ಪೊಲೀಸ ಇಲಾಖೆ ಬಗ್ಗೆ ಜನರ ನಂಬಿಕೆ ಇಲ್ಲದಂತಾಗಿದೆ: ಬಟಾರಿ
ರಾಮದುರ್ಗ 17: ನನಗೆ ಜೀವ ಬೆದರಿಕೆ ಇದೆ ಎಂದು ದೂರನ್ನು ನೀಢಿದರೂ ಎಚ್ಚೆತ್ತುಕೊಳ್ಳದ ಪೊಲೀಸ ಇಲಾಖೆ ಬಗ್ಗೆ ಜನರ ನಂಬಿಕೆ ಇಲ್ಲದಂತಾಗಿದೆ, ಬೆಳಗ್ಗೆ ಮನೆ ನುಗ್ಗಿ ಕೊಲೆ ಮಾಡುತ್ತಾರೆ ಎಂದರೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಗಂಗಾವತಿ ತಾಲೂಕ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಹನಮೇಶ ಬಟಾರಿ ಆತಂಕ ವ್ಯಕ್ತಪಡಿಸಿದರು.
ರಾಮದುರ್ಗ ತಾಲೂಕ ಗಂಗಾಮತಸ್ಥರ ಸಮಾಜ ಸಂಘದಿಂದಾ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ಸ್ನೇಹ ಹಿರೇಮಠ ಕೊಲೆಯಾಗಿ ಕೆಲವೇ ದಿನಗಳಲ್ಲಿ ಅಂಜಲಿ ಅಂಬಿಗೇರ ಹತ್ಯೆಯಾಗಿರುವದು ದುರದುಷ್ಟಕರ, ಇಡಿ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ ಎಂದು ರೋಷವ್ಯಕ್ತಪಡಿಸಿದರು.
ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣಾ ಯಾದವಾಡ ಮಾತನಾಡಿ ಹುಬ್ಬಳ್ಳಿ ನಗರದ ಮೀರಾಪೂರ ಓಣಿಯ ನಿವಾಸಿ ಅಂಜಲಿ ಅಂಬಗೇರ ಎಂಬ ಯುವತಿಯ ಕೊಲೆ ಖಂಡನೀಯ ಶೀಘ್ರದಲ್ಲಿಯೆ ಆರೋಪಿಯನ್ನು ಬಂದಿಸಿ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.
ಇಂತಹ ದುಷ್ಟ ಶಕ್ತಿಗಳ ವಿರುದ್ದ ಕಠಿಣ ಕಾನೂನು ಜರುಗಿಸುವುದು ಅವಶ್ಯವಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ ಎಂದು ಸರಕಾರದ ವಿರುದ್ಧ ಆರೋಪಿಸಿದರು.
ಬಿಜೆಪಿ ಅಧ್ಯಕ್ಷ ರಾಜೇಶ ಬೀಳಗಿ, ತಾಲೂಕ ಗಂಗಾಮತಸ್ಥರ ಸಮಾಜ ಸಂಘದ ಉಫಾರ್ಧಕರಾದ್ಷ ಯಲ್ಲಪ್ಪ ಬಾರ್ಕಿ, ರವಿಂದ್ರ ಬಿಷ್ಟನ್ನವರ, ಉದಯ ಸುಣಗಾರ, ಪ್ರಧಾನ ಕಾರ್ಯದರ್ಶಿ ಫಕೀರ್ಪ ಹೊಳೆಪ್ಪನವರ ಕೋಶಾಧ್ಯಕ್ಷ ಗೋಪಾಲ ಸುಣಗಾರ ಹಾಗೂ ಇತತರು ಇದ್ದರು.