ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ: ಶಾಸಕ ಸೋಮನಗೌಡ
ತಾಳಿಕೋಟಿ: ದೇವರ ಹಿಪ್ಪರಗಿ ಮತಕ್ಷೇತ್ರ ಸುಮಾರು 120 ಗ್ರಾಮಗಳನ್ನು ಹೊಂದಿರುವ ಜಿಲ್ಲೆಯ ಅತಿದೊಡ್ಡ ಮತಕ್ಷೇತ್ರವಾಗಿದೆ. ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಅನುದಾನವನ್ನು ಕೊಟ್ಟು ಹಂತ-ಹಂತವಾಗಿ ಅಭಿವೃದ್ಧಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆಬೇಕು ಎಂದು ಶಾಸಕ ಸೋಮನಗೌಡ ಪಾಟೀಲ (ಸಾಸನೂರ ಹೇಳಿದರು.
ಲೋಕೋಪಯೋಗಿ ಇಲಾಖೆ ಉಪವಿಭಾಗ ಸಿಂದಗಿ ವತಿಯಿಂದ ಮತಕ್ಷೇತ್ರದ ಕೆಸರಟ್ಟಿ ಗ್ರಾಮದಲ್ಲಿ ರೂ. 2 ಕೋಟಿ ಮೊತ್ತದ ಕೆಸರಟ್ಟಿ ತಾಳಿಕೋಟಿ ರಸ್ತೆ ಹಾಗೂ ಬಿಂಜಲಭಾವಿಯಲ್ಲಿ ರೂ. 3 ಕೋಟಿ ಬಿಂಜಲಭಾವಿ-ಕಲಕೇರಿ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ವಿವಿಧ ಸಮುದಾಯ ಭವನಗಳಿಗೆ ಭೂಮಿಪೂಜೆ ನೆರವೇರಿಸಿ ನಂತರ ಅವರು ಮಾತನಾಡಿದರು.
ಈ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಇನ್ನೂ ಸ್ವಲ್ಪು ಅನುದಾನದ ಅಗತ್ಯವಿದ್ದು ಆದಷ್ಟು ಬೇಗ ಅನುದಾನ ಕೊಡುತ್ತೇನೆ. ಇನ್ನೂ ಕೆಲವು ದೇವಸ್ಥಾನ ಸಮುದಾಯ ಭವನಗಳಿಗಾಗಿ ಮನವಿ ನೀಡಲಾಗಿದೆ. ಅದನ್ನೂ ನೀಡಲಾಗುವುದು. ಇಲ್ಲಿಯ ರೈತರ ಮುಖ್ಯ ಸಮಸ್ಯೆಯಾದ ಹೊಲಗಳಿಗೆ ಹೋಗುವ ರಸ್ತೆಯ ಕುರಿತು ಪಂಚಾಯತ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹರಿಸುತ್ತೇನೆ ಎಂದರು.
ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದು ಬುಳ್ಳಾ, ಸೋಮನಗೌಡ ಬಿರಾದಾರ (ಬಿಂಜಲಭಾವಿ), ಸಜ್ಜನ ಸರ್ ಮಾತನಾಡಿ ಮಾನ್ಯ ಶಾಸಕರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದು ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಅವರ ಕೈ ಬಲಪಡಿಸುವ ಕೆಲಸ ಮಾಡೋಣ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ (ಅಸ್ಕಿ), ತಾ.ಪಂ. ಇ.ಓ. ಬಿ.ಆರ್. ಬಿರಾದಾರ ಗ್ರಾಮದ ಅಮರೇಶಗೌಡ ನಾಡಗೌಡ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕಾಸಪ್ಪ ಮಾದರ, ರಾಯನಗೌಡ ನೀರಲಗಿ, ಸೋಮನಗೌಡ ಹಾದಿಮನಿ, ಬಾಬು ಚವ್ಹಾಣ, ಶಂಕರಗೌಡ ಬಿರಾದಾರ, ಹುಸೇನ ಸೋಲಾಪೂರ (ಕೆಸರಟ್ಟಿ), ಎ.ಇ.ಇ. ತಾರಾನಾಥ ರಾಠೋಡ, ಎ.ಇ. ಎ.ಎಚ್. ತುಂಬಗಿ, ಗುತ್ತಿಗೆದಾರ ಎಸ್.ಆರ್. ಬಿಳೆಭಾವಿ, ನಾನಾಗೌಡ ಇದ್ದರು.