‘ಫೋನ್ ಇನ್ ಕಾರ್ಯಕ್ರಮ ವಿದ್ಯಾಥಿಗಳಿಗೆ ಅನುಕೂಲ’
ಚಿಕ್ಕೋಡಿ 28: ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಮಕ್ಕಳಲ್ಲಿ ಭಯ ನಿವಾರಣೆ ಮಾಡುವುದು. ಫಲಿತಾಂಶ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮಕ್ಕಳ ಜೊತೆ ಫೋನ್ ಇನ್ ಕಾರ್ಯಕ್ರಮ ಉಪಯೋಗವಾಗಿದೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.
ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹತ್ತನೆ ತರಗತಿ ಪರೀಕ್ಷೆ ಆರಂಭವಾಗುವವರಿಗೂ ಪ್ರತಿವಾರ ನಿರಂತರವಾಗಿ ಫೋನ್ ಇನ್ ಕಾರ್ಯಕ್ರಮ ನಡೆಸಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ ಎಂದರು.
ಜೂನ್ 2021 ವಾರ್ಷಿಕ ಪರೀಕ್ಷೆ ಅತ್ಯುತ್ತಮ ಅಂಕಗಳಿಸಲು ಮಕ್ಕಳಿಗೆ ಶುಭ ಹಾರೈಸಿ ಇಂಗ್ಲೀಷ, ಮರಾಠಿ, ಉರ್ದು ಮಕ್ಕಳಿಗೆ ಪ್ರತ್ಯೇಕ ಫೋನ್ ಇನ್ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.
ಚಿಕ್ಕೋಡಿ ತಾಲೂಕಿನ 12 ವಿಷಯವಾರು ಸಂಪನ್ಮೂಲ ಶಿಕ್ಷಕರು ಪಾಲ್ಗೊಂಡು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಂಟು ವಲಯದ ಮಕ್ಕಳು ಪೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಅವಶ್ಯಕ ಬೇಕಾಗಿರುವ ವಿಷಯವಾರು ಪ್ರಶ್ನೆ ಕೇಳಿ ಸಮಸ್ಯೆ ಬಗೆಹರಿಸಿಕೊಂಡರು.
ಪರೀಕ್ಷೆ ನೋಡಲ್ ಅಧಿಕಾರಿ ಅರಹಂತ ಬಿರಾದಾರ ಪಾಟೀಲ, ತಾಲೂಕಾ ನೋಡಲ್ ಅಧಿಕಾರಿ ಎಂ.ಎ.ಕನವಾಡೆ ಮುಂತಾದವರು ಇದ್ದರು.