ದುರ್ಗಾಂಬಿಕಾ ದೇವಸ್ಥಾನ ಅವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 09: ತಾಲೂಕಿನ ಚಿಮ್ಮನಹಳ್ಳಿ ಗ್ರಾಮದ ಐತಿಹಾಸಿಕ ದೇವಾಲಯವಾದ ದುರ್ಗಾಂಬಿಕಾ ದೇವಾಲಯದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನಾಡಹಬ್ಬ ದಸರಾ ಅಮವಾಸ್ಯೆ ದಿನದಂದು ದೇಸ್ಥಾನದ ವಂಸಪಾರಂಪಾರಿಕ ಧರ್ಮದರ್ಶಿಗಳಾದ ಪೂಜಾರ ಭರಮಪ್ಪ ಇವರ ಸಮ್ಮುಖದಲ್ಲಿ ತಾಲೂಕು ದಂಡಾಧಿಕಾರಿಗಳಾದ ಶರಣಮ್ಮ ಸಸಿ ನಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.ಪರಿಸರ ಸಂರಕ್ಷಣೆ ನಮ್ಮೆಲ್ಲ ಹೊಣೆಯಾಗಿದೆ ಇಂದು ಪರಿಸರದ ಉಳಿವಿಗೆ ಪ್ರತಿಯೊಬ್ಬೂ ಶ್ರಮಿಸಬೇಕಿದೆ ಎಂಬುದು ದೈವ ಕಾರ್ಯದಲ್ಲಿ ಸಸಿ ನೆಡುವ ಕಾರ್ಯವು ಸಮಾಜಕ್ಕೆ ಉತ್ತಮ ಸಂದೇಶ ವಗಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಒಂದನೇ ನಲ್ಲುಕುದುರೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಹುಲಿಗೆಮ್ಮ ಹುಚ್ಚಪ್ಪ , ತಾಲೂಕು ಆರಾಧನೆ ಸಮಿತಿ ಸದಸ್ಯ ಪುಜಾರ ಸಿದ್ದಪ್ಪ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ರೆಡ್ಡಿ ,ನೆಲ್ಲುಕುಡುರೆ ಗ್ರಾ.ಪಂ ಸದಸ್ಯೆ ರಾಧ ಚಿಮ್ಮನಹಳ್ಳಿ, ಹರಿಜನ ದೇವೇಂದ್ರ್ಪ, ಮಸಾರಿ ನೆಲ್ಲುಕುದುರೆಯ ಸಿ.ಕುಮಾರ, ದೊಡ್ಡಬಸಪ್ಪ, ಮಾಲವಿ ಗ್ರಾ.ಪಂ.ಸದಸ್ಯ ಡಿ.ಪರುಶುರಮ, ಭದ್ರವಾಡಿ ಚಂದ್ರಶೇಖರ್, ನರೆಗಲ್ ಕೊಟ್ರೇಶ್, ಗಣೇಸ, ಕೃಷ್ಣ, ಎಂ.ಕೊಟ್ರೇಶ, ಚಿಮ್ಮನಹಳ್ಳಿ ಗ್ರಾಮದ ಮುಖಂಡರು ಹಾಗೂ ದುರ್ಗಾಂಬಿಕೆ ಭಕ್ತಮಂಡಳಿ ಉಪಸ್ಥಿತರಿದ್ದರು.