ಶಿಗ್ಗಾವ್

28ರಂದು ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವ ಭಾವಿ ಸಭೆ

28ರಂದು ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವ ಭಾವಿ ಸಭೆ

ಲೋಕದರ್ಶನ ವರದಿ 


ಲೋಕದರ್ಶನ ವರದಿ 

ಶಿಗ್ಗಾವಿ 25: ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಅವರ ಅಪ್ಪಣೆಯ ಮೇರೆಗೆ ಇದೇ ದಿ. 28 ರಂದು ರವಿವಾರ ಬೆಳ್ಳಗ್ಗೆ 11 ಗಂಟೆಗೆ ಪಟ್ಟಣದ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವ ಭಾವಿ ಸಭೆಯನ್ನು ಕರೆಯಲಾಗಿದೆ ಎಂದು ವಾಲ್ಮೀಕಿ ಬೇಡ ನಾಯಕ ಹಿತಾಭಿವೃದ್ದಿ ಸಂಘದ ತಾಲೂಕಾ ಅಧ್ಯಕ್ಷ ಬಸನಗೌಡ್ರ ರಾಮನಗೌಡ್ರ ತಿಳಿಸದರು. 

ಪಟ್ಟಣದ ಪತ್ರಕರ್ತರ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜನಳ್ಳಿಯಲ್ಲಿ ನಡೆಯುವ ನಾಲ್ಕನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ ಕರೆಯಲಾಗಿದ್ದು ಸಭೆಗೆ ಸಮಾಜದ ಗುರು-ಹಿರಿಯರು, ಸಹೋದರರು, ನೌಕರರು, ಮಾಧ್ಯಮದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫೆಬ್ರುವರಿಯಲ್ಲಿ ತಿಂಗಳಲ್ಲಿ ನಡೆಯುವ ವಾಲ್ಮೀಕಿ ಜಾತ್ರೆ ಮತ್ತು ನೂತನ ರತೋತ್ಸವದ ಬಗೆ ಚರ್ಚಿಸಿ ಕಾರ್ಯಕ್ರಮದ ರೂಪರೇಷೆಗಳನ್ನು ನೀಡಬೇಕು ಮತ್ತು ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಂದು ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ನಾಗರಾಜ ದೊಡ್ಡಮನಿ, ಕುಮಾರ ಮಲ್ಲಾಡದ, ಅಶೋಕ ರೀತ್ತಿ, ಫಕ್ಕಿರೇಶ ವಾಲ್ಮೀಕಿ, ರಾಜೇಶ ದೊಡ್ಡಮನಿ ಉಪಸ್ಥಿರಿದ್ದರು. 


ಸುದ್ದಿ ಓದಿ