ರಾಷ್ಟ್ರೀಯ

ಸಸ್ಯ ಪ್ರೊಟೀನ್ ಆಧರಿತ ಪಿಜ್ಜಾ ಬಿಡುಗಡೆ

ಸಸ್ಯ ಪ್ರೊಟೀನ್ ಆಧರಿತ ಪಿಜ್ಜಾ ಬಿಡುಗಡೆ

ನೋಯ್ಡಾ, ಡಿಸೆಂಬರ್ 24: ಭಾರತದ ಪ್ರಮುಖ ಕ್ಯೂ ಎಸ್‌ ಆರ್ ಚೈನ್‌ ಡಾಮಿನೋಸ್ ಪಿಜ್ಜಾ, ಭಾರತದ ಮೊಟ್ಟ ಮೊದಲ ಸಸ್ಯ ಪ್ರೊಟೀನ್ ಆಧರಿತ “ದಿ ಅನ್‌ ಥಿಂಕಬಲ್‌ ಪಿಜ್ಜಾ” ಅನ್ನು ಪರಿಚಯಿಸಿದೆ.

ಸಸ್ಯ ಆಧರಿತ ಪ್ರೊಟೀನ್‌ನಿಂದಲೇ ಮಾಡಿದ ದಿ ಅನ್‌ಥಿಂಕಬಲ್‌ ಪಿಜ್ಜಾ ಶೇ. 100ರಷ್ಟು  ಸಸ್ಯಾಹಾರಿಯಾಗಿದೆ ಹಾಗೂ ಇದರಲ್ಲಿ ಚಿಕನ್‌ ನಲ್ಲಿರುವ ಗುಣಗಳೆಲ್ಲವೂ ಇವೆ.

ಸಸ್ಯದ ಪ್ರೊಟೀನ್‌ಗಳು ವಿಶ್ವದ ವಿವಿಧೆಡೆಯ ಗ್ರಾಹಕರ ಗಮನ ಸೆಳೆದಿವೆ. ಈ ಹೊಸ ಟ್ರೆಂಡ್ ಅನ್ನು ಭಾರತಕ್ಕೆ ಇದೇ ಮೊದಲ ಬಾರಿಗೆ ತಂದ ಕ್ಯೂಎಸ್‌ ಆರ್‌ ಬ್ರಾಂಡ್ ಡಾಮಿನೋಸ್ ಪಿಜ್ಜಾ ಆಗಿದೆ.

ವ್ಯಾಪಕವಾಗಿ ಗ್ರಾಹಕರ ಪರೀಕೆ ಮಾಡಿದ ನಂತರ ಪರಿಚಯಿಸಲಾದ ದಿ ಅನ್‌ ಥಿಂಕೆಬಲ್‌ ಪಿಜ್ಜಾ, ಸಸ್ಯಾಹಾರಿಗಳಿಗೆ ಮತ್ತು ಮಾಂಸಾಹಾರಿಗಳಿಗೆ ಆಸಕ್ತಿಕರ ಮತ್ತು ನವೀನ ಮೆನು ಆಯ್ಕೆಯನ್ನು ಒದಗಿಸುತ್ತದೆ.  ದೆಹಲಿ ಎನ್‌ಸಿಆರ್‌, ಮುಂಬೈ ಮತ್ತು ಬೆಂಗಳೂರಿನ ಎಲ್ಲ ಡಾಮಿನೋಸ್‌ ರೆಸ್ಟೋರೆಂಟ್‌ ಗಳಲ್ಲಿ ಪಿಜ್ಜಾ ಲಭ್ಯವಿರುತ್ತದೆ.

ಹೊಸ ಬಿಡುಗಡೆಯ ಬಗ್ಗೆ ಮಾತನಾಡಿದ ಜುಬಿಲಂಟ್ ಫುಡ್‌ ವರ್ಕ್ಸ್‌ ಲಿಮಿಟೆಡ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪೂರ್ಣಕಾಲಿಕ ನಿರ್ದೇಶಕ ಪ್ರತೀಕ್‌ ಪೋಟಾ “ಭಾರತದ ಮೊಟ್ಟ ಮೊದಲ ಸಸ್ಯ ಪ್ರೊಟೀನ್ ಆಧರಿತ ಉತ್ಪನ್ನವಾದ ದಿ ಅನ್‌ ಥಿಂಕಬಲ್‌ ಪಿಜ್ಜಾ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಈ ನವೀನ ಮತ್ತು ಶೇ. 100ರಷ್ಟು ಸಸ್ಯಾಹಾರಿ ಉತ್ಪನ್ನವು, ವಿಶ್ವದೆಲ್ಲೆಡೆ ವ್ಯಾಪಿಸುತ್ತಿರುವ ಸಸ್ಯ ಪ್ರೊಟೀನ್‌ ಬಳಕೆಯ ಅನುಭವವನ್ನು ಭಾರತೀಯ ಗ್ರಾಹಕರಿಗೆ ಒದಗಿಸಲಿದೆ. ಡಾಮಿನೋಸ್‌ ಎಂದಿಗೂ ಭಾರತೀಯ ಮಾರುಕಟ್ಟೆಗೆ ವಿಶಿಷ್ಟ ನಾವೀನ್ಯತೆಗಳನ್ನು ಪರಿಚಯಿಸಿದೆ ಮತ್ತು ಈ ಟ್ರೆಂಡ್‌ ಅನ್ನು ಭಾರತಕ್ಕೆ ತರುವಲ್ಲಿ ಮುಂಚೂಣಿಯಲ್ಲಿರುವುದಕ್ಕೆ ನಮಗೆ ಹೆಮ್ಮೆಯಿದೆ” ಎಂದು ತಿಳಿಸಿದ್ದಾರೆ.

ಸುದ್ದಿ ಓದಿ