ಬಳ್ಳಾರಿ

ಪಕ್ಷಗಳು ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ, ಯುವಜನರ ಬೇಡಿಕೆಗಳನ್ನು ಸೇರಿಸಲಿ: ಹುಸೇನ್ ಭಾಷಾ

ಪಕ್ಷಗಳು ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ, ಯುವಜನರ ಬೇಡಿಕೆಗಳನ್ನು ಸೇರಿಸಲಿ: ಹುಸೇನ್ ಭಾಷಾ

ಬಳ್ಳಾರಿ:ಮಾ 21: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ - ಯುವಜನರ ಬೇಡಿಕೆಯ ವಿಚಾರಗಳನ್ನು ಸೇರಿಸಬೇಕು. ಮತ್ತು ಯುವಜನರ ಮತಗಳು ನಿರ್ಣಯಿಸುವಂತೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಜನಾಭಿಪ್ರಾಯ ಮೂಡಿಸಬೇಕು. ನಮ್ಮ ಸಂಘಟನೆಯ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಢಿ ಮತ್ತು ಬದ್ಧತೆಯನ್ನು ಖಚಿತ ಪಡಿಸಬೇಕು ಎಂದು ಎಸ್‌.ಐ.ಓ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳನ್ನು ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆ, ಜಿಲ್ಲಾ ಘಟಕದ ಮುಖಂಡ ಹುಸೇನ್ ಬಾಷಾ ಅಗ್ರಹಿಸಿದರು. 

 ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಸಂಘದ ಮುಖಂಡರುಗಳು, ಅನುಚ್ಛೇದ 21ರ  ಮೂಲಕ ಶಿಕ್ಷಣ ಸಂವಿಧಾನಬದ್ಧ ಮೂಲಭೂತ ಹಕ್ಕಾಗಿದೆ. ಸರ್ಕಾರದ ಸ್ವಾಮ್ಯದಿಂದ ಈ ಹಕ್ಕು ದಿನೇ ದಿನೇ ದುರ್ಬಳಕೆಯಾಗುತ್ತಿರುವದು, ಶೋಚನೀಯ, ಮೂಲಭೂತ ಹಕ್ಕುಗಳು ಇವತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ದುರಂತವಾಗಿದೆ.ಇಂತಹ ಕಾಲದಲ್ಲಿ ಸಂವಿಧಾನದ ಮೂಲಭೂತ ಹಕ್ಕನ್ನು ಖಾತರಿಪಡಿಸಿದ ಶಿಕ್ಷಣದ ಹಕ್ಕನ್ನು (’ಆರ್ಟಿಇ’ಯನ್ನು) ಸಮರ​‍್ಕವಾಗಿ ಜಾರಿ ಮಾಡಬೇಕೆಂದರು.   

ಪೂರ್ವ ಪ್ರಾಥಮಿಕ ಶಿಕ್ಷಣದ ಅಭ್ಯಾಸಿಸುವ ಮಕ್ಕಳ  ಅಪೌಷ್ಟಿಕತೆ ನಿವಾರಣೆ ಮತ್ತು ಕಲಿಕಾ ಪ್ರಕ್ರಿಯೆಯತ್ತ ತಯಾರುಗೊಳಿಸುವ ಅಂಗನವಾಡಿ  ವ್ಯವಸ್ಥೆಯನ್ನು ಸಶಕ್ತಗೊಳಿಸಿ,  ಗ್ರಾಮೀಣ ಮಕ್ಕಳ ಮತ್ತು ವಲಸೆ ಹಾಗೂ ಅಸಂಘಟಿತ ಕಾರ್ಮಿಕರ ಮಕ್ಕಳ ಶಾಲಾ ಹೊರಗುಳಿಯುವಿಕೆ (ಡ್ರಾಪ್ ಓಟ್) ಯನ್ನು ತಡೆಗಟ್ಟಿ  ಮಕ್ಕಳ ಶಾಲಾ ದಾಖಲಾತಿಯನ್ನು ಹೆಚ್ಚಿಸಬೇಕು.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ವಿದ್ಯಾರ್ಥಿ ವೇತನ ಮತ್ತು ಶಾಲಾ ಸಮವಸ್ತ್ರ ದಂತಹ ಯೋಜನೆಗಳನ್ನು ಸಕಾಲಕ್ಕೆ ನೀಡಿ, ಶಾಲಾ ಕಾಲೇಜುಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಮತ್ತು ಸೂಕ್ತ ಕಲಿಕಾ ಸಂಪನ್ಮೂಲ ಒದಗಿಸುವ ಮೂಲಕ ಶಾಲಾ ಚಟುವಟಿಕೆಗಳಲ್ಲಿನ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಗೆ ಕಲಿಕಾ ವಾತಾವರಣವನ್ನು ಕಲ್ಪಿಸಬೇಕು. ಹಾಗೂ ಶಿಕ್ಷಣ ಇಲಾಖೆಯಲ್ಲಿ ಖಾಲಿಯಿರುವ ಸುಮಾರು 50ಅ ಶಿಕ್ಷಕರ ಹುದ್ದೆಗಳು ಭರ್ತಿಮಾಡಬೇಕೆಂದರು.     

