ಮನೋಹರಿ ಚಿತ್ರದ ಪೋಸ್ಟರ್ ಬಿಡುಗಡೆ
ಕೊಪ್ಪಳ 02: ನಗರದ ಸಾಹಿತ್ಯ ಭವನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರವಾಸಿ ಉತ್ಸವ ಹಾಗೂ ದ್ವಿತೀಯ ವಿಜಯನಗರ ಕರ್ನಾಟಕ ಸಾಂಸ್ಕೃತಿಕ ಸಮ್ಮೇಳನ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡ ಹಿರಿಯ ಪತ್ರಕರ್ತರು, ಚಲನ ಚಿತ್ರ ನಿರ್ದೇಶಕರಾದ ರಮೇಶ್ ಸುರ್ವೆ ಅವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಮನೋಹರಿ ಚಿತ್ರದ ಮೊದಲನೇ ಪೋಸ್ಟರ್ ಬಿಡುಗಡೆ ಮಾಡಲಾಯಿತು
ಈ ವೇಳೆ ಭಜರಂಗಿ 2 ಚಿತ್ರದ ಪೋಷಕಿ ಪಾತ್ರ ನಿರ್ವಹಿಸಿದ ಮೀನಾ, ಡಾ .ನೆ.ಲ.ನರೇಂದ್ರಬಾಬು, ಮಾಜಿ ಶಾಸಕರು, ರಮಾನಂದ ಗುರೂಜಿ ಧರ್ಮಾಧಿಕಾರಿಗಳು, ಡಾ ರಾಜೇಂದ್ರ ಎಸ್ ಗಡಾದ ಹಿರಿಯ ಸಾಹಿತಿಗಳು, ಕಲ್ಮೇಶ್ವರ ಮಹಾಸ್ವಾಮಿಗಳು, ಡಾ ಸತೀಶ್ ಕುಮಾರ್ ಎಸ್ ಹೊಸಮನಿ ನಿರ್ದೇಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆ, ಸಾವಿತ್ರಿ ಮುಜುಮ್ದಾರ್ ಸಾಹಿತಿಗಳು, ಹನುಮಂತಪ್ಪ ಅಂಡಗಿ ಚಿಲವಾಡಗಿ ಅಧ್ಯಕ್ಷರು ಚುಟುಕು ಸಾಹಿತ್ಯ ಪರಿಷತ್, ಚಲನಚಿತ್ರ ನಟ ದುರ್ಗ ಸಿಂಹ, ನಿರ್ದೇಶಕ ಮುದ್ದುಕೃಷ್ಣ, ಕ್ಯಾಮೆರಾಮ್ಯಾನ್ ಮೈಲಾರಿ, ಸಹ ನಿರ್ಮಾಪಕ ಯಮನೂರಪ್ಪ , ಮಾರುತಿ ಬಹದ್ದೂರ್ ಬಂಡಿ, ನಿಂಗಮ್ಮ, ಸಾಹಸ ನಿರ್ದೇಶಕ ರಘು ಅರಕೇರಿ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ತಿಳಿಸಿದ್ದಾರೆ ಅಧ್ಯಕ್ಷ ರುದ್ರಪ್ಪ ಭಂಡಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