ಬಳ್ಳಾರಿ

ಶಿವಪ್ರಸಾದ್ ಕಲ್ಮಠಗೆ ಪಿಎಚ್‌ಡಿ ಗೌರವ: ಸನ್ಮಾನ

ಶಿವಪ್ರಸಾದ್ ಕಲ್ಮಠಗೆ ಪಿಎಚ್‌ಡಿ ಗೌರವ: ಸನ್ಮಾನ

ಬಳ್ಳಾರಿ 15: ರಾವ್ ಬಹದ್ದೂರ್ ವೈ. ಮಹಾಬಲೇಶ್ವರ​‍್ಪ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್‌ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಶಿವಪ್ರಸಾದ್ ಕಲ್ಮಠ ಅವರು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಟಿ. ಹನುಮಂತರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಎಫೆಕ್ಟಿವ್ ಪ್ಯಾಟರ್ನ್‌ ಡಿಸ್ಕವರಿ ಯೂಸಿಂಗ್ ಟೆಕ್ಸ್‌-್ಟ ಮೈನಿಂಗ್" ಎಂಬ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಪಿ.ಎಚ್‌.ಡಿ. ಪದವಿ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ನಗರದ ಶೇಟ್ರು ಓಣಿಯಲ್ಲಿರುವ ಸವಿತಾ ಸಮಾಜದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್‌.ತಿಪ್ಪಣ್ಣ ಅವರು ತಮ್ಮ ಕಾರ್ಯಾಲಯದಲ್ಲಿ ಶಿವಪ್ರಸಾದ್ ಕಲ್ಮಠ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.  

ಈ ಸಂದರ್ಭದಲ್ಲಿ ಮೆಡಿಕಲ್ ಸ್ಟೋರ್ ವಿಜಯಕುಮಾರ್, ಗುರುಬಸವಸ್ವಾಮಿ, ವೆಂಕಟೇಶ್, ಜಗದೀಶ್ ಸ್ವಾಮಿ, ರಾಮಣ್ಣ, ಎರಿ​‍್ರಸ್ವಾಮಿ, ರವಿ, ತ್ಯಾಗರಾಜ, ಕೃಷ್ಣ ಗೌತಮ್, ತೇಜೇಶ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