ಪ್ರದೀಪ್ ಕುಮಾರ್ ಬಿ.ಎಮ್ಗೆ ಡಾಕ್ಟರೇಟ್ ಪದವಿ
ಬಳ್ಳಾರಿ 22: ಜಿಲ್ಲೆಯ ಪ್ರದೀಪ್ ಕುಮಾರ್ ಬಿ.ಎಮ್. ವಿಜ್ಞಾನ ವಿಷಯದ ರಸಾಯನಶಾಸ್ತ್ರದಲ್ಲಿ ಸಿಂಥಸಿಸ್ ಕ್ಯಾರೆಕ್ಟರೈಜೇಷನ್ ಅ್ಯಂಡ್ ಸ್ಟಡೀಸ್ ಆಫ್ ಸಮ್ ಇಂಪಾರ್ರ್ಟೆಂಟ್ ನ್ಯಾನೊಮೆಟಲ್ ಆಕ್ಸೈಡ್ಸ್ ಅ್ಯಂಡ್ ದೇರ್ ಪ್ರಾಪರ್ಟಿಸ್ ಪ್ರಬಂಧಕ್ಕೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ “ಡಾಕ್ಟರ್ ಆಫ್ ಫಿಲಾಸಫಿ” ಪದವಿಯನ್ನು ನೀಡಿ ಗೌರವಿಸಿದೆ. ವಿಶ್ವವಿದ್ಯಾಲಯದ ಡಾ. ಕೆ.ಹೆಚ್.ಶಿವಪ್ರಸಾದ್ ಪ್ರದೀಪ್ ಕುಮಾರ್ಗೆ ಮಾರ್ಗದರ್ಶನ ಮಾಡಿದರು.