ಎಲ್ಲರ ಒಳಿತಿಗೆ ಪ್ರಾರ್ಥಿಸಿದರೆ ನೆಮ್ಮದಿ ಸಾಧ್ಯ: ಅರ್ಚಕ ರಾಚಾರ್ಯ
ತಾಳಿಕೋಟೆ 01: ನನಗೆ ಮಾತ್ರ ಸುಖ ಶಾಂತಿ ಸಿಗಲಿ ಎನ್ನುವದಕ್ಕಿಂತ ಸರ್ವ ಜನ ಸುಖ ಸಂಪತ್ತಿನಿಂದ ಸಮೃದ್ದವಾಗಿ ಬಾಳಲಿ ಎಂದು ಪ್ರಾರ್ಥಿಸುವದರಿಂದ ಸಂತೃಪ್ತಿಯಿಂದ ಜೀವನ ಸಾಗಿಸಬಹುದು. ಅವರಲ್ಲಿ ನಿಸ್ವಾರ್ಥತೆ ಮನೆ ಮಾಡಿ ನೆಮ್ಮದಿ ಸಿಗಲು ಸಾಧ್ಯವಾಗಲಿದೆ ಎಂದು ತಿರುಪತಿಯ ಅರ್ಚಕ ರಾಚಾರ್ಯ ಹೇಳಿದರು.
ಪಟ್ಟಣದ ಮಾರ್ವಾಡಿ ಸಮಾಜದ ಬಾಲಾಜಿ ಮಂದಿರದಲ್ಲಿ ಬಾಲಾಜಿ ಉತ್ಸವಮೂತರ್ಿ ಪ್ರತಿಷ್ಠಾಪನೆ ಹಾಗೂ ದೇವಾದಿ ದೇವತೆಗಳ ಮೂರ್ತಿ ಪ್ರತಿಷ್ಠಾಪನೆಯ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾರ್ವಾಡಿ ಸಮಾಜ ಬಾಂಧವರು ತಮ್ಮದೆಯಾದ ವ್ಯವಹಾರ ಉದ್ಯೋಗವನ್ನು ತೊಡಗಿಸಿಕೊಂಡು ಜನಪ್ರೀಯತೆ ಗಳಿಸಿಕೊಂಡು ಬಂದವರಾಗಿದ್ದಾರೆ. ಯಾವುದೇ ನಗರ ಪಟ್ಟಣದಲ್ಲಿಯ ಜನತೆ ಅಲ್ಲಿರತ್ತಕ್ಕಂತಹ ಮಾರ್ವಾಡಿ ಜನರ ಮೇಲೆ ಪ್ರೀತಿ ವಿಶ್ವಾಸದೊಂದಿಗೆ ಸಾಗಿರುವು ಹೆಮ್ಮೆಯ ವಿಷಯವಾಗಿದೆ. ಎಲ್ಲರಲ್ಲಿ ಸದಾ ದೇವ ಶಕ್ತಿ ಇರಲಿ ಇದರಿಂದ ದೇವ ಒಲುಮೆಯಾಗಿ ಸುಖ ಸಂಪತ್ತು ಲಭಿಸುವುದರಲ್ಲಿ ಯಾವ ಸಂಶಯವಿಲ್ಲ ಕಾರಣ ವಸುದೇವ ಕುಟುಂದವರಾದ ನಾವೇಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ನಡೆಯಬೇಕು ಎಂದರು.
ಮೂಲ ಬಾಲಾಜಿ ಮಹಾಮೂರ್ತಿಗೆ ಬಿಲ್ವಾರ್ಛನೆ, ಪುಷ್ಪಾರ್ಚನ ಮಹಾಮಂಗಳಾರತಿಯೊಂದಿಗೆ ಇತ್ತೀಚೆಗೆ ತರಲಾದ ಉತ್ಸವ ಮೂರ್ತಿಗಳಾದ ಶ್ರೀನಿವಾಸ, ಶ್ರೀದೇವಿ, ಗೊದಾಮಾತಾ, ಸುದರ್ಶನ, ನರಸಿಂಹ, ರಾಮಾನುಜಾಚಾರ್ಯರ ಮೂರ್ತಿಗಳಿಗೆ ಪಂಚಸೂಕ್ತ ಹೋಮ, ಸುದರ್ಶನ ಹೋಮ ಮಾಡಿ ವಿಷ್ಣುಪಾರಾಯಣ ಹೋಮ ಹವನ ಕಾರ್ಯಕ್ರಮ ನಡೆಸಿ ಮಹಾಪೂಜೆಗೆಯಲಾಯಿತು. ನೇಪಾಳದಿಂದ ತರಲಾದ ಲಕ್ಷ್ಮಿನಾರಾಯಣ ಸಾಲಿಗ್ರಾಮ ಪ್ರತಿಷ್ಠಾಪಿಸಲಾಯಿತು. ನಂತರ ಪಲ್ಲಕಿ ಸೇವೆಯೊಂದಿಗೆ ಎಲ್ಲ ಕ್ತಸಮೂಹಕ್ಕೆ ಮಹಾಪ್ರಸಾದ ವಿತರಿಸಲಾಯಿತು.
ಮಾರ್ವಾಡಿ ಸಮಾಜದ ಅಧ್ಯಕ್ಷ ಶ್ರೀರಂಗ ಅಗರವಾಲ ಹಾಗೂ ಹಿರಿಯ ಡಾ.ಪರಶುರಾಮ ಆಗರವಾಲ, ಓಂಪ್ರಕಾಶ ತಿವಾಡಿ, ಮಹಾಬೀರ ಅಗರವಾಲ, ಸುಾಸ ಅಗರವಾಲ, ಪ್ರಮೋದ ಆಗರವಾಲ, ರಾಮವತಾರ ರಾಮಸ್ವರೂಪ ಅಗರವಾಲ, ರತ ಅಗರವಾಲ, ಡಾ.ರವಿ ಅಗರವಾಲ, ಶ್ರವಣಕುಮಾರ ಅಗರವಾಲ, ಪವನ ಅಗರವಾಲ, ಚಿಂಟು ಅಗರವಾಲ, ಬಾಲಕೃಷ್ಣ ಅಗರವಾಲ, ಅಮಿತ ಅಗರವಾಲ, ಸವಿತಾ ಅಗರವಾಲ, ನಿರ್ಮಲ ಅಗರವಾಲ, ಜೋತಿ ಅಗರವಾಲ, ಬಬಿತಾ ಅಗರವಾಲ, ನೀತು ಅಗರವಾಲ, ಮೀರಾ ಅಗರವಾಲ, ಡಾ.ಮು ಅಗರವಾಲ, ಮನೋಜ ಗುಪ್ತಾ, ಪಪ್ಪು ಅಗರವಾಲ, ಮಹೇಂದ್ರ ಆಗರವಾಲ, ವಿಕ್ರಮ ಅಗರವಾಲ, ನರೆಂದ್ರ ಅಗರವಾಲ, ಅವರನ್ನೊಳಗೊಂಡು ಅಸಂಖ್ಯಾತ ಸಮಾಜಭಾಂದವರು ಪಾಲ್ಗೊಂಡು ಕಾರ್ಯಕ್ರಮದಲ್ಲಿ ಕ್ತಿಾವ ಮೆರೆದರು.