ವ್ಯಕ್ತಿ ಕಾಣೆ: ಪ್ರಕರಣ ದಾಖಲು ,.
ಬಳ್ಳಾರಿ 06: ಬ್ರೂಸ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 46 ವಯಸ್ಸಿನ ಮಂಜುನಾಥ ಎನ್ನುವ ವ್ಯಕ್ತಿ ನ.25ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಸುಮಾರು 5ಅಡಿ ಎತ್ತರ, ದೃಡವಾದ ಮೈಕಟ್ಟು, ಸಾಧಾರಣ ಕಪ್ಪು ಮೈಬಣ್ಣ, ಕಪ್ಪು ಬಿಳಿ ಮಿಶ್ರಿತ ಕೂದಲು, ಹಣೆಯ ಬಲಗಡೆ ಹಳೆ ಗಾಯದ ಕಲೆ ಇರುತ್ತದೆ. ಕಪ್ಪು ಬಿಳಿ ಗೆರೆಗಳ ಚೆಕ್ಸ್‌ಉಳ್ಳ ತುಂಬು ತೋಳಿನ ಅಂಗಿ, ಖಾಕಿ ಬಣ್ಣದ ಡಿಸೈನಿನ ಬರ್ಮುಡಾ ಧರಿಸಿರುತ್ತಾನೆ. ಕನ್ನಡ, ತೆಲುಗು, ಹಿಂದಿ, ತಮಿಳು ಭಾಷೆಯನ್ನಾಡುತ್ತಾನೆ.
ಕಾಣೆಯಾದ ವ್ಯಕ್ತಿಯ ಕುರಿತು ಮಾಹಿತಿ ಅಥವಾ ಸುಳಿವು ದೊರೆತಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ: 08392-258100, ಬ್ರೂಸ್‌ಪೇಟೆ ಪೊಲೀಸ್ ಠಾಣೆ ದೂ:08392-272022, ಪಿಐ ಬ್ರೂಸ್‌ಪೇಟೆ ಪೊಲೀಸ್ ಠಾಣೆ ಮೊ:9480803045ಗೆ ಸಂಪರ್ಕಿಸಲು ಕೋರಿದ್ದಾರೆ.