ಲೇಖನಗಳು

ಪ್ಲಾಸ್ಟಿಕ್ ದಾರದ ಉರುಳು..! ನೀಲಿ ಮುಖದ 'ಕೈರಾತ ಪಕ್ಷಿಯ ಪ್ರಾಣತ್ಯಾಗ...

ಪ್ಲಾಸ್ಟಿಕ್ ದಾರದ ಉರುಳು..! ನೀಲಿ ಮುಖದ 'ಕೈರಾತ ಪಕ್ಷಿಯ ಪ್ರಾಣತ್ಯಾಗ...

ಬೈಕನ್ನೇರಿ ಕಾರ್ಯ ನಿಮಿತ್ತ ಲಿಂಗನಾಯಕನಹಳ್ಳಿ ಗ್ರಾಮಕ್ಕೆ ಹೊರಟಿದ್ದೆ. ಎಂದಿನಂತೆ  ಸಹಪಾಟಿ ಕ್ಯಾಮೆರಾ ಹೆಗಲೇರಿ ಅದಾಗಲೇ ಕುಳಿತಾಗಿತ್ತು. ಜೊತೆಗೆ ಕಿರಿಯ ಮಗ ಪ್ರಣವ್ ಜೊತೆಗೂಡಿದ.  ರಾಣೆಬೆನ್ನೂರಿನಿಂದ ಹರನಗಿರಿ ರಸ್ತೆಯ ಮೂಲಕ ನನ್ನ ಪ್ರಯಾಣ ಪ್ರಾರಂಭವಾಯಿತು.  ರಸ್ತೆ ಇಕ್ಕೆಲಗಳಲ್ಲಿಯ ಮರದ ತಂಪಿನ ನೆರಳಲ್ಲಿ ಪ್ರಯಾಣ ಸುಖಕರವಾಗಿತ್ತು... ಸಹವಾಸ ದೋಷದಿಂದ ಪಕ್ಷಿಪ್ರಿಯನಾದ ಮಗ ಪ್ರಣವ್ಗೆ ಯಾವುದಾದ್ರೂ ಪಕ್ಷಿ ಕಂಡ ತಕ್ಷಣ ಬೈಕ್ ನಿಲ್ಲಿಸಲು ಹೇಳಿ ಅದರ ವಿವರಗಳನ್ನೆಲ್ಕಾ ಕೆದಗುತ್ತಿದ್ದ. ಜೊತೆಗೆ ಹೆಗಲಿಗೇರಿದ ಕ್ಯಾಮೆರಾ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿತ್ತು.... ಹೀಗೆಯೇ ಪ್ರಯಾಣದ ಮಧ್ಯ ಅಲ್ಲಲ್ಲಿ ಕಂಡ ದೃಶ್ಯಗಳನ್ನು ಆಸ್ವಾದಿಸುತ್ತಾ ನಡೆದಿದ್ದೆವು. ರಸ್ತೆಯ ಪಕ್ಕದಲ್ಲಿಯ ಹೊಲಗದ್ದೆಗಳಲ್ಲಿ ಹಾರಾಡುತ್ತಿದ್ದ ಕೊಕ್ಕರೆಗಳ ಬಗ್ಗೆ, ರಸ್ತೆಯಲ್ಲಿ ವಾಹಗಳಿಗೆ ಸಿಕ್ಕು ಸತ್ತು ಹೋದ ಇಲಿ, ಅಳಿಲು, ಓತಿಕ್ಯಾತಗಳಂತಹ ಚಿಕ್ಕ ಚಿಕ್ಕ ಪ್ರಾಣಿಗಳನ್ನು ತಿನ್ನಲು ರಸ್ತೆ ಮೇಲೆ ಕುಳಿತ ಕಾಗೆ, ಮೈನಾಗಳು ನೋಡಿ ಪುತ್ರ ಪ್ರಣವ್ ನಲ್ಲಿ ಬಹಳಷ್ಟು ಪ್ರಶ್ನೆಗಳು ಬುಗಿಲೆದ್ದವು...ಆ ಪ್ರಶ್ನೆಗಳ ಬಗ್ಗೆ ಚಚರ್ೆಗಳು ನಡೆಯುತ್ತಲಿದ್ದವು...  ಅಪಾ ್ಪ! ಈ ಓತಿಕ್ಯಾತ, ಅಳಿಲುಗಳಿಗೆ  ಸಾಯುತ್ತೇವೆ ಅಂತ ಗೊತ್ತಿದ್ದರು  ಯಾಕ ರಸ್ತೆಗೆ ಬಂದ್ವು?  ರಸ್ತೆ ಮೇಲೆ ಸತ್ತ ಪಕ್ಷಿನ ಕಾಗೆಯೇ ತಿಂತಿದೆ ಯಾಕ?  ಕಾಗೆನೂ ಪಕ್ಷಿ ತಾನೆ? ಯಾಕಪ್ಪ..?   ಮಗ ಪ್ರಣವ್ ಹಾಕುವ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲಿಕ್ಕೆ ಆಗಲಿಲ್ಲ.. ಸಾಧ್ಯವಾದಷ್ಟು ಮಗ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹಾದಿ ಸಾಗಿಸುತ್ತಿದ್ದೆ. 

