ಕಲುಷಿತ ನೀರಿನಿಂದ ಬರುವ ರೋಗಗಳನ್ನು ತಡೆಯಿರಿ: ಡಾ. ಸಿದ್ದೇಶ ಕೊರಿಶೆಟ್ಟರ
ಸವದತ್ತಿ: ಹೂಲಿಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹರಳಕಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಕಲುಷಿತ ನೀರಿನಿಂದ ಬರುವ ರೋಗಗಳಾದ ಕಾಲರಾ ಕಾಮಣಿ ಟೈಪಾಯಿಡ್ ಆಮಶಂಕೆ ವಾಂತಿಭೇದಿ ಪ್ರಕರಣಗಳು ಆಗದಂತೆ ಮುಂಜಾಗ್ರತಾ ಕ್ರಮಗಳ ಕುರಿತು ಜಾಥಾ ಕಾರ್ಯಕ್ರಮವನ್ನು ಏರಿ್ಡಸಲಾಗಿತ್ತು.
ಸದರಿ ಜಾಥಾದಲ್ಲಿ ಕಲುಷಿತ ನೀರಿನಿಂದ ಬರುವ ರೋಗಗಳ ನಿಯಂತ್ರಣಕ್ಕಾಗಿ ಮುಂಜಾಗ್ರತ ಕ್ರಮಗಳು ವೈಯಕ್ತಿಕ ಸ್ವಚ್ಛತೆ ಪರಿಸರ ನೈರ್ಮಲ್ಯ ಮುಂತಾದ ಘೋಷಣೆಗಳ ಮೂಲಕ ಜನ ಜಾಗೃತಿ ಮೂಡಿಸಲಾಯಿತು.
ವೈದ್ಯಾಧಿಕಾರಿ ಡಾ. ಸಿದ್ದೇಶ ಕೊರಿಶೆಟ್ಟರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್. ಎಸ್. ಚಿಟ್ನಿಸ್, ಆರೋಗ್ಯ ನಿರಿಕ್ಷಣಾಧಿಕಾರಿ ಎನ್. ಎ. ಪೂಜೇರ ಪಿಡಿಓ ರಮೇಶ ತಿಪ್ಪನಾಯ್ಕ ಸೇರಿದಂತೆ ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಗ್ರಾ. ಪಂ. ಸಿಬ್ಬಂದಿಯವರು ಹಾಜರಿದ್ದರು.