಿಖೆ ; ಮತ್ತೊಂದು ತಿರುವು ಪಡೆದ ಆರ್ಯನ್ ಖಾನ್ ಡ್ರಗ್ ಕೇಸ್

ಸಮೀರ್ ವಾಂಖೆಡೆ ವಿರುದ್ಧ ತನಿಖೆ ; ಮತ್ತೊಂದು ತಿರುವು ಪಡೆದ ಆರ್ಯನ್ ಖಾನ್ ಡ್ರಗ್ ಕೇಸ್

ಮುಂಬೈ, ಅ 25   ಕ್ರೂಸ್ ಡ್ರಗ್ ಕೇಸ ನಲ್ಲಿ 25 ಕೋಟಿ ರೂಪಾಯಿ ವಸೂಲಿ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಆರ್ಯನ್ ಖಾನ್ ಡ್ರಗ್ ಕೇಸ್ ವಿಚಾರಣೆ ಮಾಡುತ್ತಿರುವ ಎನ್ ಸಿ ಬಿ ವಲಯ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಆಂತರಿಕ ಜಾಗೃತದಳದಿಂದ ತನಿಖೆಗೆ ಆದೇಶಿಸಲಾಗಿದೆ.
ಆರ್ಯನ್ ಖಾನ್ ಬಿಡುಗಡೆ ಮಾಡಲು ಸಮೀರ್ ವಾಂಖೆಡೆ 25 ಕೋಟಿ ರೂಪಾಯಿ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಎನ್ ಸಿ ಬಿಯ ಉಪ ಮಹಾ ನಿರ್ದೇಶಕ ಮತ್ತು ಏಜೆನ್ಸಿಯ ಮುಖ್ಯ ಜಾಗೃತ ಅಧಿಕಾರಿ ಜ್ಞಾನೇಶ್ವರ್ ಸಿಂಗ್, ತನಿಖೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ನಟ ಶಾರುಖ್ ಖಾನ್ ಪುತ್ರನ ಡ್ರಗ್ ಕೇಸ್ ತನಿಖಾ ಹಂತದಲ್ಲಿದೆ. ಈ ಸಂದರ್ಭದಲ್ಲಿ ಸಮೀರ್ ವಾಂಖೆಡೆ, ಹುದ್ದೆಯಲ್ಲಿ ಇರುತ್ತಾರೆ ಎಂಬ ಬಗ್ಗೆ ಜ್ಞಾನೇಶ್ವರ್ ಅವರಿಗೆ ಪ್ರಶ್ನಿಸಿದಾಗ, ತನಿಖೆ ಇಂದು ಆರಂಭಗೊಂಡಿದೆ. ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ನೀಡಲ್ಲ. ಸ್ವತಂತ್ರ ಸಾಕ್ಷಿಯೊಬ್ಬರು ವಸೂಲಿ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಮಾಹಿತಿ ಹೊರ ಹಾಕಿದ್ದಾರೆ. ಈ ವಿಚಾರ ಬೆಳಕಿಗೆ ಬಂದ ಮೇಲೆ ಸಮೀರ್ ವಾಂಖೆಡೆ ವಿರುದ್ಧ ಆಂತರಿಕ ವಿಚಾರಣೆ ನಡೆಸಲಾಗುತ್ತಿದೆ. ಸತ್ಯಾಸತ್ಯತೆಯನ್ನು ಅರಿತು ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಅಂತಾ ಜ್ಞಾನೇಶ್ವರ್ ಸಿಂಗ್ ತಿಳಿಸಿದರು.
ಇದಕ್ಕೂ ಮುನ್ನ ಸಮೀರ್ ವಾಂಖೆಡೆ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ಅಫಿಡವಿಟ್ ಸಲ್ಲಿಸಿದರು. ಡ್ರಗ್ ಪ್ರಕರಣ ದುರ್ಬಲಗೊಳಿಸಲು ಈ ರೀತಿ ಸೃಷ್ಟಿ ಮಾಡಲಾಗುತ್ತಿದೆ. ಎಲ್ಲ ರೀತಿಯ ತನಿಖೆಗೆ ತಾನು ಸಿದ್ಧ. ತನಿಖೆ ವೇಳೆ ತನಗೆ ಧಮ್ಕಿ ಹಾಕಲಾಗುತ್ತಿದೆ. ತನ್ನ ಹಾಗೂ ಕುಟುಂಬದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಅಂತಾ ಮುಂಬೈ ಎನ್ ಸಿ ಬಿ ವಲಯ ಅಧಿಕಾರಿ ಸಮಿರ್ ವಾಂಖೆಡೆ ತಿಳಿಸಿದ್ದಾರೆ.

ಸುದ್ದಿ ಓದಿ