ಹಗರಿಬೊಮ್ಮನಹಳ್ಳಿ

ಧಾರ್ಮಿಕ ಹಕ್ಕುಗಳ ಉಲ್ಲಂಘನೆ : ಪತ್ರೇಶ್ ಅಕ್ರೋಶ

ಧಾರ್ಮಿಕ ಹಕ್ಕುಗಳ ಉಲ್ಲಂಘನೆ : ಪತ್ರೇಶ್ ಅಕ್ರೋಶ

ಹಗರಿಬೊಮ್ಮನಹಳ್ಳಿ.ಫೆ.26 : ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಮೈಲಾರ, ಕುರುವತ್ತಿ, ಕೊಟ್ಟೂರು, ಕೂಲಹಳ್ಳಿ ಜಾತ್ರೆ ಮತ್ತು ಕಾರಣಿಕಗಳನ್ನು ಕೋವಿಡ್ 19 ನೆಪವೊಡ್ಡಿ ರದ್ದುಪಡಿಸಿ ಜಿಲ್ಲಾಧಿಕಾರಿ ಆದೇಶ ಹಾಗೂ  ಭಕ್ತರ ಭಾಗವಹಿಸುವಿಕೆಯನ್ನು ತಡೆಯಲು ಚೆಕ್ ಪೋಸ್ಟ್ ನಿರ್ಮಿಸಿರುವುದು ಭಕ್ತರ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಕೋರೋನಾ ಸೋಂಕು ಕಡಿಮೆಯಾಗಿದ್ದು ಜನತೆ ಭಕ್ತಿಭಾವ ಮತ್ತು ಶ್ರದ್ಧೆಯಿಂದ ಆಚರಿಸುವ ಬಹು ವರ್ಷಗಳ ದೇವಿ ಉತ್ಸವ ಹಾಗೂ ಜಾತ್ರೆಗಳನ್ನು ರದ್ದು ಮಾಡುವ ಮೂಲಕ ಜನರ ಭಾವನೆಗಳಿಗೆ ಘಾಸಿ ಉಂಟು ಮಾಡುವ ಪ್ರಯತ್ನ ಇದಾಗಿದೆ,

ಒಂದು ಕಡೆ ಲಕ್ಷಾಂತರ ಜನ ಸೇರಿ ಸಮಾವೇಶ ಮತ್ತು ಪಾದಯಾತ್ರೆ ಮಾಡಲು ಅನುಮತಿ ನೀಡುವ ನೀವು ಜಾತ್ರೆಗಳನ್ನು ರದ್ದು ಮಾಡುತ್ತಿರುವುದು ನ್ಯಾಸಮ್ಮತವೇ? ಸಮಾವೇಶ ಪಾದಯಾತ್ರೆಯಲ್ಲಿ ಹರಡದ ಕೋರೋನಾ ಸೋಂಕು ಜಾತ್ರೆ, ರಥೋತ್ಸವಗಳಲ್ಲಿ ಹೇಗೆ ಹರಡುತ್ತದೆ ಎಂದು ಪ್ರಶ್ನಿಸಿದರು.ಮಿಠಾಯಿ ಅಂಗಡಿ, ಸರ‍್ಕಸ್ ಕಂಪನಿ, ಮಕ್ಕಳಾಟಕೆ ಅಂಗಡಿ, ತೆಂಗಿನಕಾಯಿ ಮತ್ತು ಹಣ್ಣು ಹಾಗೂ ಬಳೆ ವ್ಯಾಪಾರಿಗಳು ಹಾಗೂ ನಾಟಕ ಕಂಪನಿ ಕಲಾವಿದರ ಜೀವನಾಧಾರಿತವೇ ಈ ಜಾತ್ರೆಗಳಾಗಿದ್ದು ಜಿಲ್ಲಾಧಿಕಾರಿಗಳ ಈ ನಿರ್ಧಾರದಿಂದ ಜಾತ್ರಯನ್ನೆ ನಂಬಿ ಬದುಕು ನಡೆಸುವ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ ಇವರೆಲ್ಲರಿಗೂ ವ್ಯಾಪಾರ ಮತ್ತು ಪ್ರದರ್ಶನಕ್ಕೆ ಅವಕಾಶ ನೀಡಲು ಮತ್ತು ಭಕ್ತರು ಭಾಗವಹಿಸಲು ಅವಕಾಶ ನೀಡಲು ಜಿಲ್ಲಾಧಿüಕಾರಿಗಳಿಗೆ ಸೂಚಿಸಲು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಪತ್ರೇಶ್ ತಿಳಿಸಿದರು.



ಸುದ್ದಿ ಓದಿ