ಪ್ಲಾಸ್ಟಿಕ್ ಮುಕ್ತ ಅಭಿಯಾನ
ಜಮಖಂಡಿ: 8-3ನಗರಸಭೆ ಆರೋಗ್ಯ ವಿಭಾಗದಿಂದ ಜು. 1 ರಿಂದ 28 ರವರೆಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಮ್ಮಿಕೊಂಡಿದ್ದು. ನಗರದ ಸಾರ್ವಜನಿಕರು ಅನಧಿಕೃತವಾಗಿ ಪ್ಲಾಸ್ಟಿಕ್ ದಾಸ್ತಾನು ಮತ್ತು ಬಳಕೆ ತಡೆಯಲು, ಪ್ಲಾಸ್ಟಿಕ್ ದಾಳಿ ನಡೆಸಲು ನಗರ ಸ್ಥಳೀಯ ಸಂಸ್ಥೆಯಿಂದ ತಂಡಗಳನ್ನು ರಚಿಸಲಾಗಿದೆ.
ಸದರಿ ತಂಡಗಳೊಂದಿಗೆ ನಗರದ ಪ್ರಮುಖ ಪ್ರದೇಶಗಳಾದ ತರಕಾರಿ ಮಾರುಕಟ್ಟೆ, ಸ್ಥಳೀಯ ಸಗಟು ಮಾರುಕಟ್ಟೆಗಳು, ಬೀದಿ ವ್ಯಾಪಾರಿಗಳು, ಹೂವು ಮಾರಾಟಗಾರರು, ಬಸ್ ನಿಲ್ದಾಣಗಳು ಸಾರ್ವಜನಿಕ ಮತ್ತು ವಾಣಿಜ್ಯ ಸ್ಥಳಗಳಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲು ಯೋಜನೆ ರೂಪಿಸಿದ್ದು. ಏಕ ಬಳಕೆ ಪ್ಲಾಸ್ಟಿಕ್ನ್ನು ದಾಸ್ತಾನು, ಬಳಕೆ ಮಾಡಿದ್ದು ಕಂಡು ಬಂದಲ್ಲಿ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.