ವಿಧಿಬಲಿ ಕಿರುಚಿತ್ರದ ಪೋಸ್ಟರ್ ಬಿಡುಗಡೆ
ಲೋಕದರ್ಶನ ವರದಿ
ಹೂವಿನಹಡಗಲಿ 25: ಹೂವಿನಹಡಗಲಿ ಯುವ ಚಲನಚಿತ್ರ ಕಲಾವಿದ ಎಸ್.ಎಸ್.ಕ್ರಾಂತಿ ನಾಯಕ ನಟನಾಗಿ ಅಭಿನಯಿಸಿರುವ ವಿಧಿಬಲಿ ಕಿರುಚಿತ್ರದ ಪೋಸ್ಟರ್ನ್ನು ಶುಕ್ರವಾರ ಬೆಂಗಳೂರಿನಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ರವರು ಬಿಡುಗಡೆಗೊಳಿಸಿದರು. ಈಗಾಗಲೇ ಹೂವಿನಹಡಗಲಿ ಭಾಗದಲ್ಲಿ ಚಿತ್ರೀಕರಣ ಮುಗಿದಿದ್ದು ಎಡಿಟೆಂಗ್, ಡಬಿಂಗ್, ಕಾರ್ಯ ಪ್ರಗತಿಯಲ್ಲಿದೆ. ದಸಾರಕ್ಕೆ ಚಿತ್ರದ ಟೇಸರ್ ಬಿಡುಗಡೆಯಾಗಿ ದೀಪಾವಳಿಗೆ ಚಿತ್ರಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಸಂದೀಪ್ ಸಚಿವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಧಿಬಲಿ ಚಿತ್ರತಂಡದ ನಾಯಕ ಎಸ್.ಎನ್.ಕ್ರಾಂತಿ, ಸಹ ನಟರು, ಪಾಲ್ಗೊಂಡಿದ್ದರು. ನಂತರ ಸಚಿವ ಬಿ.ಶ್ರೀರಾಮುಲು ಸಿಹಿ ವಿತರಿಸಿ ಚಿತ್ರ ಯಶಸ್ವಿಯಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು.