ಶಿಗ್ಗಾವ್

ಫಾರ್ಮಸಿಸ್ಟ್‌ ಗ್ರಾಹಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು

ಫಾರ್ಮಸಿಸ್ಟ್‌ ಗ್ರಾಹಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು

ಲೋಕದರ್ಶನ ವರದಿ 

ಶಿಗ್ಗಾವಿ 17: ಫಾರ್ಮಸಿಸ್ಟ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು ಮತ್ತು ಕಾನೂನನ್ನು ಸೂಕ್ತ ರೀತಿಯಿಂದ ಪಾಲಿಸುವುದು ಮತ್ತು ಗ್ರಾಹಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು ಎಂದು ಸಹಾಯಕ ಓಷಧ ನಿಯಂತ್ರಕರು  ನೀಲೀಮಾ ಕೊಟ್ಟಣ ಕರೆ ನೀಡಿದರು.  

ಎಸ್‌.ಬಿ.ಬಿ.ಎಂ.ಡಿ ಮಹಾವಿದ್ಯಾಲಯದ ಸಭಾಭವನದಲ್ಲಿ ವಿಶ್ವ ಫಾರ್ಮಸಿಸ್ಟ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ವಿಜೇತೆ  ನೀಲೀಮಾ ಕೊಟ್ಟಣ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ "ಫಾರ್ಮಸಿಸ್ಟ ಶಪಥ"ವನ್ನು ಭೋಧಿಸಿ ಮಾತನಾಡಿದ ಅವರು ಓಷದ ವಿತರಕರು ಇಂದಿನ ಸರಕಾರದ ಮಾನದಂಡಗಳಿಗೆ ಬದ್ದರಾಗಿದ್ದು ಕಾರ್ಯನಿರ್ವಹಣೆ ಮಾಡಬೇಕಾಗಿದೆ ಎಂದರು. 

  ತಾಲೂಕಾ ಉಪಾಧ್ಯಕ್ಷ ಶಿವಕುಮಾರ ಬಿ. ಅದವಾನಿಮಠ ಪ್ರಾಸ್ತಾವಿಕ ಮಾತನಾಡಿ  ಫಾರ್ಮಸಿಸ್ಟಗಳ ಚರಿತ್ರೆ ಸವಿಸ್ತಾರವಾಗಿ ತಿಳಿಸಿದ ಜಿಲ್ಲೆಯ ಮೊದಲ ಮಹಿಳಾ ಸಹಾಯಕ ಓಷಧ ನಿಯಂತ್ರಕರು ನೀಲೀಮಾ ಆಶೋಕ ಕೊಟ್ಟಣ ರವರು ಎಂದರು.  

ಜೀವಣ್ಣ ಸಂಕಣ್ಣನವರ  ಮಾತನಾಡಿ "ನಾವೆಲ್ಲ ತುಂಬಾ ಜವಾಬ್ದಾರಿ ಇರುವ ವೃತ್ತಿಯನ್ನು ಮಾಡುತ್ತೇವೆ ಪ್ರಜ್ಞಾವಂತರಾಗಿ ಸೇವೆ ನೀಡೋಣ" ಎಂದು ಕರೆ ನೀಡಿದರು. ಹಿರಿಯ ಓಷಧ ವ್ಯಾಪಾರಸ್ಥ ಹರೀಶ ಮಾಳವದೆ, ನಿಳೋಬಾ ಮಾಳವದೆ ಮಾತನಾಡಿದರು. 

  ತಾಲೂಕಾ ಅಧ್ಯಕ್ಷ ಮಹಾಂತೇಶ ಬಳಿಗಾರ ಆಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಹಾಯಕ ಓಷಧ ನಿಯಂತ್ರಕರ ಸಾಕಷ್ಟು ಸಹಕಾರ, ಮಾರ್ಗದರ್ಶನ ನಿರಂತರವಾಗಿ ಸಂಘಕ್ಕೆ ಹಾಗೂ ತಾಲೂಕಿನ ಎಲ್ಲ ಓಷಧ ವ್ಯಾಪಾರಸ್ತರಿಗೆ ಇರಲಿ ಎಂದು ಮನವಿ ಮಾಡಿದರು.  

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಖಾಜೀಖಾನ, ಮಂಜುನಾಥ ಮೆಲಗಿರಿ, ಕುಮಾರ ಹೆಸರೂರ,  ಶ್ರೀಪಾದ ಸಂಕಣ್ಣನವರ, ವಿಜಯಕುಮಾರ ಹನಮಕ್ಕನವರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ಕುಮಾರಗೌಡ ಪಾಟೀಲ,  ಸುವರ್ಣ ಕೊಟ್ಟಣ, ಲಲಾಟೆಪ್ಪ ಕಲ್ಮನಿ, ಜಿ. ಎನ್‌. ಯಲಿಗಾರ,  ಸುಜಾತಾ ಬಳಿಗಾರ, ಮಮತಾಜ ಬೊಮ್ಮನಹಳ್ಳಿ, ರವಿ ಬಾಳಿಕಾಯಿ ಹಾಗೂ ತಾಲೂಕಿನಲ್ಲಿ ಎಲ್ಲ ಓಷಧ ವ್ಯಾಪಾರಸ್ಥರು ಭಾಗವಹಿಸಿದ್ದರು. ತಾಲೂಕಿನ ಸಂಘದ ಕಾರ್ಯದರ್ಶಿ  ರಾಘವೇಂದ್ರ ದೇಶಪಾಂಡೆ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