ದೇವಿ ಪುರಾಣ ಪಾರಾಣದಿಂದ ಸಾಕಷ್ಟು ಪುಣ್ಯ
(ವ್ಯಾಖ್ಯಾನ-ಡಾ|| ಮರಳುಸಿದ್ಧ ಪಂಡಿತಾರಾಧ್ಯ ಒಡೆಯರ್ ವೀರಾಪುರ ಹಿರೇಮಠ)
ನಾಡಹಬ್ಬ ದಸರಾ ಪ್ರಯುಕ್ತವಾಗಿ ಎಲ್ಲೆಡೆ ಪಾರಾಣಗೈಯ್ಯುವ ಚಿದಾನಂದ ಅವಧೂತರು ಸುಮಾರು ಎರಡು ಶತಮಾನಗಳ ಹಿಂದೆ ರಚಿಸಿದಂತಹ "ಶ್ರಿದೇವಿ ಪುರಾಣ" ದ ಉಗಮದ ಬಗ್ಗೆ ನಾನು ಈ ಸಂದರ್ಭದಲ್ಲಿಕೆಲವು ಶ್ಲೋಕಗಳನ್ನು ಮತ್ತು ವಿವರಗಳನ್ನು ನೀಡುತ್ತಿದ್ದೇನೆ.
ಮಂದಹಾಸದಿ ಶಿವನು ತನ್ನಾತ್ಮ
ಚರಿತೆಯನು
ನಂದಿ ಕೇಳಿದನೆಂದು ಶಿವೆಯುಹಷರ್ಿಸುವಂತೆ||
ಚಂದದಲಿ ಸುರಗಣಕೆ ಹೇಳ್ದಪರಿಯಲ್ಲವನು
ಇಂದು ತಾ ಹೇಳಿದನು ಜಗದ ಮಂಗಳಕಾಗಿ ಹಿಂದೆ ಸಾವಣರ್ಿಕೆ ಮನ್ವಂತರದಲ್ಲಿ ಮಾಕೇಂಡೇಯ ಋಷಿಗಳು ತಮ್ಮ ಶಿಷ್ಯರಾದ ಕೌಷ್ಟುಕಿಗಳಿಗೆ ಹೇಳಿದರೆನ್ನಲಾದ ಶ್ರೀ ಆದಿಶಕ್ತಿಯ ಕಥೆಯನ್ನು ಸಂಸ್ಕೃತದ ಸಪ್ತಶತಿ (ದೇವಿ ಮಾಹಾತ್ಮೆ) ಎಂಬ ಹೆಸರಿನ ಗ್ರಂಥರೂಪದಲ್ಲಿ ಬರೆದಿಡಲಾಗಿದೆ. ಈ ಕಥಾ ವಸ್ತುವಿನ್ನೆ ಆಧಾರವಾಗಿಟ್ಟುಕ್ಕೊಂಡು ಶೀ ಚಿದಾನಂದಾವಧೂತರು ಸುಮಾರು ಎರಡು ಶತಮಾನದ ಹಿಂದೆ ಕನ್ನಡ ಭಾಷೆಯಲ್ಲಿ ದೇವಿ ಮಹಾತ್ಮೆಯನ್ನು ಬರೆದಿದ್ದಾರೆ. ಇದು "ಶ್ರೀದೇವಿ ಪುರಾಣ ಅಥವಾ ಮಹಾತ್ಮೆ ಎಂದೇ ಪ್ರಸಿದ್ಧಿ ಹೊಂದಿದೆ. ಇದು ಕನ್ನಡ ಭಾಷೆಯ ಭಾಮಿನಿ ಷಟ್ಪದಿಯ ಪದ್ಯ ಕಾವ್ಯವಾಗಿದ್ದು ಶ್ರೀ ಅವಧೂತರು ಈ ಗ್ರಂಥವನ್ನು ಹದಿನೆಂಟು ಅಧ್ಯಾಯಗಳಾಗಿ ವಿಂಗಡಿಸಿ ರಚಿಸಿದ್ದಾರೆ. ಫಲುಶ್ರತಿಯನ್ನು ಪೀಠೀಕಾಧ್ಯಾಯದಲ್ಲೇ ಅಳವಡಿ ಸಿರುವುದು ಒಂದು ವಿಶೇಷ ಅಲ್ಲದೆ ಪುರಾಣದಲ್ಲಿ ಬರುವ ಹದಿನೆಂಟು ಅಧ್ಯಾಯಗಳನ್ನು ಮೂರು ಚರಿತ್ರೆಗಳನ್ನಾಗಿ ವಿಂಗಡಿಸಿ ಪ್ರಥಮ ಚರಿತ್ರೆ, ಮಧ್ಯಮ ಚರಿತ್ರೆ ಮತ್ತು ಉತ್ತಮ ಚರಿತ್ರೆ ಎಂದು ಗುರುತಿಸಿಲಾಗಿದೆ. ಸಂಸ್ಕೃತದ ಕಾಳಿಕಾ ಪುರಾಣದ ಸ್ಪತಸತಿ ಗ್ರಂಥದಲ್ಲಿಯು ಕೂಡ ಮೂರು ಚರಿತ್ರೆಗಳನ್ನಾಗಿ ವಿಂಗಡಿಸಿದಲ್ಲದೆ, ಆರ್ಗಲ್, ಶೀಲಕ, ಕವಚ ಇತ್ಯಾದಿ ಸ್ತೋತ್ರಭಾಗವಿದ್ದು ಕೊನೆಯಲ್ಲಿ ಮೂತರ್ಿ ರಹಸ್ಯ ವೈಕೃತಿರಹಸ್ಯ ಫಲಶ್ತುತಿಗಳನ್ನೋಳಗೊಂಡು ಸುಮಾರು ಏಳು ನೂರು ಶ್ಲೋಕಗಳಿದ್ದು ಫಲಶೃತಿ ಸೇರು ಎಂಟುನೂರು ಶ್ಲೋಕವುಳ್ಳ ಗ್ರಂಥವನ್ನು ಸಪ್ತಸತಿ ಎಂದು ಕರೆಯಲಾಗಿದೆ. ಇಲ್ಲಿ ದೇವಿಯ ಕಥೆಯನ್ನು ತಿಳಿಸುವ ಏಳುನೂರು ಶ್ಲೋಕಗಳಿದ್ದರಿಂದ ಈ ಕಾಳಿಕಾಪುರಾಣಕ್ಕೆ ಸಪ್ತಸತಿ ಎಂದು ಅನ್ವರ್ಥನಾಮವಾಗಿದೆ.
ಇದೇ ರೀತಿ ಚಿದಾನಂದ ಅವಧೂತರು ಬರೆದಿರುವ ದೇವಿ ಮಹಾತ್ಮೆಯಲ್ಲಿಯೂ ಕೂಡ ಮುಖ್ಯ ಏಳುನೂರು ಷಟ್ಪದಿಗಳಿದ್ದು ಪೀಠಿಕೆ ಅಧ್ಯಾಯದಲ್ಲಿನ ಫಲಶ್ರುತಿ ಮೂತರ್ಿರಹಸ್ಯ ಇತ್ಯಾದಿ ಸೇರಿ ಏಳುನೂರು ತೊಂಬತ್ತಾರು ಪದ್ಯಗಳಿವೆ. ಈ ಕಾರಣದಿಂದಾಗಿ ಈ ಗ್ರಂಥವನ್ನು ಕನ್ನಡದ ಸಪ್ತಸತಿ ಎಂದು ಕರೆಯಲು ಅಭ್ಯಂತರವಿಲ್ಲ.ಸಾಧು ಸಂತರು ಋಷಿಮುನಿಗಳು ಆಚಾರ್ಯ ಮಹಾಚಾರ್ಯರು ಶರಣರು ದಾಸ ವರೇಣ್ಯರು ಆದಿಜ್ಞಾನಿಗಳು ತಮಗೆ ತಿಳಿದಿದ್ದನ್ನು ಬೇರೆಯವರಿಗೆ ತಿಳಿಸಲಿಕ್ಕಾಗಿ ಉತ್ತಮ ಸಾಹಿತ್ಯ ದೊಂದಿಗೆ ಉದಾತ್ತ ಕೃತಿಗಳನ್ನು ರಚಿಸಿ ಭಾರತಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಯತ್ಮ ಶೀಲರಾಗಿದ್ದಾರೆ.
