ವ್ಯಕ್ತಿ ಕಾಣೆ: ಪ್ರಕರಣ ದಾಖಲು .,.,,..
ಬಳ್ಳಾರಿ 10: ನಗರದ ಪಾರ್ವತಿನಗರದ 2ನೇ ಕ್ರಾಸ್‌ನಲ್ಲಿ ವಾಸವಿರುವ 32ವರ್ಷದ ಹೆಚ್.ರವಿತೇಜ ಎಂಬ ವ್ಯಕ್ತಿ ಡಿ.07ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಗಾಂಧಿನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವ್ಯಾಪಾರದ ನಿಮಿತ್ತ ಡಿ.06ರಂದು ರಾತ್ರಿ 10ಗಂಟೆಗೆ ಹೈದರಾಬಾದ್‌ಗೆ ಹೋಗಿ ಬರುತ್ತೇನೆ ಎಂದು ದುರುಗಮ್ಮನ ಗುಡಿ ಹತ್ತಿರ ಖಾಸಗಿ ಬಸ್ಸಿನಲ್ಲಿ ಹೋಗಿರುತ್ತಾನೆ. ನಂತರ ಹೈದರಾಬಾದ್‌ನಿಂದ ಹೊಸ ಪಾರ್ಟಿ ವ್ಯಾಪಾರಸ್ಥನೊಂದಿಗೆ ನಾಗಪೂರ್‌ಗೆ ಹೋಗಿ ಬರುತ್ತೇನೆ ಎಂದು ಡಿ.7 ರಂದು ಸಂಜೆ 4.57ಕ್ಕೆ ಪೋನ್‌ನಲ್ಲಿ ತಿಳಿಸಿರುತ್ತಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಗುರುತಿನ ಚಹರೆ: 5.6ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ದೃಢವಾದ ಮೈಕಟ್ಟು, ಬ್ರೌನ್ ಚೆಕ್ಸ್ ಶರ್ಟ್, ಬ್ಲೂ ಕಲರ್ ಜೀನ್ಸ್ ಫ್ಯಾಂಟ್ ಧರಿಸಿರುತ್ತಾನೆ. ತೆಲುಗು, ಕನ್ನಡ, ಹಿಂದಿ, ಇಂಗ್ಲೀಷ್ ಬಾಷೆಯಲ್ಲಿ ಮಾತನಾಡುತ್ತಾನೆ.
ಕಾಣೆಯಾದ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.ಸಂ.08392-258100, ಗಾಂಧಿನಗರ ಪೊಲೀಸ್ ರಾಣೆಯ ದೂ.ಸಂ.08392-272192, ಗಾಂಧಿನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಅವರ ಮೊ.ಸಂ.9480803082 ಹಾಗೂ ಗಾಂಧಿನಗರ ಪೊಲೀಸ್ ರಾಣೆಯ ಪೊಲೀಸ ಇನ್ಸ್‌ಪೆಕ್ಟರ್ ಮೊ.ಸಂ.9480803046ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.