ವಿವಿಧ ಸಂಘ ಸಂಸ್ಥೆಗಳ ಮುಖಂಡರ ಪೂರ್ವಭಾವಿ ಸಭೆ
ಮುದ್ದೇಬಿಹಾಳ :ಪಟ್ಟಣದ ವಿಜಯ ಮಹಾಂತೇಶ ದಾಸೋಹಭವನದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಬಸವ ಪುರಾಣ ಪ್ರವಚನ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಸರ್ವ ಸಮಾಜದ, ಗಣ್ಯ ವ್ಯಾಪಾರಸ್ಥರ, ಸಾಹಿತಿಗಳ, ವಿವಿಧ ಸಂಘ ಸಂಸ್ಥೆಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮಾತನಾಡಿದರು.
ಮುದ್ದೇಬಿಹಾಳ: ಮುಂಬರುವ ಡಿ, 10 ರಿಂದ 31ರವರೆಗೆ ಮುದ್ದೇಬಿಹಾಳ ಪಟ್ಟಣದ ವಿಬಿಸಿ ಹೈಸ್ಕೂಲ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ವೇದಿಕೆ ಮೇಲೆ ಧಾರವಾಡದ ಉಪ್ಪಿನ ಬೆಟಗೇರಿಯ ಖ್ಯಾತ ಪುರಾಣ ಪ್ರವಚನಕಾರರಾದ ಶ್ರೀ ವೀರುಪಾಕ್ಷೀ ಮಹಾಸ್ವಾಮಿಗಳಿಂದ ಬಸವ ಪುರಾಣ ಪ್ರವಚನ ಕಾರ್ಯಕ್ರಮವನ್ನು ಅತ್ಯಂತ ಶೃದ್ಧೆ ಹಾಗೂ ಭಕ್ತಿಯಿಂದ ನಡೆಸಲು ಮತ್ತು ಯಶಸ್ವಿಗೊಳಿಸಲು ತನು, ಮನ, ಧನದಿಂದ ಪಟ್ಟಣದ ಎಲ್ಲ ಗುರು ಹಿರಿಯರು ಕೈಜೊಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕರೆ ನೀಡಿದರು.
ಮುದ್ದೇಬಿಹಾಳ ಪಟ್ಟಣದ ಸೇರಿದಂತೆ ಇಡಿ ತಾಲೂಕು ಹಲವಾರು ಶರಣು, ಸಂತರು, ಸಾಹಿತಿಗಳು ಜನಸಿ ಉಳಿಸಿ ಹೋದ ಐತಿಹಾಸಿಕ ಪುಣ್ಯ ಕ್ಷೇತ್ರ ಮಾತ್ರವಲ್ಲದೇ ಧಾಮರ್ಿಕ ಕತೆಗೆ ತುಂಬಾನೆ ಹೆಸರುವಾಸಿಯಾಗಿದೆ. ಮನುಷ್ಯ ಇಂದು ಸದಾ ತನ್ನ ಸಂಸಾರ, ಮಕ್ಕಳು ಉದ್ಯೋಗ ಹೀಗೆ ಒಂದಲ್ಲೊಂದು ರೀತಿಯಲ್ಲಿ ನಿತ್ಯ ಒತ್ತಡದ ಬದುಕಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಯತ್ತ ಮಾರು ಹೋಗಿ ಆದಿ ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ನಮ್ಮ ಧರ್ಮ ಆಚಾರ ವಿಚಾರ, ಸಂಸ್ಕಾರ ಪರಂಪರೆಗಳನ್ನು ಮರೆಯುತ್ತಲೇ ಧಾಮರ್ಿಕ ಪದ್ದತಿಗಳನ್ನು ಮರೆತು ಜೀವನ ನಡೆಸುವ ಇಂದಿನ ಕಾಲಘಟ್ಟದಲ್ಲಿ ಪಟ್ಟಣದ ಬಹುತೇಕ ಎಲ್ಲ ಗಣ್ಯರು ಸಾಹಿತಿಗಳು, ಬಸವ ತತ್ವ ಅನುಯಾಯಿಗಳು ಸೇರಿಕೊಂಡು ಈ ಹಿಂದೆ ಇದೇ ನೆಲದಲ್ಲಿ ವಿಜಯಪುರ ಜ್ಞಾನ ಯೋಗಾಶ್ರಮದ ಲಿ, ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಹಾಗೂ ನಿಜಗುಣಾನಂದ ಮಹಾಸ್ವಾಮಿಗಳ ಒಂದು ತಿಂಗಳ ಪರ್ಯಂತ ಪ್ರವಚನಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ಜನಾಂಗಕ್ಕೆ ಧಾರ್ಮಿಕ, ಭಕ್ತಿಯ ಶ್ರದ್ಧೇ ಬಿತ್ತುವ ಕಾರ್ಯ ಮಾಡಿದ್ದಾರೆ. ಅದರಂತೆ ಸಧ್ಯ ಇಂದಿನ ಯುವ ಪಿಳೆಗೆಗಳಿಗೆ ಮತ್ತು ವಯಸ್ಕರಿಗೆ ಬಸವ ತತ್ವ ಹಾಗೂ ಅವರ ವಚನಗಳ ಕುರಿತು ಜನರಲ್ಲಿ ಜ್ಞಾನ ತುಂಬುವ ಕಾರ್ಯವೂ ಕೂಡ ಇದಾಗಿದೆ. ಕಾರಣ ಪಟ್ಟಣದ ಎಲ್ಲ ಗಣ್ಯ ವರ್ತಕರು, ಸಣ್ಣ ಮತ್ತು ದೊಡ್ಡ ವ್ಯಾಪಾರಸ್ಥರು,ವಿವಿಧ ರಾಜಕೀಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಕಾರ್ಯಕರ್ತರು, ಸಾಹಿತಿಗಳು, ಎಲ್ಲ ಧರ್ಮವರು ಜಾತ್ಯಾತೀತವಾಗಿ ಪಕ್ಷಾತೀತವಾಗಿ ಈ ಪುರಾಣ ಪವಚನ ಕಾರ್ಯಕ್ರಮವನ್ನು ಯಶ್ವಸಿಗೊಳಿಸಲು ಸಹಕರಿಸಬೇಕು ಎಂದರು.
