ಸೂರ್ಯಕಾಂತಿ ಬೆಳೆಗೆ ಕೀಟಬಾಧೆ : ರೈತರಿಗೆ ಸಲಹೆ
ಕನಕಗಿರಿ 11: ತಾಲೂಕಿನ ಕಲಿಕೇರಿ ಗೋರವಿ ಹಂಚಿನಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸೂರ್ಯಕಾಂತಿ ಬೆಳೆಗೆ ಕೀಟಬಾಧೆ ಮುಟ್ರು ರೋಗ ಸೇರಿದಂತೆ ವಿವಿಧ ರೋಗ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಗಂಗಾವತಿ ಸಹಾಯಕ ಕೃಷಿ ನಿರ್ದೇಶಕ ಸಂತೋಷ್ ಪಟ್ಟದಕಲ್ ಕೀಟಶಾಸ್ತ್ರ ವಿಜ್ಞಾನಿ ರಾಘವೇಂದ್ರ ಎಲಿಗಾರ್, ಕೃಷಿ ಅಧಿಕಾರಿ ಕೆ. ನಾಗರಾಜ ಹಾಗೂ ಕನಕಗಿರಿ ರೈತಶಕ್ತಿ ಮಿಲಿಟ್ಸ್ ಪ್ರೊಡ್ಯೂಜರ್ ಕಂಪನಿ ನಿರ್ದೇಶಕ ಕೃಷ್ಣಪ್ಪ ವಡ್ಡಿಗೇರಿ ಸಹಯೋಗದೊಂದಿಗೆ ಶುಕ್ರವಾರ ರೈತರ ಹೊಲಗಳಿಗೆ ಭೇಟಿ ನೀಡಿ ಸೂರ್ಯಕಾಂತಿ ಬೆಳೆಗೆ ಕಾಣಿಸಿ ಕೊಂಡ ರೋಗ ಲಕ್ಷಣಗಳನ್ನು ವೀಕ್ಷಿಸಿ ಬಳಿಕ ಕೀಟ ಬಾದೆಗೆ ಪ್ರೋಫೆನೋಫಾಸ್ ಹಾಗೂ ರೋಗಬಾಧೆಗೆ ಡಿಫೆನ್ಥಿಯುರಾನ್ನನ್ನು ಸಿಂಪಡಿಸಿರಿ ನಂತರ ಬೆಳೆ ಸಮೀಕ್ಷೆಯ ಮೊಬೈಲ್ ಆ್ಯಪ್, ಹಾಗೂ ಬೆಳೆ ವಿಮೆಯನ್ನು ಮಾಡಿಸಿ ಎಂದು ರೈತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಾಹಾಯಕ ತಾಂತ್ರಿಕ ವ್ಯವಸ್ಥಾಪಕ ದೀಪಾ ಅರಕೇರಿ, ತಾಂತ್ರಿಕ ವಿಶ್ಲೇಷಕ ವಿಠಲಕುಮಾರ, ಪ್ರಮುಖರಾದ ಭೀಮೇಶ್, ನಾಗರಾಜ್ ಕಲಿಕೇರಿ,ದುರ್ಗಪ್ಪ ಬೆನಕನಾಳ, ಎಲ್ಲಪ್ಪ ಬೆನಕನಾಳ ಸೇರಿದಂತೆ ರೈತರು ಮತ್ತು ಇತರರು ಇದ್ದರು.