ಗಂಗಾಪೂರ ಗ್ರಾಮ ದಾಟಿದ ನಂತರ ಗುಡುಗೂರು-ಮೈದೂರ ಕ್ರಾಸ್ ಬರುತ್ತದೆ. ಅಲ್ಲಿ ಮಗ ನೀರು ಕುಡಿಯಲು ಕೇಳಿದಾಗ ಬೈಕ್ ನಿಲ್ಲಿಸಿದೆ...ರಸ್ತೆಯ ಪಕ್ಕದ ಗಿಡದ  ನೆರಳಲ್ಲಿ ನಿಂತು ದಾಹ ತೀರಿಸಿಕೊಂಡನು. ನಂತರ ಇನ್ನೇನು ಬೈಕನ್ನ ಹತ್ತಬೇಕು ಎನ್ನುವದಕ್ಕೂ, ಅಪ್ಪಾ! ಅಲ್ಲಿ ನೋಡಲ್ಲಿ ಆ ಗಿಡದಾಗ ಕಪ್ಪು ಬಣ್ಣದ ಪಕ್ಷಿ ಜೋತಾಡ್ತಾ ಇದೆ ಎಂದನು... ತಕ್ಷಣವೇ ಕಾಣದ ನನಗೆ ಎಲ್ಲಿ, ಎಲ್ಲಿ ಎಂದೆ. ಸ್ವಲ್ಪ ಹತ್ತಿರ ಹೋಗಿ ತೋರಿಸಿದ... ಹತ್ತಿರ ಹೋಗಿ ನೋಡಿದೆ.. ಒಂದು ಕುರುಚಲು ಮುಳ್ಳಿನ ಗಿಡದಲ್ಲಿ  ಕೋಗಿಲೆ ಹಾಗೆ ಕಾಣುವ ಕಪ್ಪನೆಯ ಪಕ್ಷಿ ಜೋತಾಡುತ್ತಿತ್ತು.  ನಂತರ ಸೂಕ್ಷ್ಮವಾಗಿ ಗಮನಿಸಿದಾಗ ಅದು 'ನೀಲಿ ಮುಖದ ಕೈರಾತ'    ಪಕ್ಷಿಯಾಗಿತ್ತು. ಆ ದೃಶ್ಯ ನೋಡಿದ ನನಗೆ ಪರಿಸ್ಥಿತಿ ಅರ್ಥವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಆ ಕೈರಾತದ  ಕೊರಳಿಗೆ, ಕಾಲಿಗೆ, ಬಾಲದ ಗರಿಗಳಿಗೆ ಪ್ಲಾಸ್ಟಿಕ್ ದಾರ ಸುತ್ತು ಹಾಕಿ ಕೊಂಡಿತ್ತು.. ಜೊತೆಗೆ ಪಕ್ಷಿಯ ಪ್ರಾಣವೂ ಹೋಗಿತ್ತು,!  ಬಹುಶಃ ಉರುಳಿಗೆ ಸಿಕ್ಕು, ಹಾರಲಾರದೆ ನರಳಾಡಿ ಸತ್ತು ಮೂನರ್ಾಲ್ಕು ದಿನವಾಗಿರಬಹುದು.  ಯಾಕೆಂದರೆ ಅದಾಗಲೆ ಇರುವೆಗಳ ಸಾಲು ಹಚ್ಚಿದ್ದವು...  ಬಹುಶಃ ಗಾಳಿಯಲ್ಲಿ ತೇಲಿಬಂದ ಪ್ಲಾಸ್ಟಿಕ್ ದಾರ ಮುಳ್ಳಿನ ಗಿಡದಲ್ಲಿ ಸಿಕ್ಕು ಹಾಕಿಕೊಂಡಿರಬಹುದು. ಆಹಾರ ಅರಸಿ ಬಂದ ಈ  ಪಕ್ಷಿ ಹಾರುವಾಗ ಈ ದಾರಕ್ಕೆ ಸಿಲುಕಿ ತನ್ನ ಪ್ರಾಣವನ್ನು ಕಳೆದುಕೊಂಡಿದೆ. ಇಷ್ಟಕ್ಕೆಲ್ಲಾ ಮನುಷ್ಯರಾದ ನಾವು ಕಾರಣ. ಪ್ಲಾಸ್ಟಿಕ್ ತಾಜ್ಯದಿಂದ ಆಗುವ ಅನಾಹುತಗಳಿಗೆ ಇದೊಂದು ಉದಾಹರಣೆ ಪುಟ್ಟಾ ಎಂದು ಮಗನಿಗೆ ತಿಳಿಸಿ ಹೇಳಿದೆ. ಮಗ ಮಾತ್ರ ನಾ ಹೇಳುವುದನ್ನು ಕೇಳುತ್ತಾ ಮಿಸುಕಾಡದೆ ಮರದ ಕೊಂಬೆಯಲ್ಲಿ ದಾರಕ್ಕೆ ಸಿಕ್ಕು ಜೋತಾಡುತ್ತಿದ್ದ ಆ ಪಕ್ಷಿ ಕಳೆಬರವನ್ನೇ ನೋಡುತ್ತಾ..! ಪ್ಲಾಸ್ಟಿಕ್ ತೆಜಿಸಿದ್ರೆಜೀವ ಸಂಕುಲ ಉಳಿಸಬಹುದು ಅಲ್ವಾ ಅಪ್ಪಾ! ಎನ್ನತ್ತಾ ಎಂದು ದೀರ್ಘವಾಗಿ ಉಸಿರೆಳೆದುಕೊಂಡನು.


