ತಾಳಿಕೋಟಿ

ಕ್ಷೇತ್ರದ ಅಭಿವೃದ್ಧಿಗೆ ಜನರ ಸಹಕಾರ ಮುಖ್ಯ: ಸಾಹೇಬಗೌಡ ಪಾಟೀಲ

ಕ್ಷೇತ್ರದ ಅಭಿವೃದ್ಧಿಗೆ ಜನರ ಸಹಕಾರ ಮುಖ್ಯ:  ಸಾಹೇಬಗೌಡ ಪಾಟೀಲ

ಗೊಟಖಂಡ್ಕಿ-ಅಸ್ಕಿ ಗ್ರಾಮದಲ್ಲಿ ಸಿ. ಸಿ. ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ 

ತಾಳಿಕೋಟಿ: ದೇ. ಹಿಪ್ಪರಗಿ ಮತಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶಾಸಕ ಸೋಮನಗೌಡರು ಕ್ಷೇತ್ರದ ಎಲ್ಲ ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಅಭಿವೃದ್ಧಿಗೊಳಿಸುವುದರೊಂದಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಅವರ ಈ ಎಲ್ಲ ಕಾರ್ಯಗಳಲ್ಲಿ ಕ್ಷೇತ್ರದ ಜನರ ಸಹಕಾರ ಅತಿ ಮುಖ್ಯವಾಗಿದೆ ಎಂದು ಬಿಜೆಪಿ ಮುಖಂಡ ಸಾಹೇಬಗೌಡ ಪಾಟೀಲ(ಸಾಸನೂರ) ಹೇಳಿದರು. 

ಬುಧವಾರ ತಾಲೂಕಿನ ಗೊಟಖಂಡ್ಕಿ ಗ್ರಾಮದಲ್ಲಿ ರೂ. 50 ಲಕ್ಷ ಮೊತ್ತದ ಸಿ.ಸಿ. ರಸ್ತೆ ಹಾಗೂ ರೂ. 3 ಲಕ್ಷ ಮೊತ್ತದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸಮುಧಾಯ ಭವನ ಹಾಗೂ ಅಸ್ಕಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯವತಿಯಿಂದ ರೂ. 45 ಲಕ್ಷ ಮೊತ್ತದ ಸಿ.ಸಿ.ರಸ್ತೆ ಹಾಗೂ ಸಮಾಜಕಲ್ಯಾಣ ಇಲಾಖೆಯವತಿಯಿಂದ ರೂ. 50 ಲಕ್ಷ ಮೊತ್ತದ ಸಿ.ಸಿ. ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಬ. ಸಾಲವಾಡಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಎಲ್ಲ ಪ್ರಮುಖ ರಸ್ತೆಗಳ ನಿರ್ಮಾಣಕ್ಕಾಗಿ ಅನುದಾನ ಕೊಟ್ಟಿದ್ದು ಈಗಾಗಲೇ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಶಾಸಕ ಸೋಮನಗೌಡರು ಗ್ರಾಮಗಳ ಮಧ್ಯ ಯಾವುದೆ ರೀತಿಯ ತಾರತಮ್ಯ ಮಾಡದೆ ಮೂಲಭೂತ ಸೌರ್ಕಗಳನ್ನು ಕಲ್ಪಿಸಿದ್ದಾರೆ ಜೊತೆಗೆ ಎಲ್ಲ ಸಮಾಜದವರ ದೇವಸ್ಥಾನಗಳ ಸಮುಧಾಯ ಭವನಗಳಿಗೂ ಅನುದಾನವನ್ನು ಕೊಟ್ಟಿದ್ದಾರೆ. ಗ್ರಾಮೀಣ ಭಾಗದ ಜನರು ಶುದ್ಧ ಕುಡಿಯುವ ನೀರು ಕುಡಿಯುವಂತಾಗಲು ಪ್ರಧಾನಿ ಮೋದಿಯವರ ಕನಸಿನ ಜೆಜೆಎಮ್ ಯೋಜನೆಯನ್ನು ಕಾರ್ಯರೂಪದಲ್ಲಿ ತರಲಾಗುತ್ತೀದೆ. ಈ ಎಲ್ಲ ಕಾರ್ಯಗಳಲ್ಲಿ ನಿಮ್ಮ ಸಹಕಾರ ಅವರಿಗೆ ಬೇಕು ಎಂದರು. 

