ಜಿಲ್ಲಾ ವಿಭಜನೆಯಿಂದ ಕುಂದಲಿರುವ ರಾಜಕೀಯ ಶಕ್ತಿ: ತಾಯಣ್ಣ
ಲೋಕದರ್ಶನವರದಿ
ಬಳ್ಳಾರಿ18: ಜಿಲ್ಲೆ ವಿಭಜನೆ ಕೈಬಿಡುವಂತೆ ರಾಜ್ಯ ಸಕರ್ಾರಕ್ಕೆ ಒತ್ತಾಯಿಸಿ ಅನಿದರ್ಿಷ್ಟಾವಧಿ ಧರಣಿ ಸತ್ಯಾಗ್ರಹ 5ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ಬೆಳಿಗ್ಗೆ ಪರಿಶಿಷ್ಟ ಪಂಗಡದ ರಾಜ್ಯ ಮಹಾ ಪ್ರಧಾನ ಕಾರ್ಯದಶರ್ಿ ಡಿ.ಮೀನಹಳ್ಳಿ ತಾಯಣ್ಣ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಮೀನಳ್ಳಿ ತಾಯಣ್ಣ ಅವರು, ಜಿಲ್ಲೆಯಲ್ಲಿ ಸಂಡೂರು ತಾಲೂಕಿನಿಂದಲೇ ಶೇ.90ರಷ್ಟು ಡಿ.ಎಮ್.ಎಫ್.(ಜಿಲ್ಲಾ ಖನಿಜ ನಿಧಿ) ಫಂಡ್ ಬರುತ್ತಿದೆ. ಹೊಸಪೇಟೆಯಿಂದ ಕೇವಲ ಶೇ.10 ರಷ್ಟು ಮಾತ್ರ ಇದೆ.
ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ವಿಭಜನೆಯಾದರೆ ಇದುವರೆಗೆ ಪಶ್ಚಿಮ ತಾಲೂಕುಗಳಿಗೆ ದೊರೆಯುತ್ತಿದ್ದ ಡಿ.ಎಮ್.ಎಫ್. ಫಂಡ್ ಕಡಿತವಾಗುತ್ತದೆ. ಈ ಫಂಡ್ನಿಂದ ಪಶ್ಚಿಮ ತಾಲೂಕುಗಳಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಅಖಂಡ ಜಿಲ್ಲೆಯಾಗಿ ಉಳಿದರೆ ಈ ಫಂಡ್ ಹಾಗೆಯೇ ಮುಂದುವರೆಯಲಿದೆ. ಹೊಸಪೇಟೆಯಿಂದ ಬರುವ ಶೇ.10 ರಷ್ಟು ಡಿ.ಎಮ್.ಎಫ್. ಫಂಡ್ ಯಾವುದಕ್ಕೂ ಸಾಲುವುದಿಲ ಎಂದರು.
ಹೈದರಾಬಾದ್-ಕನರ್ಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 371ನೇ ಜೆ ಕಲಂ ಅಡಿಯಲ್ಲಿ ರಾಜ್ಯ ಸಕರ್ಾರ ಮಂಜೂರು ಮಾಡಿರುವ ಅನುದಾನವನ್ನು ಜಿಲ್ಲೆಯ ಅಭಿವೃದ್ಧಿ ಖಚರ್ು ಮಾಡದೇ ವಾಪಸ್ಸು ಕಳುಹಿಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಯನ್ನು ಮಾಡುವುದಕ್ಕೆ ಶ್ರಮಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಸ್ವಾರ್ಥಕ್ಕಾಗಿ, ಪ್ರತಿಷ್ಠೆಗಾಗಿ ಜಿಲ್ಲೆಯನ್ನು ವಿಭಜನೆ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದರು.
ಜಿಲ್ಲೆಯಲ್ಲಿ ಹೆಚ್ಚು ಶಾಸಕರು ಇದ್ದರೆ ಜಿಲ್ಲೆಗೆ ರಾಜಕೀಯವಾಗಿ ಶಕ್ತಿ ಬರುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು ರಾಜಕೀಯವಾಗಿ ತುಳಿದುಹಾಕುವ ಹುನ್ನಾರ ಹೊಂದಿರುವ ಕೆಲ ಪಕ್ಷಗಳ ಮುಖಂಡರು ಇಂತಹ ಕ್ರಮವನ್ನು ರಾಜ್ಯ ಸಕರ್ಾರ ಕೈ ಬಿಡಬೇಕೆಂದು ಜೆಡಿಎಸ್ ಒತ್ತಾಯಿಸುತ್ತದೆ ಎಂದರು.
ಸಮಿತಿಯ ಮುಂಡರಾದ ಮುಂಡ್ರಿಗಿ ನಾಗರಾಜ್, ಎ.ಮಾನಯ್ಯ, ಸಿರಿಗೇರಿ ಪನ್ನರಾಜ್, ಟಿ.ಜಿ.ವಿಠ್ಠಲ್, ಮಲ್ಲಿಕಾಜರ್ುನರೆಡ್ಡಿ, ರಮೇಶ್ ಬುಜ್ಜಿ, ಡಾ.ಕೆ.ಬಸಪ್ಪ, ವೆಂಕಟೇಶ್ ಹೆಗಡೆ, ಕನರ್ಾಟಕ ಜನಸೈನ್ಯದ ರಾಜ್ಯಾಧ್ಯಕ್ಷರಾದ ಕೆ.ಎರ್ರಿಸ್ವಾಮಿ, ಕನ್ನಡ ಸೇನೆಯ ಕೆ.ಹೊನ್ನಪ್ಪ, ಜೆ.ಡಿ.ಎಸ್ ಮುಖಂಡರಾದ ಕಪ್ಪಗಲ್ಲು ರಸೂಲ್ ಸಾಬ್, ವಿಜಯಕುಮಾರ್, ಕಿರಣ್ಕುಮಾರ್, ಶ್ರೀನಿವಾಸ್(ಕ್ಯಾಂಪ್), ಎಲಿಷಾ, ಚಾಗನೂರು ನಾಗರಾಜ್, ಹೊನ್ನೇಶ್, ಹೊನ್ನೂರುಸ್ವಾಮಿ(ವಂಡ್ರಿ), ಬಸಪ್ಪ, ಕೇದಾರರೆಡ್ಡಿ, ವಾದಿರಾಜಶೆಟ್ಟಿ, ಡಿ.ಸಿದ್ದೇಶ್, ಮಹಿಳಾಮುಖಂಡರಾದ ಪುಷ್ಪಾ, ವಿಜಯಕುಮಾರಿ ಮುಂತಾದ ನೂರಾರು ಜನರು ಭಾಗವಹಿಸಿದ್ದರು.