ವೈಯಕ್ತಿಕ ಶೌಚಾಲಯ: ಶೇ 72.28 ರಷ್ಟು ಗುರಿ ಸಾಧನೆ
ಮಾಂಜರಿ 4: 2013-14 ನೇ ಸಾಲಿನಲ್ಲಿ ನೈರ್ಮಲೀಕರಣ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಯು ನಡೆಸಿದ ಬೇಸ್ ಲೈನ ಸಮೀಕ್ಷೆ ಅನ್ವಯ ಚಿಕ್ಕೋಡಿ ತಾಲೂಕಿನಲ್ಲಿ ವೈಯಕ್ತಿಕ ಶೌಚಾಲಯ ನಿಮರ್ಿಸಿಕೊಳ್ಳಲು ನಿಗದಿ ಪಡಿಸಿದ 82,858 ಕುಟುಂಬಗಳ ಪೈಕಿ ಇದುವರೆಗೆ 59,891 ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ನಿಮರ್ಿಸಿಕೊಂಡಿದ್ದು, ಶೇ 72.28 ರಷ್ಟು ಗುರಿ ಸಾಧನೆಯಾಗಿದೆ.
ಸ್ವಾಭಿಮಾನದ ಬದುಕಿಗಾಗಿ ಶೌಚಾಲಯಕ್ಕಾಗಿ ಸಮರ ಸಾರಿರುವ ಸರಕಾರ ಪ್ರತಿಯೊಬ್ಬ ಕುಟುಂಬದವರು ವೈಯಕ್ತಿಕ ಶೌಚಾಲಯ ನಿಮರ್ಿಸಿಕೊಳ್ಳುವಂತೆ ಪ್ರೇರಣೆಯೊಂದಿಗೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 12,000 ರೂ. ಮತ್ತು ಪಪಂ ಹಾಗೂ ಪಜಾ ಪಂಗಡಗಳ ಫಲಾನುಭವಿಗಳಿಗೆ 15,000 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಆದರೂ ತಾಲೂಕಿನಲ್ಲಿ ಸ್ಥಳಾವಕಾಶದ ಕೊರತೆ ಫಲಾನುಭವಿಗಳು ಪಡಿತರ ಚೀಟಿ ಹೊಂದದೇ ಇರುವುದು, ಸಿದ್ಧ ಶೌಚಾಲಯ ನಿಮರ್ಿಸಿಕೊಳ್ಳಲು ನಿರಾಸಕ್ತಿ ಮೊದಲಾದ ಅನೇಕ ಕಾರಣಗಳು ನಿಗದಿತ ಗುರಿ ಸಾಧನೆಗೆ ಅಡ್ಡಿಯಾಗುತ್ತಿವೆ.
16467 ಶೌಚಾಲಯ ನಿಮರ್ಾಣ ಬಾಕಿ: 2013-14 ನೇ ಸಾಲಿನಲ್ಲಿ ನೈರ್ಮಲೀಕರಣ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಯು ನಡೆಸಿದ ಬೇಸ್ ಲೈನ ಸಮೀಕ್ಷೆ ಅನ್ವಯ ಚಿಕ್ಕೋಡಿ ತಾಲೂಕಿನಲ್ಲಿ ವೈಯಕ್ತಿಕ ಶೌಚಾಲಯ ನಿಮರ್ಿಸಿಕೊಳ್ಳಲು ನಿಗದಿ ಪಡಿಸಿದ 82,858 ಕುಟುಂಬಗಳು ಶೌಚಾಲಯ ಹೊಂದಬೇಕು ಎಂಬ ಗುರಿ ಹೊಂದಲಾಗಿತ್ತು, 2013 ರಿಂದ ಇಲ್ಲಿವರೆಗೆ 40,664 ಕುಟುಂಬಗಳು ಶೌಚಾಲಯ ನಿಮರ್ಿಸಿಕೊಂಡಿವೆ.
2018-19 ನೇ ಸಾಲಿನಲ್ಲಿ ತಾಲೂಕಿನಲ್ಲಿಯೇ 27,105 ವೈಯಕ್ತಿಕ ಶೌಚಾಲಯ ನಿಮರ್ಾಣ ಗುರಿ ಹೊಂದಲಾಗಿದೆ ಆದರೆ 2013-14 ರಲ್ಲಿ ನಡೆಸಿದ ಬೇಸ್ ಲೈನ ಸಮೀಕ್ಷೆಯನ್ವಯ ಗುರುತಿಸಲಾದ ಶೌಚಾಲಯ ರಹಿತ ಕುಟುಂಬಗಳ ಪೈಕಿ 6,500 ಕುಟುಂಬಗಳು ಇತ್ತೀಚಿನ ವರ್ಷಗಳಲ್ಲಿ ಶೌಚಾಲಯಗಳನ್ನು ನಿಮರ್ಿಸಿಕೊಂಡಿದ್ದು, ಅಂತಹ 6,500 ಕುಟುಂಬಗಳು ಪ್ರಸಕ್ತ ವರ್ಷದ ಗುರಿಯಲ್ಲೂ ಸೇರಿಕೊಂಡಿದೆ. ಅವುಗಳನ್ನು ಕಳೆದರೆ ಪ್ರಸಕ್ತ ವರ್ಷದ ಗುರಿ 20,605 ಕುಟುಂಬಗಳು ಆಗಿವೆ. ಈ ಗುರಿಯನ್ವಯ ಈಗಿನ ಸಾಧನೆ ಶೇ 78.45 ರಷ್ಟಾಗಲಿದೆ.
