ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಸೋಮನಗೌಡ
ಗೊಟಖಂಡಕಿಯಲ್ಲಿ 22 ಕೋಟಿ ವೆಚ್ಚದ ಇಂದಿರಾಗಾಂಧಿ ವಸತಿ ಶಾಲೆ ಲೋಕಾರೆ್ಣ
ತಾಳಿಕೋಟಿ 29: ಗ್ರಾಮೀಣ ಭಾಗದಲ್ಲಿರುವ ಬಡಕುಟುಂಬಗಳ ಮಕ್ಕಳು ನಗರ ಪ್ರದೇಶಗಳಿಗೆ ಬಂದು ಕಲಿಯುವುದು ಕಷ್ಟವಾಗುತ್ತದೆ. ಅವರ ಈ ತೊಂದರೆಯನ್ನು ನಿವಾರಿಸಲು ಸರಕಾರ ಇಂಥಹ ವಸತಿ ಶಾಲೆಗಳನ್ನು ಆರಂಭಿಸಿದೆ. ನನ್ನ ಕ್ಷೇತ್ರದಲ್ಲಲಿ ಎರಡು ಶಾಲೆಗಳನ್ನು ಆರಂಭಿಸಲಾಗಿದೆ. ನಮ್ಮ ಸರಕಾರ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಿದೆ ಎಂದು ದೇ.ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.
ತಾಲೂಕಿನ ಗೊಟಖಂಡಕಿ ಗ್ರಾಮದಲ್ಲಿ ಸರಕಾರ 22 ಕೋಟಿ ಅನುದಾನದಲ್ಲಿ ನಿರ್ಮಿಸಲ್ಪಟ್ಟಿರುವ ಇಂದಿರಾಗಾಂಧಿ ವಸತಿ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟನೆ ನಂತರ ಇಲಾಖೆಯ ವತಿಯಿಂದ ಹಮ್ಮಿಕೊಂಡ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಶಾಲೆಯಲ್ಲಿ ಕಲಿಯುತ್ತಿರುವ ಸುಮಾರು 250 ಮಕ್ಕಳಿಗೆ ಸ್ವಂತ ಶಾಲಾ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಶಾಲೆಯನ್ನು ನಡೆಸಲಾಗುತ್ತಿತ್ತು. ಇದರಿಂದ ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ನಾನು ವಿಶೇಷ ಕಾಳಜಿ ವಹಿಸಿ ಸರಕಾರದಿಂದ ಅನುದಾನ ತಂದು ಈ ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದೇನೆ. ಇದು ಶೇ. 75 ರಷ್ಟು ಪ.ಪಂ. ದ ಮಕ್ಕಳಿಗೆ ಅವಕಾಶ ಹೊಂದಿರುವ ಶಾಲೆಯಾಗಿದೆ. ಈ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬುದು ನಮ್ಮ ಸರಕಾರದ ಕಳಕಳಿ. ಇದು ಎಲ್ಲ ಸವಲತ್ತುಗಳನ್ನು ಹೊಂದಿರುವ ಸುಸಜ್ಜಿತವಾದ ಕಟ್ಟಡ. ಇದರ ಸ್ವಚ್ಛತೆ ಹಾಗೂ ಸುರಕ್ಷತೆ ಇಲ್ಲಿರುವ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ.
ಇಲ್ಲಿದ್ದು ಕಲಿಯುವ ಮಕ್ಕಳು ತಮ್ಮ ಗಮನವನ್ನು ಸಂಪೂರ್ಣವಾಗಿ ಓದಿನೆಡೆಗೆ ಕೇಂದ್ರಿಕರಿಸಿ ಉತ್ತಮ ಭವಿಷ್ಯವನ್ನು ನಿರ್ಮಿಸಲು ಪ್ರಯತ್ನಿಸಬೇಕು. ಇಲ್ಲಿ ನೀರಿನ ಸ್ವಲ್ಪ ತೊಂದರೆ ಇದೆ ಅದನ್ನೂ ಆದಷ್ಟು ಬೇಗ ನಿವಾರಿಸಲಾಗುವುದು ಎಂದರು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಸಂಗನಬಸಮ್ಮ ಆಲ್ಯಾಳ, ಗಣ್ಯರಾದ ಸಿವಯ್ಯ ಹಿರೇಮಠ, ಶಿವರಾಜಗೌಡ ಪಾಟೀಲ, ಮಾಜಿ ಅಧ್ಯಕ್ಷ ಶಿವನಗೌಡ ಬಿರಾದಾರ, ಗ್ರಾಪಂ ಸದಸ್ಯರಾದ ಶ್ರೀಕಾಂತ ಚೌಧರೊ, ಹಣಮಂತ ತಳ್ಳೊಳ್ಳಿ, ಪ್ರಾಂಶುಪಾಲ ಚಂದ್ರಶೇಖರ ಸಜ್ಜನ, ನಿಲಯಪಾಲಕರಾದ ಬಾಬುಗೌಡ ಬಿರಾದಾರ, ಸೋಮರಡ್ಡಿ, ದಯಾನಂದ, ಎಇಇ ಅರುಣಕುಮಾರ ಮಾಳಟ್ಟಿ, ಎಇ ಸದಾಶಿವ ಮನಗೂಳಿ, ಶಿಕ್ಷಕ ಎಂ.ಎನ್. ಬಾಗವಾನ, ಮುಖಂಡರಾದ ಸಂಗನಗೌಡ ಹೆಗರಡ್ಡಿ, ಸೋಮನಗೌಡ ಹಾದಿಮನಿ, ಬಸನಗೌಡ ಬಿರಾದಾರ (ಟಿಪಿ), ರಾಜುಗೌಡ ಇಬ್ರಾಹಿಂಪೂರ, ರಾಮನಗೌಡ ಬಿರಾದಾರ (ಮಾಜಿ ಸೈನಿಕ), ಗುರುಗೌಡ ಗುರಡ್ಡಿ, ಶರಣಗೌಡ ಪಾಟೀಲ, ಮುತ್ತುಗೌಡ ಮಾಳಿ, ಸಾಹೇಬಗೌಡ ಬಿರಾದಾರ, ಶರಣಗೌಡ ನಾಗರಡ್ಡಿ, ಸೈಯದಅಹ್ಮದ, ಸಾಯಿಪ್ರಕಾಶ ಇದ್ದರು.