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದು ಬುಳ್ಳಾ ಮಾತನಾಡಿ ಶಾಸಕ ಸೋಮನಗೌಡರು ನುಡಿದಂತೆ ನಡೆಯುವ ಶಾಸಕರಾಗಿದ್ದು ಈ ಭಾಗದ ಎಲ್ಲ ಗ್ರಾಮಗಳ ಅಭಿವೃದ್ಧಿಗಾಗಿ ಶಕ್ತಿ ಮೀರಿ ಶ್ರಮಿಸುತ್ತೀದ್ದಾರೆ. ನೀರಾವರಿ ಯೋಜನೆಗಳ ಮೂಲಕ ಈ ಭಾಗದ ರೈತರಿಗೆ ನೀರು ಕೊಡುವ ಕೆಲಸ ಅವರು ಮಾಡಿದ್ದಾರೆ. ಬರುವ ದಿನಗಳಲ್ಲಿಯೂ ನಾವೇಲ್ಲರೂ ಅವರನ್ನು ಮತ್ತೇ ಬೆಂಬಲಿಸುವ ಕೆಲಸ ಮಾಡಬೇಕಾಗಿದೆ ಎಂದರು.  

ಇದೇ ಸಮಯದಲ್ಲಿ ಗೊಟಖಂಡ್ಕಿ ಹಾಗೂ ಅಸ್ಕಿ ಗ್ರಾಮಗಳಲ್ಲಿ ಗ್ರಾಮಸ್ಥರ ವತಿಯಿಂದ ಮುಖಂಡ ಸಾಹೇಬಗೌಡ ಪಾಟೀಲ(ಸಾಸನೂರ) ಅವರನ್ನು ಸನ್ಮಾನಿಸಲಾಯಿತು. 

ಈ ಸಮಯದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ) ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಹೆಗರಡ್ಡಿ, ಅಸ್ಕಿ ಗ್ರಾ.ಪಂ ಅಧ್ಯಕ್ಷೆ ಹಳ್ಳೆವ್ವ ವಣಕಿಹಾಳ, ಪ್ರಶಾಂತ ಹಾವರಗಿ, ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಜಿ.ಪಂ ಮಾಜಿ ಸದಸ್ಯ ಸಾಹೇಬಣ್ಣ ಆಲ್ಯಾಳ, ಗುರುಗೌಡ ಗುರಡ್ಡಿ, ಸಾಹೇಬಗೌಡ ರಾರಡ್ಡಿ, ಮುತ್ತುಗೌಡ ಮಾಳಿ, ಶಿವನಗೌಡ ಪಾಟೀಲ, ಶರಣಗೌಡ ಬಿರಾದಾರ, ರಾಯಪ್ಪಗೌಡ ಪಾಟೀಲ, ಹಣಮಗೌಡ ಢವಳಗಿ, ಎಚ್ ಎನ್ ಬಿರಾದಾರ, ಪಿಡಿಓ ಎನ್ ಎಸ್ ದೊಡಮನಿ, ಸುಭಾಶ ಗುಂಡಕಾನಾಳ, ಸೋಮನಗೌಡ ಬಿರಾದಾರ(ಬಿಂಜಲಭಾವಿ), ಗುತ್ತಿಗೆದಾರ ಮಹೇಶ ಡಬ್ಬೇರ, ಎಇಇಗಳಾದ ರಾಜಶೇಖರ, ಆನಂದಸ್ವಾಮಿ, ಎಇ. ಎ. ಎಚ್‌. ತುಂಬಗಿ, ಜೆಇಗಳಾದ ಪ್ರಫುಲ್ಲಕುಮಾರ, ಪ್ರವೀಣ ಬಿರಾದಾರ, ಲ್ಯಾಂಡ ಆರ್ಮಿಯ ಸಾಹೇಬಗೌಡ ಪಾಟೀಲ, ಮತ್ತೀತರರು ಉಪಸ್ಥಿತರಿದ್ದರು. 


ಸುದ್ದಿ ಓದಿ