ಮಾಸ್ಕ್ ಹಾಕದೇ ಇರುವ ಸಾರ್ವಜನಿಕರಿಗೆ ದಂಡ
ಚಿಕ್ಕೋಡಿ 24: ಕೊರೊನಾ ಎಂಬ ಮಹಾಮಾರಿಗೆ ಇಡೀ ಜಗತ್ತು ತಲ್ಲಣಗೊಂಡಿದೆ. ಇಂತಹ ಮಹಾಮಾರಿಗೆ ರಾಜ್ಯ ಹೊರತು ಪಡಿಸಿಲ್ಲ, ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ರೋಗದ ಎರಡನೆ ಅಲೆ ಜೋರಾಗಿದೆ. ಇದರಿಂದ ರಾಜ್ಯದ ಹೆಬ್ಬಾಗಿಲು ಗಡಿ ಭಾಗದ ನಿಪ್ಪಾಣಿ ನಗರದಲ್ಲಿ ಮಾಸ್ಕ್ ಹಾಕದೇ ಇರುವ ಸಾರ್ವಜನಿಕರಿಗೆ ದಂಡ ಹಾಕುವ ಕಾರ್ಯಕ್ಕೆ ತಾಲೂಕಾಡಳಿತ, ನಗರಸಭೆ ಮುಂದಾಗಿದೆ.
ನಿಪ್ಪಾಣಿ ನಗರದ ಸಂಭಾಜಿ ಸರ್ಕಲ್ನಲ್ಲಿ ಸ್ವತ: ನಿಪ್ಪಾಣಿ ತಹಶೀಲ್ದಾರ ಪ್ರಕಾಶ ಗಾಯಕವಾಡ, ನಗರಸಭೆ ಪೌರಾಯುಕ್ತ ಮಹಾವೀರ ಬೋರನ್ನವರ ಮಾಸ್ಕ ಹಾಕದೇ ಇರುವ ಸಾರ್ವಜನಿಕರನ್ನು ತಡೆದು ದಂಡ ಹಾಕಿರುವ ಘಟನೆ ನಡೆಯಿತು. ಮಂಗಳವಾರ ಮತ್ತು ಬುಧವಾರ ಸುಮಾರು 500 ಕ್ಕಿಂತ ಹೆಚ್ಚಿನ ಬೈಕ್ಗಳನ್ನು ತಡೆದು ದಂಡ ಹಾಕಿ ಸಾರ್ವಜನಿಕರಿಗೆ ಮಾಸ್ಕ ಕುರಿತು ಮನವರಿಕೆ ಮಾಡಿದರು.
ಅದರಂತೆ ಚಿಕ್ಕೋಡಿ ನಗರದಲ್ಲಿಯೂ ಕೂಡಾ ಎರಡನೆ ದಿನವೂ ದಂಡ ಹಾಕುವ ಕಾರ್ಯ ಮುಂದುವರೆದಿದೆ. ಪುರಸಭೆ ಮುಖ್ಯಾಧಿಕಾರಿ ಡಾ, ಸಉಂದರ ರೋಗಿ ನೇತೃತ್ವದಲ್ಲಿ ಬಸವ ಸರ್ಕಲ, ಬಸ್ ನಿಲ್ದಾಣ, ಪುರಸಭೆ ಮುಂಭಾಗದಲ್ಲಿ ಮಾಸ್ಕ ಇಲ್ಲದೇ ಓಡಾಡುವ ವ್ಯಕ್ತಿಗಳಿಗೆ ದಂಡ ಹಾಕುವ ಮೂಲಕ ಬೀಸಿ ಮುಟ್ಟಿಸುತ್ತಿದ್ದಾರೆ.