ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಪಡಿತರ ಬಿಡುಗಡೆ: ಡಿಸಿ ಮಾಲಪಾಟಿ
ಲೋಕದರ್ಶನ ವರದಿ ನವೀಕರಿಸಲಾಗಿದೆ:
ಬಳ್ಳಾರಿ04: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕೇಂದ್ರ ಸಕರ್ಾರವು 2021 ನೇ ಮೇ ಮತ್ತು ಜೂನ್ ಮಾಹೆಗೆ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳಿಗೆ ಪ್ರತಿ ಸದಸ್ಯನಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದ್ದು, ಅದರಂತೆ ಪಡಿತರ ಚೀಟಿದಾರರು ಪಡಿತರ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆಹಾರ ಭದ್ರತಾ ಕಾಯ್ದೆಯ ಅನ್ನ ಭಾಗ್ಯ ಯೋಜನೆ ಅಡಿ ರಾಜ್ಯ ಸಕರ್ಾರವು 2021 ಮೇ ಮಾಹೆಗೆ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳಿಗೆ 2021 ಮೇ ಮಾಹೆಯಲ್ಲಿ ಬಿಡುಗಡೆ ಮಾಡಿರುವ ಆಹಾರ ಧಾನ್ಯ ನೀಡಲಾಗುತ್ತಿದ್ದು,ಅದರ ವಿವರ ಇಂತಿದೆ.ಆಹಾರ ಧಾನ್ಯದ ವಿವರ: ಅಂತ್ಯೋದಯ ಅನ್ನ (ಂಂಙ)ಪ್ರತಿ ಪಡಿತರ ಚೀಟಿಗೆ 15 ಕೆ.ಜಿ ಅಕ್ಕಿ, 20ಕೆ.ಜಿ ಜೋಳ/ರಾಗಿ, ಆದ್ಯತಾ ಪಡಿತರ ಚೀಟಿ (ಕಊಊ) ಪ್ರತಿ ಸದಸ್ಯನಿಗೆ 2 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ಜೋಳ/ರಾಗಿ, 02ಕೆ.ಜಿ ಗೋದಿ ಉಚಿತವಾಗಿ ನೀಡಲಾಗುತ್ತದೆ. ಪಡಿತರ ಪಡೆಯಲು ಒಪ್ಪಿಗೆ ಸೂಚಿಸದಿರುವ ಆದ್ಯತೇತರ ಪಡಿತರ ಚೀಟಿ (ಎ.ಪಿ.ಎಲ್)ಏಕ ಸದಸ್ಯ ಚೀಟಿಗೆ 1 ಕೆ.ಜಿ.ಗೆ 15 ರೂಪಾಯಿಯಂತೆ 5 ಕೆ.ಜಿ ಅಕ್ಕಿ, ದ್ವಿ.ಸದಸ್ಯ ಪಡಿತರ ಚೀಟಿಗೆ 1 ಕೆ.ಜಿ.ಗೆ 15 ರೂಪಾಯಿಯಂತೆ 10 ಕೆ.ಜಿ ಅಕ್ಕಿ ನೀಡಲಾಗುವುದು ಎಂದು ವಿವರಿಸಿದ್ದಾರೆ.
ಬಳ್ಳಾರಿ, ಕುರುಗೋಡು, ಸಂಡೂರು, ಸಿರುಗುಪ್ಪ, ಹೊಸಪೇಟೆ ಹಾಗೂ ಕಂಪ್ಲಿ ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಜೋಳ ವಿತರಣೆ ಮಾಡಲಾಗುತ್ತದೆ ಹಾಗೂ ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಹಾಗೂ ಹರಪನಹಳ್ಳಿ ನ್ಯಾಯಬೆಲೆ ಅಂಗಡಿಗಳಿಗೆ ರಾಗಿ ವಿತರಿಸಲಾಗುವುದು. ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಸ್ತುಗಳನ್ನು ತಿಂಗಳ ಆರಂಭದಿಂದ ಅಂತ್ಯದವರೆಗೆ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನ್ಯಾಯಬೆಲೆ ಅಂಗಡಿಗಳ ಸಕರ್ಾರಿ ರಜಾ ದಿನ ಸೇರಿ ಎಲ್ಲಾ ದಿನಗಳಲ್ಲಿಯೂ ಸಹ ಸಕರ್ಾರ ನಿಗದಿಪಡಿಸಿರುವ ಸಮಯದಲ್ಲಿ ಕಾರ್ಯನಿರ್ವಹಿಸಲು ತಿಳಿಸಲಾಗಿದೆ. ಪಡಿತರವನ್ನು ಪಡಿತರ ಚೀಟಿದಾರರ ಬಯೋಮೆಟ್ರಿಕ್ ದೃಢೀಕರಣ ಅಥವಾ ಒ.ಟಿ.ಪಿ ಆಧಾರದಲ್ಲಿ ವಿತರಿಸಲಾಗುವುದು. ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿದಿನ ನಿದರ್ಿಷ್ಟ ಸಂಖ್ಯೆಯ ಪಡಿತರ ಚೀಟಿದಾರರಿಗೆ ಪಡಿತರ ವಿತರಿಸಲು ಅವಕಾಶವಿರುತ್ತದೆ.ಪಡಿತರ ಚೀಟಿದಾರರು ಮುಖಗವಸು ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಮಾಲಪಾಟಿ ಅವರು ತಿಳಿಸಿದ್ದಾರೆ.
ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು 1ನೇ ತಾರಿಖಿನಿಂದ 30 ಅಥವಾ 31ನೇ ತಾರೀಖಿನ ಒಳಗಾಗಿ ಪಡಿತರ ವಸ್ತುಗಳನ್ನು ವಿತರಣೆ ಮಾಡದಿದ್ದಲ್ಲಿ ಆಹಾರ ಇಲಾಖೆಯ ಶುಲ್ಕ ರಹಿತ ದೂ.ಸಂ:1967 ಅಥವಾ 1800-425-9339 ಸಂಖ್ಯೆಗಳಿಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಪಡಿತರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಪಡಿತರ ಚೀಟಿದಾರರು ಆಯಾ ತಾಲ್ಲೂಕಿನ ತಹಸೀಲ್ದಾರ/ಸಹಾಯಕ ನಿದರ್ೇಶಕರು/ಆಹಾರ ಶಿರಸ್ತೇದಾರ/ಆಹಾರ ನಿರೀಕ್ಷಕರಿಗೆ ಸಲ್ಲಿಸಬಹುದು. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಜಂಟಿ ನಿದರ್ೇಶಕರ ಕಾಯರ್ಾಲಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಜಿಲ್ಲಾಧಿಕಾರಿಗಳ ಕಚೇರಿ ಬಳ್ಳಾರಿ ಇವರಿಗೆ ದೂ.ಸಂ: 08392-272557ಗೆ ನೀಡಬಹುದು.