ಗಣ್ಯ ವ್ಯಾಪಾರಸ್ಥ ಶಿವಶಂಕರಗೌಡ ಹಿರೇಗೌಡರ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್, ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಹಿರಿಯ ಮುಖಂಡ ದಾನಪ್ಪ ನಾಗಠಾಣ, ಗಣ್ಯ ಉದ್ಯಮಿ ಶರಣು ಸಜ್ಜನ, ಸುಧೀರ ನಾವದಗಿ, ಭರತ್ ಭೊಸಲೆ, ಸಾಹಿತಿ ಬಸವರಾಜ ನಾಲತವಾಡ, ಸಾಹಿತಿ ಆರ್ ಜಿ ಕಿತ್ತೂರ, ವಾಯ್ ಎಚ್ ವಿಜಯಕರ, ಬಾಬು ನಿರಾದಾರ, ಮೈಬೂಬ ಗೊಳಸಂಗಿ, ಸುನೀಲ ಇಲ್ಲೂರ, ಡಾ, ವಿಜಯಕುಮಾರ ನಾಯಕ, ಸಂಗಪ್ಪ ಮೇಲಿನಮನಿ, ನೇತಾಜಿ ನಲವಡೆ, ಅಮರೇಶ ಗೂಳಿ, ಬಿ ಎಸ್ ಮೇಟಿ, ಮುತ್ತಣ್ಣ ಪ್ಯಾಟಿಗೌಡರ, ವೀರುಪಾಕ್ಷೀ ಪತ್ತಾರ, ಮುತ್ತು ರಾಯಗೊಂಡ, ಎಚ್ ಟಿ ಬಿರಾದಾರ, ಡಾ,ವಿರೇಶ ಪಾಟೀಲ, ಅಪ್ಪು ದೇಗಿನಾಳ, ಸೋಮನಗೌಡ ಮೇಟಿ, ಗಣ್ಯ ವ್ಯಾಪಾರಸ್ಥರು ಅಶೋಕ ಚೆಟ್ಟೆರ, ಬಾಲಾಜಿ ಶುಗರ್ಸ್ ನ ತಾಂತ್ರಿಕ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಅರಕೇರಿ,
***
ಪ್ರಭುಗೌಡ ದೇಸಾಯಿ 25 ಸಾವಿರ, ಮಾರುತಿ ನಲವಡೆ 25 ಸಾವಿರ, ಕಾಂಗ್ರೇಸ್ ಮುಖಂಡ ಹಾಗೂ ಅಸ್ಕಿ ಪೌಂಡೇಷನ್ ಮುಖ್ಯಸ್ಥ ಸಿ ಬಿ ಅಸ್ಕಿ, ಗಣ್ಯ ಉದ್ಯಮಿ ವಿರೂಪಾಕ್ಷಿ ಪತ್ತಾರ, ನಾಲತವಾಡದ ಮಾಹಾಂತೇಶ ಗಂಗನಗೌಡರ, ಸೋಮಶೇಖರ್ ಅಣ್ಣೆಪ್ಪನವರ, ಅನ್ನಪ್ರಸಾದ ಸೇವೆ, ಮಾರುತಿ ನಲವಡೆ 25,ಸಾವಿರ, ಆಶ್ಪಾಕ ನಾಡಗೌಡ 10 ಸಾವಿರ, ಕಾಮರಾಜ ಬಿರಾದಾರ ಗೆಳೆಯರ ಬಳಗದಿಂದ ನೆನಪಿನ ಕಾಣಿಕೆ ಸೇರಿದಂತೆ ಅನೇಕ ದಾನಿಗಳು ದೇಣಿಗೆ ವಾಗ್ದಾನ ಮಾಡಿದರು