ಬಳ್ಳಾರಿ

ವ್ಯಕ್ತಿ ಕಾಣೆ: ಪ್ರಕರಣ ದಾಖಲು

ವ್ಯಕ್ತಿ ಕಾಣೆ: ಪ್ರಕರಣ ದಾಖಲು

ಬಳ್ಳಾರಿ 20: ಕುಡುತಿನಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಡುತಿನಿ ನಿವಾಸಿಯಾದ 36 ವರ್ಷದ ಎನ್ ವಸಂತ ಎನ್ನುವವರು ಮಾ.19 ರಿಂದ ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಹಾಯಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ ಗುರುತು; ಸಾಧಾರಣ ಮೈಕಟ್ಟು,ಕೋಲು ಮುಖ, ಏಣ್ಣೆಗೆಂಪು ಮೈ ಬಣ್ಣ,ಮೂಗಿನ ಮೇಲೆ ಕಪ್ಪು ಮಚ್ಚೆ ಇರುತ್ತದೆ,5.5 ಅಡಿ ಎತ್ತರ,ನೀಲಿ ಬಣ್ಣದ ಚೌಕಳ್ಳಿಗಳುಳ್ಳ ಅಂಗಿ,ಬ್ಲೂ ಕಲರ್ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ, ಕನ್ನಡ,ತೆಲುಗು,ಹಿಂದಿ, ಭಾಷೆಗಳನ್ನು ಮಾತನಾಡುತ್ತಾನೆ.

ಕಾಣೆಯಾದ ವ್ಯಕ್ತಿಯ ಬಗ್ಗೆ ಯಾವುದಾದರೂ ಮಾಹಿತಿ ದೊರೆತಲ್ಲಿ ಕೂಡಲೇ ನಿಮ್ಮ ಹತ್ತಿರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅವರು ಸೂಚಿಸಿದ್ದಾರೆ. 

ಸುದ್ದಿ ಓದಿ