ಪೆಟ್ರೋಲ್ ಗೆ ಹಾಹಾಕಾರ : ಬಂಕ್ ಗೆ ಮುಗಿಬಿದ್ದ ಜನ : ವಾಹನಗಳ ಸಾಲು ಸಾಲು
ಸಂಕೇಶ್ವರ : ಅಮೆರಿಕ, ಇಸ್ರೇಲ್ ಹಾಗೂ ಇರಾನ್ ದೇಶದ ನಡುವೆ ನಡೆಯುತ್ತಿರುವ ಸಂಘರ್ಷ ದ ಹಿನ್ನೆಲೆ ಸಂಕೇಶ್ವರ ಪಟ್ಟಣದ ಪೆಟ್ರೋಲ್ ಬಂಕ್ ಗಳಲ್ಲಿ ಪ್ರೆಟ್ರೋಲ್ ಖಾಲಿಯಾಗಿ ಪೆಟ್ರೋಲ್ ದೊರೆಯದ ಹಿನ್ನೆಲೆಯಲ್ಲಿ ಬಂಕ್ ಗಳ ಮುಂದೆ ವಾಹನ ಸವಾರರು ಸಾಲು ಸಾಲಾಗಿ ನಿಂತು ಪ್ರೆಟ್ರೋಲ್ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಸಂಕೇಶ್ವರ ಪಟ್ಟಣದ ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ ಪ್ರೆಟ್ರೋಲ್ ಸಿಗದೆ ವಾಹನ ಸವಾರರು ಪರಾದಾಡುತ್ತಿದ್ದು, ಕೆಲವು ಬಂಕ್ ಗಳು ಪೆಟ್ರೋಲ್ ಇಲ್ಲದೆ ಬಂದಾಗಿವೆ ಎನ್ನಲಾಗಿದೆ. ಆದರೆ ಪಟ್ಟಣದ ಕೇವಲ ಒಂದು ಬಂಕ್ ನಲ್ಲಿ ಪೆಟ್ರೋಲ್ ಇರುವದರಿಂದ ಬಂಕ್ ಗೆ ಪೆಟ್ರೋಲ್ ಗಾಗಿ ಸವಾರರು ಮುಗಿಬಿದ್ದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕೆಲವರು ದೂರದ ಊರುಗಳಿಗೆ ತೆರಳಬೇಕಾದ ವಾಹನಗಳ ಸವಾರರು ಸರತಿ ಸಾಲಿನಲ್ಲಿ ನಿಂತು ಸುಸ್ತಾಗಿ ಹೋಗುವಂತಾ ಪರಿಸ್ಥಿತಿ ಎದುರಾಗಿದೆ.