ವಿಜಯಪುರ

ಪ್ರಿಯಾಂಕಾ “ರಾಷ್ಟ್ರ ಮಟ್ಟದ ಹಾಕಿ ತಂಡಕ್ಕೆ ಆಯ್ಕೆ”

ಪ್ರಿಯಾಂಕಾ “ರಾಷ್ಟ್ರ ಮಟ್ಟದ ಹಾಕಿ ತಂಡಕ್ಕೆ ಆಯ್ಕೆ”

ಲೋಕದರ್ಶನ ವರದಿ 

  


ಪ್ರಿಯಾಂಕಾ “ರಾಷ್ಟ್ರ ಮಟ್ಟದ ಹಾಕಿ ತಂಡಕ್ಕೆ ಆಯ್ಕೆ” 


ವಿಜಯಪುರ 27: ನಗರದ ಪ್ರತಿಷ್ಠಿತ ವಿ. ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜು, ವಿಜಯಪುರದ ವಿದ್ಯಾರ್ಥಿನಿ  ಪ್ರಿಯಾಂಕಾ ಸುಭಾಸ ಪವಾರ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು,  ರಾಷ್ಟ್ರ ಮಟ್ಟದ ಪದವಿ ಪೂರ್ವ ಕಾಲೇಜುಗಳ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದಾಳೆ. ದಿನಾಂಕ   ಬಳ್ಳಾರಿಯಲ್ಲಿ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಹಾಕಿ ಪಂದ್ಯಗಳು ಜರುಗಿದ್ದವು. ಈ ಆಯ್ಕೆಯಲ್ಲಿ ವಿ. ಭ. ದರಬಾರ ಕಾಲೇಜಿನಿಂದ ಭಾಗವಹಿಸಿ ರಾಷ್ಟ್ರ ತಂಡಕ್ಕೆ ಆಯ್ಕೆಯಾಗಿದ್ದು ದಿನಾಂಕ 02-01-2026 ರಿಂದ 07-01-2026 ರವರೆಗೆ ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್‌ನಲ್ಲಿ ಪದವಿ ಪೂರ್ವ ಕಾಲೇಜುಗಳ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಗಳು ನಡೆಯಲಿದ್ದು ಈ ಪಂದ್ಯಾವಳಿಯಲ್ಲಿ ನಮ್ಮ ಕರ್ನಾಟಕ ರಾಜ್ಯದ ಪದವಿ ಪೂರ್ವ ಕಾಲೇಜ ತಂಡಕ್ಕೆ ಆಯ್ಕೆಯಾಗಿದ್ದಾಳೆ. 

ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಅದ್ಯಕ್ಷರಾದ ಶ್ರೀ ರಾಜೇಶ ಆರ್‌. ದರಬಾರ, ಗೌರವ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ ಎಸ್‌. ಉಡುಪಿಕರ, ಜಂಟಿ ಕಾರ್ಯದರ್ಶಿಗಳಾದ ಶ್ರೀ ಸೋಮನಗೌಡ ಆರ್‌. ಪಾಟೀಲ (ಸಾಸನೂರ) ಮತ್ತು ಸಮನ್ವಯ ಅಧಿಕಾರಿಗಳಾದ ಡಾಽಽ ವಿನಾಯಕ ಬಿ. ಗ್ರಾಮಪುರೋಹಿತ ಹಾಗೂ ಪ್ರಾಚಾರ್ಯರಾದ ಶ್ರೀ ಟಿ. ಆರ್‌. ಕುಲಕರ್ಣಿ, ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ಗಣೇಶ ಗುನ್ನಾಪೂರ ಹಾಗೂ ಬೋದಕ ಮತ್ತು ಬೋದಕೇತರ ಸಿಬ್ಬಂದಿಯವರು ಈ ಸಾಧನೆಯನ್ನು ಅಭಿನಂದಿಸಿದ್ದಾರೆ. 


ಸುದ್ದಿ ಓದಿ