ಮುಂದಗೋಡ

ಭೂಮಿಯ ದಾಖಲೆ ಬದಲಾವಣೆ ಮಾಡದಂತೆ ಒತ್ತಾಯಿಸಿ ಮನವಿ

ಭೂಮಿಯ ದಾಖಲೆ ಬದಲಾವಣೆ ಮಾಡದಂತೆ ಒತ್ತಾಯಿಸಿ ಮನವಿ

ಮುಂಡಗೋಡ 30:ತಾಲೂಕಿನ ಸಾಲಗಾಂವ ಗ್ರಾಮದಲ್ಲಿ ಶಿಕ್ಷಣ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಂಡು ಈಗ ನಿವೇಶನಕ್ಕಾಗಿ ಮಾರಾಟ ಮಾಡುತ್ತಿರುವ ಖಾಸಗಿ ಸಂಸ್ಥೆಯ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯವರು ರಾಜ್ಯಾಧ್ಯಕ್ಷ ಚಿದಾನಂದ ಹರಿಜನ ನೇತೃತ್ವದಲ್ಲಿ ಇಲ್ಲಿನ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.  

ಸಾಲಗಾಂವ ಗ್ರಾಮದ 3 ಎಕರೆ 11 ಗುಂಟೆ ಕೃಷಿ ಜಮೀನನ್ನು ಈ ಹಿಂದೆ ಖಾಸಗಿ ಸಂಸ್ಥೆಯವರು ಶಿಕ್ಷಣ ಉದ್ದೇಶಕ್ಕಾಗಿ ಭೂ ಪರಿವರ್ತನೆ (ಎನ್‌ಎ) ಮಾಡಿಸಿಕೊಂಡಿದ್ದಾರೆ. ಶಿಕ್ಷಣಕ್ಕೆ ಎಂದು ಕಡಿಮೆ ವೆಚ್ಚದಲ್ಲಿ ಎನ್‌ಎ ಮಾಡಿಸಿಕೊಂಡು ಇದೀಗ ಹಣ ಗಳಿಸುವ ಉದ್ದೇಶದಿಂದ ಈ ಭೂಮಿಯನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಮಾರಾಟ ಮಾಡುವ ಮೂಲಕ ಕೋಟ್ಯಾಂತರ ರೂಪಾಯಿ ಗಳಿಸುವ ಪ್ರಯತ್ನ ನಡೆಸಿದ್ದು ಈ ಭೂಮಿಯ ದಾಖಲೆಗಳನ್ನು ಬದಲಾವಣೆ ಮಾಡಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.  

ಈ ವೇಳೆ ಸಂಘಟನೆಯ ಭೀಮ್ಸಿ ವಾಲ್ಮೀಕಿ, ಮಾರ್ಟಿನ್ ಬಳ್ಳಾರಿ, ಅಮರೇಶ ಹರಿಜನ, ಖೇಮಣ್ಣ ಲಮಾಣಿ ಹಾಗೂ ಮುಂತಾದವರು ಇದ್ದರು. ಗ್ರೇಡ್‌-2 ತಹಶೀಲ್ದಾರ ಜಿ.ಬಿ.ಭಟ್ ಮನವಿ ಸ್ವೀಕರಿಸಿದರು. 


ಸುದ್ದಿ ಓದಿ