       ಅತ್ತ ಅಲ್ಲೆ ಪಕ್ಕದಲ್ಲಿದ್ದ ಕುರುಚಲು ಗಿಡದ ಪೊದೆಯಲ್ಲಿ ತಟ್ಟನೆ ಸಂಗಾತಿಯನ್ನು ಕಳೆದುಕೊಂಡ ಇನ್ನೊಂದು ಕೈರಾತ ಇಣುಕಿ ಇಣುಕಿ ನೋಡುತ್ತಿತ್ತು.. ಮತ್ತೆ ಮರೆಯಾಗುತ್ತಿತ್ತು. ಹತ್ತಿರ ಬರದಂತೆ ಆಗಾಗ ಹಾರಿ ಬಂದು  ಕುಕ್ಕುವಂತೆ  ಬಂದು ಹೋಗುತ್ತಿತ್ತು... ಸಂಗಾತಿಯನ್ನು ಕಳೆದುಕೊಂಡ ಇದರ ಮೂಖರೋಧನ ಕರಳುಹಿಂಡುವಂತಿತ್ತು. ವಿಶಿಷ್ಟವಾಗಿ ಮೆಲುದನಿಯಲ್ಲಿ ಕೂಗುತ್ತಿದ್ದ ಇದರ ಮೌನರೋಧನೆ ಕಂಡು ನನ್ನ ಕಣ್ಣಂಚಿನಲ್ಲಿ ನೀರಾಡುತ್ತಿತ್ತು.

