ಪವರ್ ವೀಡರ್ ಯಂತ್ರ ವಿತರಣೆ
ಲೋಕದರ್ಶನ ವರದಿ
ಮುಂಡಗೋಡ:ಎಸ್.ಎಂ.ಎ.ಎಂ. ಕೃಷಿ ಯಂತ್ರಕರಣ ಯೋಜನೆಯಡಿಯಲ್ಲಿ ಆಯ್ಕೆಯಾದ ತಾಲೂಕಿನ ರೈತರಿಗೆ ಪವರ್ ವೀಡರ್ ಯಂತ್ರಗಳನ್ನು ಕೆಡಿಸಿಸಿ ಬ್ಯಾಂಕ್ನ ನಿರ್ದೇಶಕ ಎಲ್.ಟಿ.ಪಾಟೀಲ ಸೋಮವಾರ ವಿತರಿಸಿದರು.
ತಾಲೂಕಿನ ಸಾಲಗಾಂವ ಗ್ರಾಮದ ರೈತ ಫಕೀರ್ಪ ಲಮಾಣಿ, ಚವಡಳ್ಳಿ ಗ್ರಾಮದ ಉಡವಪ್ಪ ಹರಿಜನ, ತೇಗಿನಕೊಪ್ಪ ಗ್ರಾಮದ ಚಂದ್ರಶೇಖರ ರಾಠೋಡ, ಇಂದೂರ ಗ್ರಾಮದ ಫಕೀರ್ಪ ನಾಣಾಪುರ ಮತ್ತು ಅಗಡಿ ಗ್ರಾಮದ ಮಲ್ಲಪ್ಪ ತಳವಾರ ಇವರಿಗೆ ಪವರ್ ವೀಡರ್ ಯಂತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ, ಅರವಿಂದ ಕಮ್ಮಾರ, ಸಂಗಮೇಶ ಬಿದರಿ ಹಾಗೂ ಮುಂತಾದವರಿದ್ದರು.