ತಾಳಿಕೋಟಿ

ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿ ಮನವಿ

ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿ ಮನವಿ

ತಾಳಿಕೋಟೆ06: ಬೇಡ ಜಂಗಮ ಜಾತಿಯ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಸಮಸ್ಯೆಯನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಬೇಡ ಜಂಗಮ ಮಹಾ ಸಭಾದ ತಾಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಕತ್ರಿ ಬಜಾರ, ಶಿವಾಜಿ ವೃತ್ತ, ಬಸ್ ನಿಲ್ದಾಣ ಮೂಲಕ ತಹಶೀಲ್ದಾರ ಕಚೇರಿ ತಲುಪಿತು. ನಂತರ ತಹಶೀಲ್ದಾರ ಶ್ರೀಧರ ಗೋಟೂರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಬೇಡ ಜಂಗಮರನ್ನು ಪರಿಶಿಷ್ಟ ಜಾತಿಗೆ ಸೇರಸಬೇಕು ಎಂದು ಆಗ್ರಹಿಸಿ ಬೆಂಗಳೂರಲ್ಲಿ ನಡೆಯುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದೆ. ಸತ್ಯ ಪ್ರತಿಪಾದನಾ ಸತ್ಯಾಗ್ರಹದ ನೇತೃತ್ವ ವಹಿಸಿರುವಂತ ನ್ಯಾಯವಾದಿ ಬಿ.ಡಿ.ಹಿರೇಮಠ ಅವರನ್ನು ಏಕಾಏಕಿ ಬಂಧಿಸಿರುವದು ಸರಿಯಲ್ಲ. ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿ ಶಾಂತಿಯುತವಾಗಿ ಹೋಗುತ್ತಿರುವಾಗ ಬಮಧಿಸಿದ್ದಾರೆ. ಇದು ನ್ಯಾಯಯುತವಾದ ಹೋರಾಟವನ್ನು ಹತ್ತಿಕ್ಕುವ ಸಂಚಾಗಿದೆ. ಇದರಿಮದ ಸಂವಿಧಾನದಡಿಯಲ್ಲಿ ಹೋರಾಟ ನಡೆಸುವ ಹಕ್ಕನ್ನು ಕಿತ್ತಿಕೊಂಡಂತಾಗಿದೆ. ಬಿ.ಡಿ.ಹಿರೇಮಠ ಮತ್ತು ಹೋರಾಟಗಾರರ ಬಂಧನವನ್ನು ಖಂಡಿಸುವ ಮಹಾಸಭಾ ಕೂಡಲೇ ಬೇಡ ಜಂಗಮ ಪ್ರಮಾನ ಪತ್ರದ ಸಮಸ್ಯೆನ್ನು ಬಗೇಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ಚಬನೂರದ ರಾಮಲಿಂಗ ಶ್ರೀಗಳು, ತಮದಡ್ಡಿ ಶ್ರೀಗಳು,  ನಾವದಗಿ ರಾಜೇಂದ್ರ ಒಡೆಯರ, ಕೂರವಾರದ ಕಾಶಿಲಿಂಗ ಸ್ವಾಮೀಜಿ  ವಡವಡಗಿಯ ನಂದಿಮಠ  ಸ್ವಾಮಿಜಿ, ಮುಖಂಡರಾದ ಶರಣಯ್ಯ ಹಿರೇಮಠ, ಮಲ್ಲಯ್ಯ ಸಾಲಿಮಠ, ಶ್ರೀಗುರು ಹಿರೇಮಠ, ಈರಾತಯ್ಯ ಹಿರೇಮಠ, ರಾಜಶೇಖರ ಹಿರೇಮಠ, ಗುರಯ್ಯ ಹಿರೇಮಠ, ಬಸಯ್ಯ ಹಿರೇಮಠ, ಸೋಮು ಹಿರೇಮಠ, ಶಿವಲಿಂಗಯ್ಯ ಹಿರೇಮಠ, ನಾಗು ಡೋಣೂರಮಠ, ಶಂಕ್ರಯ್ಯ ಗದಗಿನಮಠ, ಚಿನ್ನಯ್ಯ ಹಿರೇಮಠ, ಮಲ್ಲು ಕೂಡಗಾನೂರ, ಕಾಶಿನಾಥ ಹಿರೇಮಠ, ಪ್ರಕಾಶ ಹಿರೇಮಠ, ಮಲ್ಲು ಹಿರೇಮಠ, ಈರಯ್ಯ ಹಿರೇಮಠ, ಸುರೇಶ ಹಿರೇಮಠ, ಷಡಕ್ಷರಿ ಗಾಠಂಪಳ್ಳಿ, ಸಂಗಯ್ಯ ಮೈಲೇಶ್ವರ, ಬಸಯ್ಯ ಬೀಳೆಭಾವಿ ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