ಪವೀತ್ರಾ ಕೋಣ್ಣೂರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ರಾಜ್ಯಕ್ಕೆ 21ನೇ ರಾ್ಯಂಕ
ಮುದ್ದೇಬಿಹಾಳ 09: ಪಾಲಕರು ಬರಿ ಖಾಸಗಿ ಶಿಕ್ಷಣ ಸಂಸ್ಥೆಗಳ ದೂಂಬಾಲು ಬಿದ್ದು ಸರಕಾರಿ ಶಾಲೆಗಳೆಂದರೇ ನಿರ್ಲಕ್ಷ ಭಾವನೆಯಿಂದ ನೋಡಿತ್ತಿರುವ ಇಂದಿನ ಕಾಲಘಟ್ಟದಲ್ಲಿ ತಾಲೂಕಿನ ಢವಳಗಿ ಗ್ರಾಮದ ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಮಡಿವಾಳಪ್ಪ ಕೋಣ್ಣೂರ ಅವರ ಪುತ್ರಿ ಸರಕಾರಿ ಆರ್.ಎಮ್.ಎಸ್.ಎ. ಶಾಲೆಯ ವಿದ್ಯಾರ್ಥಿನಿ ಪವೀತ್ರಾ ಕೋಣ್ಣೂರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಪಡೆದು ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ರಾಜ್ಯಕ್ಕೆ 21ನೇ ರಾ್ಯಂಕ ಪಡೆಯುವ ಮೂಲಕ ಜಿಲ್ಲೆಯ ಹಾಗೂ ಮುದ್ದೇಬಿಹಾಳ ತಾಲೂಕಿನ ಕೀರ್ತಿ ಬೆಳಗಿಸಿದ ಹಿನ್ನೇಲೆಯಲ್ಲಿ ಆರ್.ಎಂ.ಎಸ್.ಎ ಶಾಲೆಯ ಮುಖ್ಯಶಿಕ್ಷಕಿ ನೀಲಮ್ಮ ತೆಗ್ಗಿನಮಠ ಹಾಗೂ ಶಿಕ್ಷಕರು ವಿದ್ಯಾರ್ಥಿನಿ ಪವೀತ್ರಾ ಕೋಣ್ಣೂರಗೆ ಸಿಹಿ ತಿನ್ನಿಸಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ವಿದ್ಯಾರ್ಥಿನಿ ಪವೀತ್ರಾ ಕೋಣ್ಣೂರ ಸುದ್ದಿಗಾರರೊಂದಿಗೆ ಮಾತನಾಡಿ ಸರಕಾರಿ ಆರ್.ಎಂ.ಎಸ್.ಎ ಶಾಲೆಯ ಮುಖ್ಯಗುರುಮಾತೆ ನೀಮಮ್ಮ ತೆಗ್ಗಿನಮಠ ಮಾತಾಜಿಯವರು ಹಾಗೂ ನನಗೆ ಬೋಧನೆ ಮಾಡಿದ ಎಲ್ಲ ಶಿಕ್ಷಕರಿಗೆ ಮುಖ್ಯ ನನ್ನನ್ನು ಹೆತ್ತ ಬೆಳೆಸಿದ ತಂದೆ ತಾಯಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ನನ್ನ ತಂದೆಯವರು ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಈ ಮದ್ಯೆ ಶಿಕ್ಷಣದಲ್ಲಿ ಯಾವೂದೇ ತೊಂದರೆಯಾಗದಂತೆ ಗಂಡು ಮಗನಂತೆ ಪ್ರೀತಿಸಿ ವಿದ್ಯೆ ಕಲಿಸಲು ಶ್ರಮವಹಿಸಿದ್ದಾರೆ. ಜೊತೆಗೆ ನಾನು ಹೆಣ್ಣಾಗಿದ್ದರೂ ಸಹಿತ ಮನೆಯಲ್ಲಿ ನನಗೆ ಯಾವೂದೇ ಒಂದು ಕೆಲಸಕ್ಕೂ ಹಚ್ಚದೇ ವಿದ್ಯೆ ಕಲಿತು ವಿದ್ಯಾವಂತಳಾಗಿ ಬೆಳೆದು ನಿಲ್ಲಬೇಕು ಎಂದು ನನ್ನ ತಾಯಿ ಭಾರತಿ ಕೋಣ್ಣೂರ ಅವರು ಸಂಪೂರ್ಣ ಸ್ಫರ್ತೀಯಾಗಿದ್ದಾರೆ ಇಂದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಬೇಕಾದರೇ ನನ್ನ ಹೆತ್ತವರ ಹಾಗೂ ಎಲ್ಲ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ.
ಯಾರೇ ಆಗಲಿ ಸಮಯ ವ್ಯರ್ಥ ಹಾಳುಮಾಡಿಕೊಳ್ಳದದೇ ಕಠೀಣ ಪರೀಶ್ರಮದಿಂದ ಸದಾ ಓದುವುದು ಮತ್ತು ಶಾಲೆಯಲ್ಲಿ ಗುರುಗಳು ಹೇಳಿದ ಪಾಠದ ಬಗ್ಗೆ ಹೆಚ್ಚು ಮನಸ್ಸು ಕೇಂದ್ರಿಕರಿಸುವ ಮೂಲಕ ಕಂಠಪಾಠ ಮಾಡಿ ಆಭ್ಯಾಸ ಮಾಡಿದರೇ ಇಂತಹ ಸಾಧನೆಗಳನ್ನು ಸಾಧಿಸಲು ಸಾಧ್ಯ ಎಂದಳು
ಸಧ್ಯ ನಾನು ಎಸ್.ಎಸ್.ಎಲ್.ಸಿ ಯಲ್ಲಿ ಹೇಗೆ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದೇನೋ ಅದೇ ರೀತಿಯಲ್ಲಿ ಮುಂಬರುವ ದಿನಗಳಳ್ಲಿ ಪಿಯುಸಿ ಸಾಯನ್ಸ್ ಓದಿ ವೈದ್ಯಳಾಗಿ ಸಾಮಾಜಿ ಸೇವೆ ಮಾಡುವ ಮೂಲಕ ನನ್ನ ಹೆತ್ತವರ ಕನಸು ನನಸು ಮಾಡುವ ಗುರಿ ಹೊಂದಿದ್ದೇನೆ ಎಂದಳು.
