ಶಿಗ್ಗಾವ್

ಜೀವನದಲ್ಲಿ ಕಲೆ, ಸಂಸ್ಕೃತಿಗೆ ಮಹತ್ವ ನೀಡಿ: ರುದ್ರಗೌಡ ಪಾಟೀಲ

ಜೀವನದಲ್ಲಿ ಕಲೆ, ಸಂಸ್ಕೃತಿಗೆ ಮಹತ್ವ ನೀಡಿ: ರುದ್ರಗೌಡ ಪಾಟೀಲ

ಶಿಗ್ಗಾವಿ 12:  ಕಲೆ ಮತ್ತು ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಭಾರತೀಯ ಸಂಸ್ಕೃತಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಬಹುದು ಎಂದು ಹೊಸೂರ ಬಸವಣ್ಣ ದೇವಸ್ಥಾನದ ಕಮಿಟಿಯ ಅಧ್ಯಕ್ಷ ರುದ್ರಗೌಡ ಪಾಟೀ¯ ಹೇಳಿದರು.

ತಾಲೂಕಿನ ಹೊಸುರ ಗ್ರಾಮದಲ್ಲಿನ ಬಸವಣ್ಣ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾವೇರಿ, ಬಸವಣ್ಣ ದೇವರ ದತ್ತಿ ಸಹಯೊಗದಲ್ಲಿ ಶಿವಾನುಭವದ ನಿಮಿತ್ಯವಾಗಿ ಹಮ್ಮಿಕೊಂಡ ಸುಗಮ ಸಂಗೀತ, ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶಿಯ ಕಲೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗಬೇಕು ಕಲೆಗೆ ಆದ್ಯತೆ ಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕಲಾವಿದರಾದ  ಶಂಕ್ರಯ್ಯ ಎಸ್.ಹಿರೇಮಠ, ಸಿದ್ದಲಿಂಗೇಶ ಹಿರೇಮಠ, ಷಣ್ಮುಖಪ್ಪ ಪರಪ್ಪಗೌಡರ, ಅವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು, ಅಂದಾನಯ್ಯ ಹೀರೆಮಠ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಶಿಕ್ಷಕ ಎಮ್.ಎಸ್. ಬರದ್ದುರ ಮಾತನಾಡಿದರು. ಬಸನಗೌಡ ಪಾಟೀಲ, ಸಿ ಆರ್. ಪಟ್ಟಣಶೇಟ್ಟಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಸುದ್ದಿ ಓದಿ