ಸೌಂದತ್ತಿ

ಮನಸ್ಸಿನಿಂದ ಕೆಟ್ಟ ವಿಚಾರಗಳನ್ನು ತಗೆದು ಹಾಕಿದಾಗ ನೆಮ್ಮದಿ: ಪ್ರಸನ್ನಾನಂದಶ್ರೀ

ಮನಸ್ಸಿನಿಂದ ಕೆಟ್ಟ ವಿಚಾರಗಳನ್ನು ತಗೆದು ಹಾಕಿದಾಗ ನೆಮ್ಮದಿ: ಪ್ರಸನ್ನಾನಂದಶ್ರೀ

ಉಗರಗೋಳ 07: ಶಿಲ್ಪಿಯು ಕಲ್ಲು ಬಂಡೆಯಿಂದ ಬೇಡವಾದ ಭಾಗವನ್ನು ತಗೆದುಹಾಕಿ ಸುಂದರ ಮೂರ್ತಿಯನ್ನು ಕೆತ್ತುವ ಹಾಗೆ ನಾವು ನಮ್ಮ ಮನಸ್ಸಿನಿಂದ ಬೇಡವಾದ ಕೆಟ್ಟ ವಿಚಾರಗಳನ್ನು ತಗೆದು ಹಾಕಿ, ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು ಅದೇ ನೆಮ್ಮದಿಯ ಜೀವನ ಎಂದು ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಮಹಾಸ್ವಾಮಿಗಳು ಹೇಳಿದರು. 

ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಗುರುವಾರ ರಂದು ಆದಿಶಕ್ತಿ ಏಳೂಕೊಳ್ಳದ ಯಲ್ಲಮ್ಮಾ ದೇವಿಯ ದರ್ಶನ ಆಶಿರ್ವಾದ ಪಡೆದುಕೊಂಡು ಪತ್ರಿಕೆಯೊಂದಿಗೆ ಮಾತನಾಡಿದ ಅವರು. ಕಾಮಧೇನು ಕಲ್ಪವೃಕ್ಷ ನೆಲೆಸಿದಂತ ಪುಣ್ಯೆ ಕ್ಷೇತ್ರ ಇದಾಗಿದ್ದು. ಶ್ರೀ ರೇಣುಕಾ ಯಲ್ಲಮ್ಮಾ ದೇವಿಯನ್ನು ಅರಿಸಿ ಬರುವಂತ ಭಕ್ತರು, ಶ್ರ್ರದ್ಧೆ ಭಯ, ಭಕ್ತಿಯಿಂದ ಬೇಡಿಕೊಂಡರೆ ಎಲ್ಲವೂ ಸಿದ್ದಿಯಾಗುತ್ತೆ. ಈ ಕ್ಷೇತ್ರ ಪವಿತ್ರ ಪುಣ್ಯ ಕ್ಷೇತ್ರವಾಗಿದೆ ಎಂದರು. 

ರೇಣುಕಾ ಯಲ್ಲಮ್ಮ ದೇವಸ್ಥಾನ ವತಿಯಿಂದ ಪ್ರಸನ್ನಾನಂದ ಶ್ರೀಗಳನ್ನು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ ಶಾಲೂಹೊದಿಸಿ ಸತ್ಕರಿಸಿದರು. 

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವಾಯ್ ವಾಯ್ ಕಾಳಪ್ಪನವರ, ದೇವಸ್ಥಾನ ಅಧೀಕ್ಷಕಿ ನಾಗರತ್ನಾ ಚೋಳಿನ. ಸವದತ್ತಿ ವಕೀಲರ ಸಂಘದ ಅಧ್ಯಕ್ಷ ಎಮ್ ಎನ್ ಮುತ್ತಿನ, ವಾಲ್ಮೀಕಿ ಸಮಾಜದ ತಾಲೂಕಾ ಅಧ್ಯಕ್ಷ ರಾಘವೇಂದ್ರ ಪೂಜೇರ, ಆರ್ ಎಚ್ ಸವದತ್ತಿ, ಅರುಣ ಹಿರೇಹಾಳ, ಪಿ ಎಮ್ ಸಂಗಮ,ಪಿ ಎಪ್ ಗೋವನಕೊಪ್ಪ, ಪರಸನಗೌಡ ಕಾಳಿಂಗೌಡ್ರ, ಪಂಡಿತ ಯಡೂರಯ್ಯ, ಇತರರು ಇದ್ದರು. 


ಸುದ್ದಿ ಓದಿ