ಮುದ್ದೆಬಿಹಾಲ್

ಕೇಸಾಪೂರದಲ್ಲಿ ಅಕ್ರಮ ಮಧ್ಯಮಾರಾಟ ನಿಷೇಧಕ್ಕೆ ಆಗ್ರಹಿಸಿ ಮನವಿ

ಕೇಸಾಪೂರದಲ್ಲಿ ಅಕ್ರಮ ಮಧ್ಯಮಾರಾಟ ನಿಷೇಧಕ್ಕೆ ಆಗ್ರಹಿಸಿ ಮನವಿ

ಮುದ್ದೇಬಿಹಾಳ 25: ತಾಲೂಕಿನ ಕೇಸಾಪೂರ ಗ್ರಾಮಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮಧ್ಯಮಾರಾಟ ನಿಷೇಧಿಸುವಂತೆ ಆಗ್ರಹಿಸಿ ಕೇಸಾಪೂರ ಗ್ರಾಮದ ಮುಖಂಡರು ಮಂಗಳವಾರ ತಹಶಿಲ್ದಾರ ಬಲರಾಮ ಕಟ್ಟಿಮನಿ ಯವರಿಗೆ ಹಾಗೂ ತಾಲೂಕಾ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಸಧ್ಯ ಕೇಸಾಪೂರದಲ್ಲಿನ ಕಿರಾಣಿ ಅಂಗಡಿ, ಪಾನ ಶಾಪ್ ಮತ್ತು ಚಹಾ ಅಂಗಡಿಗಳಲ್ಲಿ ಬಹು ದಿನಗಳಿಂದ ಅಕ್ರಮ ಮಧ್ಯಮಾರಾಟ ಮಡುತ್ತಾ ಬಂದಿದ್ದಾರೆ. ಇದರಿಂದ ನಮ್ಮ ಊರಿನ ಯುವಕರು, ಕಾಲೇಜ ವಿದ್ಯಾರ್ಥಿಗಳು ಸಹ ಮದ್ಯ ವ್ಯಸನಿಗಳಾಗಿದ್ದಾರೆ, ಎಷ್ಟೋ ಕುಟುಂಭಗಳು ಬೀದಿ ಪಾಲಾಗಿವೆ, ಎಷ್ಟೋ ಜನರು, ಯುವಕರು ಸಹ ಕುಡಿತದ ಚಟಕ್ಕೆ ಬಲಿಯಾಗಿ ಜೀವ ಕಳೆದುಕೊಂಡಿದ್ದಾರೆ, ಇನ್ನೇಷ್ಟೋ ಜನರು,ಯುವಕರು ಇನ್ನೂ ಸಾಯುವ ಸ್ಥಿತಿಯಲ್ಲಿದ್ದಾರೆ ಆದಕಾರಣ ನಮ್ಮ ಊರಿನ ಎಲ್ಲಾ ಹಿರಿಯರು ಮಹಿಳಾ ಸಂಘದವರು, ಕಾಲೇಜ ವಿದ್ಯಾರ್ಥಿಗಳು ದಿನಾಂಕ: 10/06/2024 ರಂದು ಊರಲ್ಲಿ ಸಭೆ ಸೇರಿ ನಮ್ಮ ಊರಿನಲ್ಲಿ ಅಕ್ರಮ ಮಧ್ಯಮಾರಾಟವನ್ನು ನಿಷೇದಿಸಬೇಕೆಂದು ನಿರ್ಧರಿಸಿದರು ಅಂದೆ ನಮ್ಮ ಊರಿನಲ್ಲಿ ಅಕ್ರಮ ಮಧ್ಯಮಾರಾಟ ಮಾಡುವವರ ಅಂಗಡಿಗಳಿಗೆ ಹೋಗಿ ಇನ್ನೂ ಮುಂದೆ ಅಕ್ರಮ ಮಧ್ಯಮಾರಾಟ ಮಾಡಬಾರದು ಎಂದು ತಿಳಿ ಹೇಳಲಾಯಿತು, ಅಂದೆ ಪಕ್ಕದ ಅವಳಿ ಊರುಗಳಾದ ಆಲೂರ ಹಾಗೂ ನೆರಬೆಂಚಿ ಗ್ರಾಮಗಳಿಗೆ ಹೋಗಿ ಆ ಊರುಗಳ ಸಮಸ್ತ ಎಲ್ಲಾ ದೈವ ಮಂಡಳಿ, ಮಹಿಳಾ ಸಂಘದವರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಕಾರದೊಂದಿಗೆ ಆ ಊರುಗಳಲ್ಲಿ ಅಕ್ರಮ ಮಧ್ಯಮಾರಾಟ ಮಾಡುವವರ ಅಂಗಡಿಗಳಿಗೆ ಹೋಗಿ ಅವರಿಗೂ ಸಹ ತಿಳಿ ಹೇಳಿದರು, ಸಹ ಇನ್ನೂ ಕೆಲ ಅಂಗಡಿಯವರು ಅಕ್ರಮ ಮಧ್ಯಮಾರಾಟವನ್ನು ಕಳ್ಳತನದಿಂದ ಮಾರುತ್ತಿದ್ದಾರೆ, ಅಕ್ರಮ ಮಧ್ಯಮಾರಾಟ ಮಾಡುವವರ ವಿರುದ್ಧ ಹಾಗೂ ಈ ಮೂರು ಊರುಗಳಿಗೆ ಅಕ್ರಮ ಮದ್ಯ ಸಾಗಾಣಿಕೆ ಮಾಡುವ ಭಾರ್ ಅಂಗಡಿಗಳ ಮಾಲಿಕರ ವಿರುದ್ಧ ಕಾನೂನುನ ಕ್ರಮ ತಗೆದುಕೊಂಡು ಕೂಡಲೇ ಅಕ್ರಮ ಮಧ್ಯಮಾರಾಟ ದಂದೆಯನ್ನು ತಡೆಗಟ್ಟಬೇಕು ಇಲ್ಲದಿದ್ದರೇ ಗ್ರಾಮದ ಎಲ್ಲ ಮಹಿಳೆಯರು ಸೇರಿಕೋಂಡು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. 

ಮುಖಂಡರಾದ ಮಲ್ಲಿಕಾರ್ಜುನ ದೇಶಮುಖ, ವಾಯ್‌.ಬಿ. ತಳವಾರ, ಶಾಂತಗೌಡ ನಾಡಗೌಡ, ಜಿ ಜಿ ಗೌಡರ, ದ್ಯಾಮಣ್ಣ ಹಿರೇಕುರಬರ, ಸಿದ್ದಪ್ಪ ಉಪ್ಪಿನಕಾಯಿ, ಸುರೇಶ ಭೈರವಾಡಗಿ, ಸಂಗನಗೌಡ ಪಾಟೀಲ, ನಾಗರಾಜ ಹಿರೇಕುರಬರ, ಶ್ರೀನಿವಾಸ ಗೌಂಡಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