ಚಿರತೆಯ ಮೃತದೇಹದ ಮರಣೋತ್ತರ ಪರೀಕ್ಷೆ
ಮುಂಡಗೋಡ 11: ತಾಲೂಕಿನ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಗೊಟಗೋಡಿಕೊಪ್ಪದ ಬಳಿ ಶುಕ್ರವಾರ ಪತ್ತೆಯಾಗಿದ್ದ ಮೃತಪಟ್ಟ ಚಿರತೆಯ ಮರಣೋತ್ತರ ಪರೀಕ್ಷೆಯನ್ನು ಶನಿವಾರ ನಡೆಸಲಾಯಿತು.
ಸುಮಾರು ಮೂರು ವರ್ಷದ ಗಂಡು ಚಿರತೆ ಇದಾಗಿದ್ದು ಯಾವದೊ ವಾಹನ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಮತ್ತು ಮುಖಕ್ಕೆ ಪೆಟ್ಟು ಬಿದ್ದು ಚಿರತೆ ಮೃತಪಟ್ಟಿರುವುದು ದೃಢಪಟ್ಟಿದೆ. ಯಲ್ಲಾಪುರ ಡಿಎಫ್ಒ ಎಸ್.ಜಿ.ಹೆಗಡೆ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನ್ಯಾಯಾಲಯದ ಅನುಮತಿ ಪಡೆದು ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಎಸಿಎಫ್ ರವಿ ಹುಲಕೋಟಿ ಹೇಳಿದರು.
ಚಿರತೆಗೆ ಗುಂಡು ಹಾಕಿದ ಯಾವುದೆ ಕುರುಹು ಕಂಡು ಬಂದಿಲ್ಲ. ವಾಹನ ಡಿಕ್ಕಿ ಹೊಡೆದಿರಬಹುದು. ಕಳೆದ 2-3 ದಿನಗಳ ಹಿಂದೆಯೇ ಚಿರತೆ ಮೃತಪಟ್ಟಿದೆ. ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ ಹೆಗಡೆ ಹೇಳಿದರು. ಕಾತೂರ ಆರ್ಎಫ್ಒ ಮಂಜುನಾಥ ನಾಯ್ಕ ಹಾಗೂ ಸಿಬ್ಬಂದಿ ಇದ್ದರು.