ಈ ವೇಳೆ ವಿದ್ಯಾರ್ಥಿನಿ ಪವೀತ್ರಾ ಕೋಣ್ಣೂರ ತಂದೆ ಮಡಿವಾಳಪ್ಪ ಕೋಣ್ಣೂರ ಅವರು ಮಾತನಾಡಿ ನಿತ್ಯ ನಾನು ಕಂಡಕ್ಟರಾಗಿ ಸೇವೆ ಸಲ್ಲಿಸುತ್ತಲೇ ಮಗಳು ವಿದ್ಯಾವಂತಳಾಗಬೇಕು ಅವಳನ್ನು ಕೆ ಎ ಎಸ್ ಮಾಡಿಸಬೇಕು ಎಂಬ ಕನಸು ನಮ್ಮದಾಗಿದೆ ಆದರೇ ಮಗಳ ಇಷ್ಟದಂತೆ ಓದಿಸಲು ಉನ್ನತ ಮಟ್ಟದ ಶಿಕ್ಷಣ ಕೊಡಿಸಲು ಎಷ್ಟೇ ಹಣ ಕರ್ಚಾದರು ಮಗಳ ಶಿಕ್ಷಣದ ಭವಿಷ್ಯಕ್ಕಾಗಿ ನಾನು ಸದಾ ಸಿದ್ಧನಿದ್ದೇನೆ ಸರಕಾರಿ ಶಾಲೆಯ ಮಕ್ಕಳ ಧಡ್ಡರು ಎಂದು ಬಿಂಬಿಸುತ್ತಿರುವ ಇಂದಿನ ದಿನಗಳಲ್ಲಿ ಸರಕಾರಿ ಆರ್ ಎಮ್ ಎಸ್ ಎ ಶಾಲೆಯಲ್ಲಿ ಓದಿ ಅತಿ ಹೆಚ್ಚು ಅಂಕಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು ಸಾಧಿಸಿ ತೊರಿಸಿದ್ದು ಹೆಮ್ಮೆ ತಂದಿದೆ ಎಂದರು.
ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ, ಆರ್.ಎಂ.ಎಸ್.ಎ ಶಾಲೆಯ ಮುಖ್ಯಶಿಕ್ಷಕಿ ನೀಲಮ್ಮ ತೆಗ್ಗಿನಮಠ, ಶಿಕ್ಷಣ ಸಂಯೋಜಕ ಎಸ್.ಎ.ಮೇಟಿ, ಎಸ್.ಬಿ. ಸಜ್ಜನ, ಎಸ್.ಆರ್ ಪಾಟೀಲ, ಸೇರಿದಂತೆ ಹಲವರು ಇದ್ದರು.
ಶಾಸಕರ ಮೆಚ್ಚುಗೆ
ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಸುದ್ದಿಗಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಾಲೂಕಿನ ಢವಳಗಿ ಗ್ರಾಮದ ವಿದ್ಯಾರ್ಥಿನಿ ಸರಕಾರಿ ಆರ್.ಎಮ್.ಎಸ್.ಎ. ಶಾಲೆಯ ಪವೀತ್ರಾ ಕೋಣ್ಣೂರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಪಡೆದು ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ರಾಜ್ಯಕ್ಕೆ 21ನೇ ರಾ್ಯಂಕ ಪಡೆಯುವ ಮೂಲಕ ಜಿಲ್ಲೆಯ ಹಾಗೂ ಮುದ್ದೇಬಿಹಾಳ ತಾಲೂಕಿನ ಘನತೆಯನ್ನು ಎತ್ತಿ ಹಿಡಿದ್ದಾಳೆ, ಮುಂದಿನ ಅವಳ ವಿದ್ಯಾರ್ಥಿ ಜೀವನ ಇದೇ ರೀತಿ ಸಾಧನೆ ಮಾಡುವ ಮೂಲಕ ದೇಶದ ಅತ್ಯನ್ನತ ಹುದ್ದೇಗಳನ್ನು ಅಲಂಕರಿಸಿ ಹೆತ್ತವರ ಹಾಗೂ ವಿದ್ಯೆ ದಾನ ಮಾಡಿದ ಗುರುಗಳ ಗೌರವ ತಂದುಕೊಡುವಂತಾಗಲಿ ಜೊತೆಗೆ ಈ ಬಾರಿ ತಾಲೂಕಾ ಕ್ಷೇತ್ರ ಶಿಕ್ಷಣ ಇಲಾಖೆ ಉತ್ತಮವಾಗಿ ಯಾವೂದೇ ತೊಂದರೆಯಾಗದಂತೆ ಸುವ್ಯವಸ್ಥಿತವಾಗಿ ಪರೀಕ್ಷೇ ನಡೆಯುವಂತೆ ಮಾಡಿದ್ದಲ್ಲದೇ ಈ ರೀತಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದು ಶುಭಹಾರೈಸಿದರು.