ನಾವು ಮಾಡುವ ಸಣ್ಣ ತಪ್ಪಿನಿಂದ ಆಗುವ ಇಂತಹ ಅನಾಹುತಗಳೇ ಸಾಕ್ಷಿ. ಉಪಯೋಗಿಸಿ ಎಲ್ಲೆಂದರಲ್ಲಿ ಬೀಸಾಡಿದ ಒಂದು ಪ್ಲಾಸ್ಟಿಕ್ ದಾರವೇ ಈ ಪಕ್ಷಿಯ ಪ್ರಾಣ ಹಾನಿ ಮಾಡಿತು. ನೆಲ, ಜಲ ಸೇರಿದಂತೆ ಪರಿಸರಕ್ಕೆ ಅಪಾರ ಹಾನಿ ಮಾಡುವ ಮಾನವ ತನ್ನ ರೋಗಗಸ್ತ ಮನಸ್ಸನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟಿ ಜೀವ ಸಂಕುಲಗಳನ್ನು ಉಳಿಸುವ  ಕರ್ತವ್ಯ ನಮ್ಮದಾಗಬೇಕು. ಮುಂದಿನ ಪೀಳಿಗೆಯವರಿಗೆ ನಮ್ಮ ಸುಂದರ ಪರಿಸರ, ಜೀವ ಸಂಕುಲ ಉಳಿಯಬೇಕಾದರೆ ಇಂದಿನಿಂದಲೇ ಉತ್ತಮ ಬದಲಾವಣೆಯತ್ತ ಮುಖಮಾಡಬೇಕಾಗಿದೆ. ನಾವು ನಮ್ಮ ಪರಿಸರ, ಜೀವ ಸಂಕುಲಗಳ ಬಗ್ಗೆ ತಿಳಿಯುವ, ಮಹತ್ವವನ್ನು ಅರಿಯುವ ಹಾಗೂ ಈ ದಿನಗಳಲ್ಲಿ ನಮ್ಮ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆ ಆಲೋಚಿಸಬೇಕಾಗಿದೆ. ಪ್ಲಾಸ್ಟಿಕ್ ಜಾಗೃತಿಯ ಅರಿವನ್ನು ತಿಳಿಸುವ ಅವಶ್ಯಕತೆ, ಅನಿವಾರ್ಯತೆ ಎರಡೂ ನಮ್ಮ ಮೇಲಿದೆ. 

ಇಷ್ಟೆಲ್ಲಾ ಹೇಳಿದ ಮೇಲೂ ಈ 'ನೀಲಿ ಮುಖದ ಕೈರಾತ' ಪಕ್ಷಿಯ ಬಗ್ಗೆ ತಿಳಿಸದಿದ್ದರೆ ಹೇಗೆ..!? ಇವು ಕೋಗಿಲೆಯ ಕುಟಂಬಕ್ಕೆ ಸೇರಿದವುಗಳು. ಕೆಂಬೂತದ ಹತ್ತಿರದ ಸಂಬಂಧಿ. ಏಷ್ಯಾ ಖಂಡದ ಮೂಲನಿವಾಸಿಗಳಾದ ಈ  ಕೈರಾತಗಳಲ್ಲಿ ಹನ್ನೊಂದು ಬಗೆಯ ಜಾತಿಗಳಿವೆ. ಆಂಗ್ಲ ಭಾಷೆಯಿಂದ ಃಟಣಜ ಈಚಿಛಿಜಜ ಒಠಟಞಠಚಿ ಎಂದು, ವೈಜ್ಞಾನಿಕವಾಗಿ ಕಚಿಜಟಿಛಿಠಠಿಚಿಜಣ ಗಿಡಿಜಡಿಠಣಡಿ ಎಂಥಲೂ ಕರೆಯುತ್ತಾರೆ. ಇದರಲ್ಲಿ  ಈ ನೀಲಿ ಮುಖದ ಕೈರಾತವು ಒಂದು. ಕೋಗಿಲೆ ಮತ್ತು ಕಾಗೆಯ ಗುಣಲಕ್ಷಣಗಳನ್ನು ಒಟ್ಟೊಟ್ಟಿಗೆ ಮೈಗೂಡಿಸಿಕೊಂಡಂತಿರುವ ಈ ಕೈರಾತಗಳು ತಮ್ಮ ಕಣ್ಣಿನ ಸುತ್ತಲೂ ಆವರಿಸಿಕೊಂಡಿರುವ ನೀಲಿ ಬಣ್ಣದಿಂದ ಆಕಷರ್ಿತವಾಗಿವೆ.

