ಬಳ್ಳಾರಿ

ವಿವಿಧ ಬೇಡಿಕೆ ಈಡೇರಿಕೆಗೆ ಪ್ರದೀಪ ಒತ್ತಾಯ

ವಿವಿಧ ಬೇಡಿಕೆ ಈಡೇರಿಕೆಗೆ ಪ್ರದೀಪ ಒತ್ತಾಯ

ಬಳ್ಳಾರಿ 03: : ನಗರದ ವಿಮ್ಸ್‌ ಆಸ್ಪತ್ರೆಯಲ್ಲಿರುವ ಸಮಸ್ಯೆ ಬಗೆಹರಿಸುವಂತೆ ಅನಿರ್ದಿಷ್ಟ ಅವಧಿ ಹೋರಾಟ ನಡಿಸುತ್ತಿರುವ ಪ್ರದೀಪ್ ರವರು ಆಸ್ಪತ್ರೆಯಲ್ಲಿ ಇರುವಂತಹ ಉಚಿತ  ಓಷಧಿ  ಕೇಂದ್ರ 24*7ತಾಸುಗಳು ನಡೆಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.  

ವಿಮ್ಸ್‌ ಆಸ್ಪತ್ರೆಗೆ ಬರುವಂತ ರೋಗಿಗಳು ಅತಿ ಬಡವರಾಗಿರುವುದರಿಂದ ಮತ್ತು ತುರ್ತು ಪರಿಸ್ಥಿತಿ ಬರುವಂತ ರೋಗಿಗಳ ಎಲ್ಲಾ ಓಷಧಿಗಳನ್ನು ಉಚಿತವಾಗಿ ಒದಗಿಸಿ ಕೊಡಬೇಕು. ಯಾವುದೇ ಕಾರಣಕ್ಕೂ ಹೊರಗಡೆ ಓಷಧಿಗಳನ್ನು ಖರೀದಿಸಲು ಸೂಚಿಸಬಾರದು ವಿಮ್ಸ್‌ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳಿಗೆ ಯಾವುದೇ ಕಾರಣಕ್ಕೂ  ಓಷಧಿಗಳನ್ನು ಹೊರಗಡೆಯಿಂದ ತೆಗೆದುಕೊಂಡು ಬಾ ಎಂದು ಸೂಚಿಸಿದರೆ ತಕ್ಷಣವೇ ಅವರನ್ನು ಕೆಲಸದಿಂದ ವಜಗೊಳಿಸಬೇಕು. ವಿಮ್ಸಗೆ ಬರುವಂತ ರೋಗಿಗಳು ತುಂಬಾ ನೋವುಗಳಿಂದ ನಂದುಕೊಂಡು ಬಂದಿರುತ್ತಾರೆ. ನಿಮ್ಷ ಆಸ್ಪತ್ರೆಯ ಆವರಣವನ್ನು ಸ್ವಚ್ಛವಾಗಿಸಬೇಕು ಹಾಗೂ ಶೌಚಾಲಯಗಳನ್ನು ಶುಚಿಯಾಗಿ ಇಡಬೇಕು ಎಂದು ಒತ್ತಾಯಿಸಿದರು.  

ಆದರಿಂದ ಊರಿನಿಂದ ಬಂದ ರೋಗಿಗಳಿಗೆ ಆಸ್ಪತ್ರೆ ಸಿಬ್ಬಂದಿಗಳು ಸೂಕ್ತ ರೀತಿಯಾಗಿ ವರ್ತಿಸಬೇಕು. ಆಯುಷ್ಮಾನ್ ಭಾರತ್  ಮತ್ತು  ಎ  ಬಿ ಎ ಆರ್ ಕೆ  ಫಲಾನುಭವಿಗಳಿಗೆ   ತಕ್ಷಣ ಉಚಿತ ಓಷಧೀಯ ವ್ಯವಸ್ಥೆಯನ್ನು ಮಾಡಕೊಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಜಿಂದಲ್ ಸಂಸ್ಥೆ ಮಾಡಿಕೊಟ್ಟಿದ್ದರು ಜನರಿಗೆ ಆಸ್ಪತ್ರೆ ಒಳಗಡೆ ಕುಡಿಯಲಿಕ್ಕೆ ನೀರು ಸಿಗುತ್ತಿಲ್ಲ. ಆದರಿಂದ ಅವರಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿಕೊಡಬೇಕು.  

ವಿಮ್ಸ್‌ ಆಸ್ಪತ್ರೆ ಒಳಗಡೆ ಮಾರ್ಚರಿ ಗಾಡಿಗಳ ವ್ಯವಸ್ಥೆ ಇಲ್ಲ. ಆಸ್ಪತ್ರೆ ರೋಗಿಗಳಿಗೆ ತಕ್ಷಣ ಮರ್ಚರಿ ಒದಗಿಸಿಕೊಡಬೇಕು. ಬಳ್ಳಾರಿ ಜಿಲ್ಲೆ ಗಡಿಭಾಗದಲ್ಲಿ ಇರುವುದರಿಂದ ಆಂಧ್ರದಿಂದ ಮತ್ತು ಕರ್ನಾಟಕದಿಂದ ಬಡ ರೋಗಿಗಳು ವಿಮ್ಸ್‌ ನಂಬಿ ಬದುಕುತ್ತಿದ್ದಾರೆ. ಕಾರಣ ತುರ್ತು ಪರಿಸ್ಥಿತಿ ಯಲ್ಲಿ ರೋಗಿಗಳ ನೊಂದಾಯಿತ ಚೀಟಿ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಆದ್ದರಿಂದ ಕೌಂಟರುಗಳನ್ನು ಇನ್ನು ಎರಡು ಹೆಚ್ಚು ಮಾಡಬೇಕು ಎಂದು ಒತ್ತಾಯಿಸಿದರು. ಹಾಗೂ ಈ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಅವರು  ಬೇಡಿಕೆಗಳು ಈಡೇರಿಸದಿದ್ದರೆ ಆ ನಿರ್ಧಿಷ್ಟ ಅವಧಿಯವರೆಗೆ ವಿಮ್ಸ್‌ ಆಸ್ಪತ್ರೆಯ ಆವರಣದ ಮುಂದೆ ಪ್ರತಿಭಟಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ಕಿರಣ್ ಕುಮಾರ್, ಕಲಂದರ್, ಸುನಿಲ್, ಮಂಜುನಾಥ, ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