ಸರ್ಕಾರದ ವಾರ್ಷಿಕ  ಬಜೆಟ್ ಹಂಚಿಕೆಯಲ್ಲಿ ಕೊಠಾರಿ ಆಯೋಗದ ಶಿಫಾರಸ್ಸಿನನ್ವಯ ರಾಜ್ಯದ ಉನ್ನತ ಶಿಕ್ಷಣದ ವ್ಯವಸ್ಥೆಯು ತೀರಾ ಚಿಂತಾಜನಕವಾಗಿದ್ದು, ರಾಜ್ಯದ ಬಹುತೇಕ ವಿ ವಿ ಗಳು ಸರ್ಕಾರದ ಸರಿಯಾದ ಅನುದಾನ ಮತ್ತು ನಿರ್ವಹಣೆ ಇಲ್ಲದೇ, ಅವುಗಳು ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ವಿಫಲವಾಗಿವೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ವಿವಿ ಗಳ ಸೂಕ್ತನಿರ್ವಹಣೆಗಾಗಿ ಮತ್ತು ಉನ್ನತೀಕರಣಕ್ಕಾಗಿ ವಿಶೇಷ ಗಮನ ಹರಿಸುವುದು ಅಗತ್ಯವಿದೆ ಎಂದರು.   

ನಮ್ಮ ಸಂಘಟನೆ 2020ರಲ್ಲಿ ಪ್ರಸ್ತಾಪಿಸಿದಂತೆ ವಿದೇಶಿ ಖಾಸಗಿ ವಿವಿಗಳನ್ನು ಭಾರತದಲ್ಲಿ ಹೊಸದಾಗಿ ಆರಂಭಿಸುವುದಕ್ಕಿಂತ ಚಾಲ್ತಿಯಲ್ಲಿರುವ ವಿವಿಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸಲು  ವಿದೇಶ ಪ್ರಾಧ್ಯಾಪಕರನ್ನು ವಿಶೇಷ ಅಥವಾ ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಬೇಕು. ಹಾಗೂ ರಾಜ್ಯದ ಮಟ್ಟದ ಮತ್ತು ಕೇಂದ್ರಿಯ ವಿವಿಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿ, ಇಲ್ಲಿನ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ರಾಜಕೀಯ ಪಕ್ಷಗಳನ್ನು ಒತ್ತಾಯಿಸಿದರು.   

ಶಾಲಾ-ಕಾಲೇಜು ಕ್ಯಾಂಪಸ್ ಗಳು ದೇಶದ ಭವಿಷ್ಯ ರೂಪಿಸುವ ತಾಣಗಳಾಗಿವೆ.ಇಂತಹ ಕ್ಯಾಂಪಸ್ ಗಳಲ್ಲಿ ಜಾತಿ ಮತ್ತು ಧರ್ಮದ ನಿಂದನೆ ಹಾಗೂ ತಾರತಮ್ಯದಂತಹ ಅನೇಕ ಘಟನೆಗಳು ಇತ್ತಿಚೆಗೆ ವರದಿಯಾಗುತ್ತಿರುವುದು ಆಘಾತಕಾರಿ, ಇದನ್ನು ತಡೆಹಿಡಿಯಲು ಮತ್ತು ಪರಸ್ಪರರ ನಡುವೆ ಸಹೋದರತೆ ಹಾಗೂ ಸಾಮರಸ್ಯವನ್ನು ಬಲಿಷ್ಟಗೊಳಿಸಬೇಕಿದೆ. ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ರಾಜ್ಯದಲ್ಲಿ ಶೈಕ್ಷಣಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಪ್ರಾರಂಭಿಸಿ, ಆ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ಉನ್ನತ ಶಿಕ್ಷಣದಲ್ಲಿನ ಸಾಮಾನ್ಯ ದಾಖಲಾತಿ ಅನುಪಾತ 2019-20 ರಲ್ಲಿ 32ಅ ಇದ್ದು, ಅದನ್ನು ಹೆಚ್ಚಿಸಲು ಮತ್ತು ಉನ್ನತ ಶಿಕ್ಷಣದತ್ತ ವಿದ್ಯಾರ್ಥಿಗಳನ್ನು ಆಕರ್ಷಿಸುವಂತ ಯೋಜನೆಗಳನ್ನು ರೂಪಿಸಬೇಕೆಂದರು.  

ಈ ಸಂದರ್ಭದಲ್ಲಿ ಎಸ್‌.ಐ,ಒ ಮುಖಂಡರಾದ ಹುಸೇನ್ ಭಾಷಾ ನಾಲಬಂದ್, ಮಹಮ್ಮದ್ ಅಮರ್, ಸುಮಾನ್, ಗುಲ್ಪಾಮಾ ಅಲಿ, ಸೋಹೇಲ್ ಅಮರ್ ಸೇರಿದಂತೆ ಸದಸ್ಯರು ಇನ್ನು ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