ರೈತರ ಬಗ್ಗೆ ಕಾಳಜಿ ವಹಿಸದ ಜನಪ್ರತಿನಿಧಿಗಳು
ಮುಂಡರಗಿ,08: ಸರ್ಕಾರ ಸಹಸ್ರಾರು ಕೋಟಿ ಹಣ ಖರ್ಚು ಮಾಡಿ ಶಿಂಗಟಾಲೂರು ಏತನೀರಾವರಿ ಯೋಜನೆಯನ್ನು ಕೈಗೊಂಡಿದೆ. ಆದರೆ ಬಂಡವಾಳಶಾಹಿಗಳ ಹಿತಾಶಕ್ತಿಯಿಂದ ಈ ಯೋಜನೆಯ ಪ್ರಯೋಜನ ಮುಂಡರಗಿ ತಾಲೂಕಿನ ಎಡದಂಡೆ ಭಾಗದ ಜನರಿಗೆ ತಲುಪದೇ ಇರುವುದು ಖಂಡನೀಯ ಎಂದು ಸರ್ಕಾರ ತಾಲೂಕು ಅಭಿವೃದ್ಧಿ ಹೋರಾಟ ವೇಧಿಕೆ ಅಧ್ಯಕ್ಷ ವೈ.ಎನ್.ಗೌಡರ್ ಆಗ್ರಹಿಸಿದರು.
ಪಟ್ಟಣದಲ್ಲಿ ಸುದ್ದಿಗಾಗರರೊಂದಿಗೆ ಮಾತನಾಡಿದ ಅವರು, ನೀರು ಮತ್ತು ಯೋಜನೆ ನಮ್ಮದೇ ಇದ್ದರೂ ಕೂಡಾ ಕಂಪನಿ ಪರವಾನಗಿ ಪಡೆಯುವ ದುಸ್ಥಿತಿಯಲ್ಲಿ ರೈತರು ಇದ್ದಾರೆ. ಈ ಕುರಿತು ಹಲವಾರು ವರ್ಷಗಳಿಂದ ಮುಂಡರಗಿ ತಾಲೂಕಿನ ಜನತೆ ಹೋರಾಟ ಮಾಡಿದರೂ ಯಾವುದೇ ಪ್ರಯೋಜನೆಯಾಗಿಲ್ಲ. ಇದರಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗುಲಾಮಗಿರಿತನವನ್ನು ಪ್ರದರ್ಶನ ಮಾಡುತ್ತಿದ್ದಾರೆ.
ಈ ವರ್ಷ ಅಲ್ಪಮಳೆಯಿಂದ ಹೆಸರು, ಸೂರ್ಯಕಾಂತಿ ಹಾಗೂ ಮೆಕ್ಕೆಜೋಳ ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಕಾಲುವೆಯಲ್ಲಿ ನೀರು ಹರಿತಾ ಇದ್ದರೂ ರೈತರ ಜಮೀನಿಗೆ ನೀರು ಬರುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗೆಳನ್ನು ಕೆಳಿದರೆ ಗುತ್ತಿಗೆದಾರಿಕೆ ಪಡೆದ ಕಂಪನಿಯವರು ನಮಗೆ ನೀರು ಬಿಡುತ್ತಿಲ್ಲ ಎಂಬ ಸಬೂಬನ್ನು ಭಾರಿ ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳಿಗೆ ಒತ್ತಾಯಿಸಿದರೂ ಯಾವುದೇ ಸ್ಪಂದನೆಯಿಲ್ಲ.