ಪ್ರಸಕ್ತ ವರ್ಷದ ಹೊಂದಿರುವ 20,605 ಕುಟುಂಬಗಳ ಪೈಕಿ ಇದುವರೆಗೆ 4,138 ಮಾತ್ರ ಶೌಚಾಲಯಗಳನ್ನು ನಿಮರ್ಿಸಿಕೊಂಡಿದ್ದು, ನೈರ್ಮಲೀಕರಣ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಯ ಪ್ರಕಾರ ಇನ್ನೂ 16,467 ಕುಟುಂಬಗಳು ನಿಮರ್ಿಸಿಕೊಳ್ಳಬೇಕಿದೆ.
ಗುರಿ ಸಾಧನೆಯ ಅಡಚಣೆಗಳು: ಪ್ರಸಕ್ತ ವರ್ಷ ಹೊಂದಿರುವ 20,605 ವೈಯಕ್ತಿಕ ಶೌಚಾಲಯ ಗುರಿ ಪೈಕಿ 1,000ಕ್ಕೂ ಫಲಾನುಭವಿ ಕುಟುಂಬಗಳು ಪಡಿತರ ಚೀಟಿ ಹೊಂದಿಲ್ಲಾ, ಪ್ರತಿ ಗ್ರಾಮ ಪಂಚಾಯತಿಯಲ್ಲೂ 25 ರಿಂದ 35 ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ನಿಮರ್ಿಸಿಕೊಳ್ಳಲು ನಿವೇಶನ ಹೊಂದಿಲ್ಲ. ಒಂದೇ ಕಡೆಗೆ ವಾಸಿಸುವ ಅನೇಕ ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ಪರಸ್ಪರ ಹಂಚಿಕೊಳ್ಳುತ್ತಿವೆ. ಹಲವು ಕುಟುಂಬಗಳು ಸಮುದಾಯ ಶೌಚಾಲಯಗಳನ್ನೆ ಬಳಸುತ್ತಿದ್ದು, ವೈಯಕ್ತಿಕ ಶೌಚಾಲಯಗಳನ್ನು ನಿಮರ್ಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
* ಅನೇಕ ಕುಟುಂಬಗಳು ಸಿದ್ಧ ಶೌಚಾಲಯ ನಿಮರ್ಿಸಿಕೊಳ್ಳಲು ಮುಂದೆ ಬರುತ್ತಿಲ್ಲಾ, ರೆಡಿಮೆಡ್ ಶೌಚಾಲಯಗಳ ಬಳಕೆ ಕಡಿಮೆ ಎಂಬ ನೆಪ ಒಡ್ಡುತ್ತಿರುವ ಕುಟುಂಬಗಳು ಸರಕಾರ ನೀಡುತ್ತಿರುವ ಪ್ರೋತ್ಸಾಹಧನ ಬಳಸಿಕೊಂಡು ತಮ್ಮಿಂದ 4-5 ಸಾವಿರ ಖಚರ್ು ಮಾಡಿಕೊಂಡು ಸೆಪ್ಟಿ ಟ್ಯಾಂಕ್ ನಿಮರ್ಿಸಿ ಶೌಚಾಲಯ ನಿಮರ್ಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲಾ. ಇಂತಹ ಹಲವು ಕಾರಣಗಳು ನಿದರ್ಿಷ್ಟ ಗುರಿಯನ್ನು ಸಾಧಿಸಲು ಅಡ್ಡಿಯಾಗುತ್ತಿವೆ. ಆದರೂ ಕುಟುಂಬಗಳ ಮನವೊಲಿಸಿ ಶೌಚಾಲಯ ನಿಮರ್ಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ. ಕೆ,ಎಸ್. ಪಾಟೀಲ
ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ
* ವೈಯಕ್ತಿಕ ಶೌಚಾಲಯ ನಿಮರ್ಿಸಿಕೊಳ್ಳಲು ನಿವೇಶನ ಹೊಂದಿರುವ ಕುಟುಂಬಗಳಿಗೆ ಗ್ರಾಮ ಪಂಚಾಯತಿ ಜಾಗದಲ್ಲೂ ವೈಯಕ್ತಿಕ ಶೌಚಾಲಯಗಳನ್ನು ನಿಮರ್ಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಆದರೆ ಅನೇಕ ಕುಟುಂಬಗಳಿಗೆ ಪ್ರಶಸ್ತವಾದ ಗ್ರಾಮ ಪಂಚಾಯತಿ ಜಾಗಗಳೂ ಸಿಗುತ್ತಿಲ್ಲಾ. ಶಿವಾನಂದ ಶಿರಗಾಂವಿ
ಸ್ವಚ್ಛ ಭಾರತ ಮಿಷನ್ ಚಿಕ್ಕೋಡಿ ತಾಲೂಕಾ ನೋಡೆಲ್ ಅಧಿಕಾರಿ