ಇಂಡಿ

ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳ ಧ್ವನಿ ಎತ್ತಿದ ಪಾಟೀಲ

ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳ ಧ್ವನಿ ಎತ್ತಿದ ಪಾಟೀಲ

ಚಳಿಗಾಲ ಅಧಿವೇಶನಲ್ಲಿ 

ಇಂಡಿ: ಇಂಡಿ ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಬೆಳಗಾವಿಯ ಚಳಿಗಾಲ ಅಧಿವೇಶನಲ್ಲಿ ಧ್ವನಿ ಎತ್ತಿದರು.  

ಸತತ ಅತಿವೃಷ್ಟಿ ಅನಾವೃಷ್ಟಿಯಿಂದ ನಮ್ಮ ರೈತರು ನಮ್ಮ ತಾಲೂಕಿನ ಜನ ಕುಡಿಯುವ ನೀರು ಪರಿತಪಿಸವಂತಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು ನಮ್ಮ ಪಾಲಿನ ನೀರು ಹಂಚಿಕೆ ಮಾಡಬೇಕು.ಈ ನೀರಾವರಿ ಯೋಜನೆ ಕುರಿತು  ಕಳೆದ ಎರಡು ವರ್ಷದಿಂದ ಪ್ರಶ್ನೆ ಕೇಳುತ್ತಾ ಬಂದಿದ್ದೇನೆ. ಕುಡಿಯುವ ನೀರಿನ ತೀವೃ ತೊಂದರೆ ಅನುಭವಿಸುವಂತ ಪ್ರದೇಶ ನಮ್ಮದಾಗಿದ್ದು, ಅಂತಹ ಪ್ರದೇಶಕ್ಕೆ ನೀರು ಬಂದರೆ ರೈತರಿಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಅನುಕೂಲವಾಗುತ್ತದೆ. ಈ ಕುರಿತು ಸದನದಲ್ಲಿ ಅರ್ಧ ಘಂಟೆಯವರೆಗೆ ಚರ್ಚೆ ಕೂಡಾ ನಡೆದಿದ್ದು ಮಾಸ್ಟರ ಪ್ಲ್ಯಾನ ಕಮಿಟಿಯಲ್ಲಿ ನಿಗದಿ ಪ್ರಕಾರ ನಮಗೆ ನೀರು ಹಂಚಿಕೆ ಮಾಡಿ ಎಂದು ಸಭಾ ಅಧ್ಯಕ್ಷರಿಗೆ ಮನವಿ ಮಾಡಿದರು. 

ಇದಕ್ಕೆ ಉತ್ತರಿಸಿದ ನೀರಾವರಿ ಸಚಿವ  ಸಚಿವ ಗೋವಿಂದ ಕಾರಜೋಳ ಇಂಡಿ ಭಾಗದ ನೀರಾವರಿ ಯೋಜನೆಗೆ 3ಸಾವಿರಕ್ಕೂ ಅಧಿಕ ಕೊಟಿ ಹಣ ವ್ಯಯವಾಗಲಿದ್ದು ನೀರಾವರಿ ಯೊಜನೆಗಳಿಗೆ ಹಂತ ಹಂತವಾಗಿ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. 


ಸುದ್ದಿ ಓದಿ