ಶಿಥಿಲಾವಸ್ಥೆಯಲ್ಲಿರುವ ಪೊಲೀಸ್ ವಸತಿ ಗೃಹಗಳು
ಮುಂಡಗೋಡ: ಇಲ್ಲಿನ ಪೊಲೀಸ್ ವಸತಿ ಗೃಹಗಳು ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಸಿಬ್ಬಂದಿಗಳು ನಮ್ಮ ಗಮನಕ್ಕೆ ತಂದಿದ್ದಾರೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಹೇಳಿದರು.
ಅವರು ಸೋಮವಾರ ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದರು. ವಸತಿ ಗೃಹದ ದುರಸ್ತಿಯ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಗಿದೆ.
ತಾಲೂಕಿನ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲಾಗುವುದು.
ಮಳಗಿಯಲ್ಲಿರುವ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ ಬಂದಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕ್ರೈಮ್ ಆಧಾರದ ಮೇಲೆ ಪ್ರಸ್ತಾವನೆ ಮಾನ್ಯತೆ ಆಗುತ್ತದೆ. ಪಿಎಸ್ಐ ಅವರ ವಾಹನ ಹಳೆಯದಾಗಿದ್ದು ತಾಲೂಕು ಬಹಳ ವಿಸ್ತಾರವಾದ ಕಾರಣ ಮತ್ತು ಸಚಿವರು ಬಂದ ವೇಳೆ ಓಡಾಡಲು ಸಮಸ್ಯೆ ಆಗುವ ಬಗ್ಗೆ ಎಸ್ಪಿ ಅವರ ಗಮನಕ್ಕೆ ತಂದಾಗ ಮುಂದಿನ ದಿನದಲ್ಲಿ ಬೇರೆಯ ವಾಹನದ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ವೇಳೆ ಸಿಪಿಐ ಎಸ್.ಎಸ್.ಸಿಮಾನಿ, ಪಿಎಸ್ಐ ಬಸವರಾಜ ಮಬನೂರ ಉಪಸ್ಥಿತರಿದ್ದರು.