ಹಗರಿಬೊಮ್ಮನಹಳ್ಳಿ

ವ್ಯಕ್ತಿ ಸಾವು, ಕೊಲೆ ಶಂಕೆ: ಪ್ರಕರಣ ದಾಖಲು

ವ್ಯಕ್ತಿ ಸಾವು, ಕೊಲೆ ಶಂಕೆ: ಪ್ರಕರಣ ದಾಖಲು

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 03: ತಾಲೂಕಿನ ಹಂಪಾಪಟ್ಟಣ ಗ್ರಾಮದ ಹೊರವಲಯದಲ್ಲಿ ಹಂಪಾಪಟ್ಟಣ ನಿವಾಸಿ ಸೊಪ್ಪಿನವರ ಚೌಡಪ್ಪ (42) ಅನುಮಾನಾಸ್ಪದವಾಗಿ ಸಾವೀಗೀಡಾಗಿರುವ ಘಟನೆ ಬುಧವಾರ ರಾತ್ರಿ ಜರುಗಿದೆ. 

ವರದಾಪುರ ಹಾಗೂ ಹಂಪಾಪಟ್ಟಣ ಗ್ರಾಮದ ಮಾರ್ಗ ಮಧ್ಯೆ ಗುರುವಾರ ಮೃತ ದೇಹ ಪತ್ತೆಯಾಗಿದ್ದು, ಚೌಡಪ್ಪ ಅವರ ತಲೆಗೆ ತೀವ್ರ ಗಾಯವಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸಿಪಿಐ ಟಿ. ಮಂಜಣ್ಣ, ಪಿಎಸ್‌ಐ ಸರಳ ಭೇಟಿ ನೀಡಿ ಪರೀಶೀಲಿಸಿದ್ದಾರೆ. ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ. 


ಸುದ್ದಿ ಓದಿ