ಜನ ಜಾಗೃತಿ ಆಂದೋಲನ
ಹೊಸಪೇಟ 06: ಜನಜಾಗೃತಿ ಅಭಿಯಾನ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ವತಿಯಿಂದ ದಿ. 4ರಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ಪ್ರದಾನ ಕಾರ್ಯದರ್ಶಿಗಳ ಸಿರಾಜ್ ಶೇಕ್ ಅವರ ನೇತೃತ್ವದಲ್ಲಿ ನಡೆದ 31ನೇ ವಾರ್ಡ್, 13ನೇ ವಾರ್ಡ್ ಹಾಗೂ 29ನೇ ವಾರ್ಡ್ ಜನಜಾಗೃತಿ ಅಭಿಯಾನ ಪ್ರಾರಂಭವಾಗಿ ಕಾಲ್ನಡಿಗೆಯಿಂದ ಮನೆಮನೆಗೂ ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳು, ಹಾಗೂ ಬೆಲೆ ಏರಿಕೆ ವಿರುದ್ಧ ಕರಪತ್ರಗಳನ್ನು ಮತದಾರ ಬಂಧುಗಳಿಗೆ ತಿಳಿಸುತ್ತಾ ಹಾಗೆಯೇ ಮನೆಮನೆಗೂ ಕರಪತ್ರಗಳನ್ನು ವಿತರಿಸಲಾಯಿತು.
ಅಲ್ಪಸಂಖ್ಯಾತರ ರಾಜ್ಯ ಕಾರ್ಯದರ್ಶಿಗಳಾದ ಸೈಯದ್ ಮಹಮ್ಮದ್, ಕಾಂಗ್ರೆಸ್ ಮುಖಂಡರು ಗಾಧಿಗ್ನೂರ್ ಹಾಲಪ್ಪ,ಮಾಜಿ ಬ್ಲಾಕ್ ಅಧ್ಯಕ್ಷ ತಮ್ನಾಳಪ್ಪ, ಕಾಂಗ್ರೆಸ್ ಮುಖಂಡರು ಅಣ್ಣಮಲೈ, ರಮೇಶ್, ನಬಿ, ರಾಮಾಂಜಿನಿ,ಮಾಜಿ ನಗರಸಭಾ ಸದಸ್ಯ ಭಾಷಾ, ಬಾಲಾ ಸಾಬ್,ಕರಿಗ್ನೂರು ಯರ್ರಿಸ್ವಾಮಿ,ಕುಬೇರ, ಗಾಳಪ್ಪ,ಸೈಯದ್ ಬುಡೆನ್, ರಾಮಪ್ಪ, ಶಂಕರ್, ಧನಲಕ್ಷ್ಮಿ, ರಾಜು, ಮೂರ್ತಿ, ಹೊನ್ನೂರು ಸಾಬ್, ಗೋವಿಂದಪ್ಪ, ಇಂದು ಮತಿ, ಶಿವ ನಾಯಕ್, ತಾರಾ ಬಾಷಾ, ಮಾರುತಿ, ಧಮ್ಮೂರು ಮಂಜುನಾಥ್,ಹನುಮಂತಪ್ಪ ಅನ್ವರ್ ಬಾಷಾ, ಮರಡಿ ಮಂಜುನಾಥ್ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು, ಮಹಿಳೆಯರು ಈ ಜನಜಾಗೃತಿ ಅಭಿಯಾನ ಸಾಯಂಕಾಲ ಏಳು ಗಂಟೆವರೆಗೂ ಎಲ್ಲ ಮತದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.