ತಾಳಿಕೋಟಿ

ಅನಿಶ್ಚಿತ ವಿದ್ಯುತ್ ಸ್ಥಗಿತ ವಿರೋಧಿಸಿ ಮನವಿ

ಅನಿಶ್ಚಿತ ವಿದ್ಯುತ್ ಸ್ಥಗಿತ ವಿರೋಧಿಸಿ ಮನವಿ

ತಾಳಿಕೋಟಿ 25: ಪಟ್ಟಣದಲ್ಲಿ ಕೆಲವು ದಿನಗಳಿಂದ ಪದೆಪದೆ ಅನಿಶ್ಚಿತವಾಗಿ ವಿದ್ಯುತ್ ಕಣ್ಣುಮುಚ್ಚಾಲೆ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಿ ನಿಯಂತ್ರಿಸಬೇಕೆಂದು ಆಗ್ರಹಿಸಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು. 

ಪಟ್ಟಣ ತಾಲೂಕಾ ಕೇಂದ್ರವಾಗಿ ಪರಿವರ್ತನೆಯಾದ ನಂತರ ತೀವ್ರಗತಿಯಲ್ಲಿ ಅಭಿವೃದ್ಧಿಯನ್ನು ಸಾಧಿಸುತ್ತಿದೆ. ತಾಲೂಕಿಗೆ ಅಗತ್ಯವಾದ ಎಲ್ಲಾ ಕಾರ್ಯಾಲಯಗಳೂ ಆರಂಭವಾಗುತ್ತಿವೆ. ಇಲ್ಲಿರುವ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಸಮರ​‍್ಕವಾಗಿ ವಿದ್ಯುತ್ ಪೂರೈಸಲು 110/ಕೆವಿ ಸ್ಟೇಶನ್ ಆರಂಭಿಸಲಾಗಿದೆ. ಆದರೂ ಇತ್ತೀಚೆಗೆ ವಿದ್ಯುತ್ ಸಮರ​‍್ಕವಾಗಿ ಪೂರೈಕೆಯಾಗದೇ ಸಾರ್ವಜನಿಕರಿಗೆ ತುಂಬಾ ಕಿರಿಕಿರಿಯಾಗುತ್ತಿದೆ. ಈಗ ಬೇಸಿಗೆ ಕಾಲ ಬೇರೆ ಇರುವುದರಿಂದ ಪದೇಪದೆ ಕರೆಂಟ್ ಹೋಗುತ್ತಿರುವುದರಿಂದ ಚಿಕ್ಕ ಮಕ್ಕಳಿಗೆ, ವೃದ್ಧರಿಗೆ ಹಾಗೂ ಅನಾರೋಗ್ಯದಿಂದ ಪೀಡಿತರಾಗಿರುವವರಿಗೆ ತುಂಬಾ ತೊಂದರೆಯಾಗುತ್ತಿದೆ. 

ಪಟ್ಟಣದ ಒಂದು ಬಡಾವಣೆಯಲ್ಲಿ ಕರೆಂಟ್ ಹೋದರೆ ಇಡೀ ಪಟ್ಟಣದ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ. ಆ ಬಡಾವಣೆಯ ಜಿ.ಓ.ಸಿ. (ಉಓಅ) ತೆಗೆದು ಕೆಲಸ  ಮಾಡಬಹುದಾಗಿದೆ. ಇಲಾಖೆಯ ಅಧಿಕಾರಿಗಳು ಈ ಗಂಭೀರ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಡಾಽಽ ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷ ಶಫೀಕ್ ಇನಾಮದಾರ, ಹುಸೇನ ಪಟೇಲ, ಸಮಿವುಲ್ಲಾ ಅರಬ್, ಆರೀಫ ರಾಯಚೂರ, ಯಾಸೀನ ಮಕಾಂದಾರ, ಅಯಾಜ್ ಪಟೇಲ, ಹುಸೇನ ಮಕಾಂದಾರ, ರಿಯಾಜ್ ಇನಾಮದಾರ, ಗಣಪತಿ ಬಡಿಗೇರ, ಪಿ.ಎ. ಖಾಜಿ, ಮತ್ತಿತರರು ಇದ್ದರು. 


ಸುದ್ದಿ ಓದಿ