ಉತ್ತಮ ಬೆಳೆಯ ನೀರೀಕ್ಷೆಯಲ್ಲಿದ್ದ ರೈತರಿಗೆ ನಿರಾಷೆಯಾಗಿದೆ. ಮಳೆ ಕೈಕೊಡುವ ಎಲ್ಲಾ ಲಕ್ಷಣಗಳು ಕಂಡುಬಂದಿತ್ತು. ಬೆಳೆದಂತ ಬೆಳೆ ಕಣ್ಣಿದುರಿಗೆ ಹಾಳುಗುವುದನ್ನ ನೋಡುತ್ತಾ ರೈತ ಅಸಹಾಯಕ ಸ್ಥಿತಿಯನ್ನು ಅನುಭವಿಸುತ್ತಿದ್ದಾನೆ. ಅದು ಕೂಡಾ ಕಾಲುವೆ ನೀರು ಹರಿದು ಹೋಗುತ್ತಿರುವುದನ್ನು ನೋಡಿ ಕಣ್ಣೀರು ಹಾಕುವಂತಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗುಲಾಮಗಿರಿತನವನ್ನು ಪ್ರದರ್ಶನ ಮಾಡುತ್ತಿದ್ದಾರೆ. ನೀರು ಮತ್ತು ಯೋಜನೆ ನಮ್ಮದು ಇದ್ದರೂ ಕೂಡಾ ಕಂಪನಿ ಪರವಾನಗಿ ಪಡೆಯುವ ದುಸ್ಥಿತಿಯಲ್ಲಿ ರೈತರು ಇದ್ದಾರೆ.
ಕಲಕೇರಿ, ಹಾರೋಗೇರಿ, ತಾಮ್ರಗುಂಡಿ, ಬಸಾಪೂರ, ಮೇವುಂಡಿ, ಹಿರೇವಡ್ಡಟ್ಟಿ, ಡಂಬಳ, ಜಂತ್ಲಿ-ಶಿರೂರ ಮುಂತಾದ ಗ್ರಾಮಗಳು ನೀರಿಗಾಗಿ ಕಾಯುತ್ತಿದ್ದಾರೆ. ಈ ಕುರಿತು ಹಲವಾರು ಭಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಕೊಳ್ಳುತ್ತಿಲ್ಲ. ಕಂಪನಿಯವರನ್ನು ನಿಯಂತ್ರಣ ಮಾಡಿಟ್ಟುಕೊಳ್ಳುವ ಶಕ್ತಿ ಸರ್ಕಾರಕ್ಕಿಲ್ಲವಾಗಿದೆ. ಇದರಿಂದ ರೈತರಿಗೆ ಜನಪ್ರತಿನಿಧಿಗಳ ಮೇಲೆ ಸಂಶಯಬರುವಂತಾಗಿದೆ.
ಕಾಲುವೆ ನೀರು ಅನಾವಶ್ಯಕವಾಗಿ ಪೋಲಾಗುತ್ತಿದೆ. ಆದರೆ ರೈತರ ಜಮೀನಿಗೆ ನೀರು ಬರುತ್ತಿಲ್ಲ. ಯಾವ ಪುರುಷಾರ್ಥಕ್ಕಾಗಿ ಕಾಲುವೆಗೆ ನೀರು ಹರಿಸುತ್ತಿದ್ದಿರಿ. ಈ ಯೋಜನೆಗೆ ಒಳಪಡುವ ಬರೀ ಮುಂಡರಗಿ ತಾಲೂಕು ಅಷ್ಟೇ ಅಲ್ಲದೇ ಗದಗ ಜಿಲ್ಲೆ ಹಾಗೂ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚೀವರು ಯಾರೂ ಕೂಡಾ ಇತ್ತ ಕಡೆ ಗಮನಹರಿಸುತ್ತಿಲ್ಲ. ಇಲ್ಲವಾದರೆ ಮುಂಡರಗಿ ತಾಲೂಕಿನ ಎಲ್ಲಾ ರೈತರೊಂದಿಗೆ ಶಿಂಗಟಾಲೂರ ಏತನೀರಾವರಿ ಇಲಾಖೆ ಕಾರ್ಯಾಲಯ ಮತ್ತು ಪಂಪ್ಹೌಸ್ಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಈಶ್ವರ್ಪ ಹಂಚಿನಾಳ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಕುಬೇರ್ಪ ಬಂಡಿ, ಮಂಜುನಾಥ ಸಂಜೀವಣ್ಣವರ ಇದ್ದರು.