'ಪುರಾನಯತೇತಿ ಪುರಾಣಂ' ಎಂಬ ನಿಷ್ಪತ್ತಿಯೆಂಬ ಬಹಳ ಹಿಂದಕ್ಕೆ ಅಂದರೆ ಜೀವಿಯನ್ನು ತನ್ನ ಹುಟ್ಟಿನ ಪೂರ್ವಕ್ಕೆ ಕರೆದೊಯ್ಯುದು ಜ್ಞಾನ ಸಂಗ್ರಹದ ಕಥಾಭಾಗಗಳನ್ನು ಪುರಾಣಗಳೆಂದು ಮತ್ತು ಇನ್ನೊಂದು ಅರ್ಧದಲ್ಲಿ ಪುರಾ ಇತಿ ನೂತನಮ್ ಎಂದು ಪುರಾಣ ಅಂದರೆ ಹಳೆಯದಾದ ಮತ್ತು ಮುಂದೆ ಬರುವ ವಿಚಾರವನ್ನು ಮನಮುಟ್ಟುವಂತೆ ತಿಳಿಸಿದ ಸಾಹಿತ್ಯವನ್ನು ಪುರಾಣಗಳೆಂದು ಕರೆಯಲಾಯಿತು.
ಚಿದಾನಂದವಧೂತರು ಬರೆದಿರುವ ದೇವಿ ಮಹಾತ್ಮೆಯನ್ನು ಪ್ರತಿದಿನ ಭಕ್ತಿಯಿಂದ ಪಾರಾಯಣ ಮಾಡುವುದರಿಂದ ಸಾಕಷ್ಟು ಪುಣ್ಯ ದೊರಕುತ್ತದೆ. ಮುಂದೆ ಒಂದು ಎರಡು ನಾಲ್ಕುಗಳಾಗಿ ಹೀಗೆ ದ್ವಿಗುಣಗೊಳ್ಳುತ್ತಾ ಜೀವನದಲ್ಲಿ ಉನ್ನತಿ ಸಾಧಿಸುವುದರ ಜೊತೆಗೆ ಚತುವರ್ಿಧ ಪರುಷಾರ್ಥಗಳನ್ನು ಹೊಂದಿ ಸುಖೀಯಾಗುತ್ತಾರೆ. ನಮ್ಮೊಳಗಿರುವ ಚಿತ್+ಆನಂದ= ಚಿದಾನಂದ ಸ್ಥಿತಿಯ ಅರಿವಿನ ಶಕ್ತಿ ಜಾಗೃತವಾಗಿ ಗುರು ಚಿದಾನಂದರ ಅಂದರೆ ಅರಿವಿನಾನಂದ ಸ್ಥಿತಿ ನಮ್ಮನ್ನು ಉದ್ಧರಿಸುತ್ತದೆ. ಇದರ ನಿಜ ಸಾರಾಂಶ ಹರಪಥದ ಸರಿವಡೆ ಗುರಪಥವೇ ಮೊದಲು ದೇವರೊಲುಮೆಗೆ ಗುರುವಿನ ಕರುಣೆ ಸಂಪಾದಿಸಬೇಕೆಂದುದನ್ನು ಮಾಮರ್ಿಕವಾಗಿ ಉತ್ತರಿಸಿದ್ದಾರೆ.
- ಅಮರೇಶ್ವರ ಶಾಸ್ತ್ರಿಗಳು
ಮೊ.9008984448