ಅಂದಾಜು ಸುಮಾರು 30 ರಿಂದ 40 ಸೆಂಟಿ ಮೀಟರ್ ನಷ್ಟು ಉದ್ದವಿರಬಹುದು.. ನೀಲಿ ಮಿಶ್ರಿತ ಬೂದು ಬಣ್ಣದಿಂದ ತಲೆ ಮತ್ತು ಬೆನ್ನು ಭಾಗ ಮಿರಿ ಮಿರಿ ಮಿಂಚುತ್ತಿರುತ್ತದೆ. ಹೊಟ್ಟೆಯ ಬಾಗಸ್ವಲ್ಪ ಹಳದಿ ಮಿಶ್ರಿತ ಬೂದು ಬಣ್ಣದಿಂದ ಕೂಡಿರುತ್ತದೆ. ಕೋಗಿಲೆಯ ಕುಟುಂಬದ ಪ್ರಮುಖ ಗುಣದಂತಿರುವ ಉದ್ದದ ಬಾಲವನ್ನು ಹೊಂದಿರುತ್ತದೆ. ಹಸಿರು ಬಣ್ಣದ ಕೊಕ್ಕು. ನೀಲಿ ಬಣ್ಣದ ವೃತ್ತದೊಳಗೆ ಎದ್ದು ಕಾಣುವ ಕೆಂಪು ಕೆಂಡದಂತಹ ಕಣ್ಣುಗಳು ಈ ಕೈರಾತ ಪಕ್ಷಿಯ ಲಕ್ಷಣಗಳು.

ತುಂಬಾ ನಾಚಿಕೆ ಸ್ವಬಾವದ ಈ ಹಕ್ಕಿ ಕುರುಚಲು ಕಾಡಿನ ಪೊದೆಯೊಳಗಿಂದ ಇಣುಕಿ, ಮರೆಯಾಗುತ್ತದೆ. ಮೆಲುದನಿಯಲ್ಲಿ ಕೂಗುತ್ತಾ ಚಿಕ್ಕ ಚಿಕ್ಕ ಹುಳುಗಳು, ಮಿಡತೆ, ಹುಪ್ಪಡಿಗಳು ಪ್ರಮುಖ ಆಹಾರ..ಎಲೆಗಳಿಂದ ತಯಾರಾದ ತನ್ನ ಗೂಡಿನಲ್ಲಿ ಎರಡರಿಂದ ಮೂರು ಮೊಟ್ಟೆಗಳನ್ನಿಟ್ಟು ಕಾವುಕೊಟ್ಟು ಮಾರಿ ಮಾಡುತ್ತವೆ. ಗಾತ್ರದಲ್ಲಿ ಮತ್ತು ಬಣ್ಣದಲ್ಲಿ ಗಂಡು-ಹೆಣ್ಣು ಒಂದೊಕ್ಕೊಂದು ಹೋಲುತ್ತದೆ. ತನ್ನದೇ ಕುಟುಂಬದ ಕೆಂಬೂತಗಳ ತರ ಈ ಕೈರಾತಗಳು ಹಾರಾಟದಲ್ಲಿ ಸೋಮಾರಿ.. ಕೊಂಬೆಯಿಂದ ಕೊಂಬೆಗೆ, ನಡೆದಾಡಿ ಕಾಲ ಕಳೆಯುವುದೇ ಹೆಚ್ಚು..

ಈ ನೀಲಿ ಮುಖದ ದಕ್ಷಿಣ ಭಾರತದ ಮತ್ತು ಶ್ರೀಲಂಕಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.. ಇಂತಹ ಹಲವು ಜೀವ ಸಂಕುಲಗಳಿಗೆ ನಮ್ಮ ಈ ಹಾವೇರಿ ನೆಲದ ನಂಟು ಕೂಡಾ ಇವುಗಳಿಗೆ ಭದ್ರವಾಗಿ ನೆಲೆಕೊಟ್ಟಿದೆ.

- ನಾಮದೇವ ಕಾಗದಗಾರ

ರಾಣೆಬೆನ್ನೂರು

ಮೊ.998043000 

ಸುದ್ದಿ ಓದಿ